ಈ ಪುಟವನ್ನು ಪರಿಶೀಲಿಸಲಾಗಿದೆ

೨೬೮ ಚಿರಸ್ಮರಣೆ
ಆ ಪರಿಸ್ಥಿತಿಯಲ್ಲೂ ಅಬೂಬಕರ್‌ಗೆ ನಗು ಬಂತು.
“ಒಳ್ಳೇ ಅಮ್ಮ! ಓದಿದರೆ ಬಬ್ಬಹುದಾ?"
ತನಗೆ ಅವಮಾನವಾಯಿತೆಂದು ಬೂಬಮ್ಮನೆಂದಳು:
“ಓದಿದರೆ ಯಾಕ ಬಯ್ತೇನೆ ನಾನು? ಓದಿ ಓದಿ ಊರು ಬಿಡಬಾರ್‍ದೂಂತ
ಹೊಟ್ಟೆ ಸಂಕಟಕ್ಕೆ ಏನಾದರೂ ಅನ್ತೇನೆ ಒಮ್ಮೆಮ್ಮೆ.
“ಅದೇನೋ ಸರೀನೆ ಅಮ್ಮ, ಅಬ್ದುಲ್ಲನಿಗೂ ಅಷ್ಟು ಗೊತ್ತಾಗೋದಿಲ್ವ?"
ಬೂಬಮ್ಮ ಅಬ್ದುಲನನ್ನ ಬರಸೆಳೆದು ಹಿರಿಯ ಮಗನತ್ತ ನೋಡಿ ಅಂದಳು:
“ನಿನಗೆ ತಿಂಡಿ ತಂದಿದ್ದೆ. ಆದರೆ ಅವನ್ನು ಒಳಗೆ ಬಿಡಲಿಲ್ಲ.*
“ನೀನು ಬಂದೆಯಲ್ಲಮ್ಮ, ಅದೇ ಸಾಕು!"
ಆ ಮಾತು ಕೇಳಿದೊಡನೆಯ ತಾನು ಬಂದ ಸಂದರ್ಭ ನೆನಪಾಗಿ ಬೂಬಮ್ಮ
ಸಂಕಟ ತಡೆಯಲಾರದೆ ಅಳತೊಡಗಿ ಸರಕಾರವನ್ನು ಶಪಿಸಿದಳು.
ಅಬೂಬಕರ್ ತಾಯಿಯನ್ನು ಸಂತವಿಸುತ್ತ ಹೇಳಿದ:
“ನಾಳ ದಿನ ಯಾರಾದರೂ ನಿನ್ನ ದೊಡ್ಡ ಮಗ ಏನಾಗಿದ್ದಾಂತ ಕೇಳಿದರೆ
ಏನ್ಹೇಳ್ತಿಯಾ?”
“ನನಗೆ ಗೊತ್ತಿಲ್ವ? ಬೀಡಿ ಕೆಲಸಗಾರನಾಗಿದ್ದಾಂತ ಹೇಳ್ತೇನೆ..."
ಹಾಗೆ ಅನ್ನುತ್ತಿದ್ದಂತೆಯೇ, ಮಗ ಎಷ್ಟೋ ಸಾರ ಹೇಳಿದ್ದುದು ನೆನಪಾಗಿ
ಆಕೆಯೆಂದಳು:
"ಸಂಘದ ದಳಕ್ಕೆ ನಾಯಕನಾಗಿದ್ದಾಂತಲೂ ಹೇಳ್ತೇನೆ.”
"ಭೇಷ್ ಅಮ್ಮ ! ಆಗ ನಿನಗೆ ಜನರು ಗೌರವ ಕೊಡ್ತಾರೆ."
ತಾಯಿ ಮಗನಿಗೊಂದು ಗುಟ್ಟು ಹೇಳಿದಳು:
"ಈಗಲೂ ಹಾಗೆ ಕಣೋ, ಮೊದಲು ಬೂಬಮ್ಮನ್ನ ಯಾರು
ಮಾತಾಡಿಸ್ತಿದ್ರು? ಈಗ ಎಲ್ಲೂ ಸುಖದುಃಖ ವಿಚಾರಿಸೋರೆ.... ಆದರೂ ನೀನು
ಅವರ ಕೈಗೆ ಸಿಗಬಾರಿತ್ತು ಮಗ....”
"ನಾನು ಯಾವಾಗೂ ನಿನ್ನ ಪಕ್ಕದಲ್ಲೆ ಇರ್‍ತೇನಂತ ಯೋಚಿಸ್ಕೊಮ್ಮ
“ಅಬ್ದುಲ್ಲ ಅಣ್ಣನಿಗೆ ಹೇಳಿದ:
“ಅಮ್ಮ ಎಷ್ಟೋ ಸಲ ನನ್ನನ್ನೇ ಅಬೂಬಕರ್ ಅಂತ ಕೂಗ್ತಾಳೆ."
"ಹೌದಾ! ನೀನು ಜಾಣ, ಅಮ್ಮನ್ನ ಬಿಟ್ಟಿಡ್ಬೇಡ.”
'ಹೂಂ ಅಣ್ಣ.'
ಮತ್ತೆ ಹೊತ್ತಾಯಿತೆಂಬ ಆಕ್ರೋಶ,