ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ פ೯

ಸಮಾಧಾನವನ್ನು ಬಯಸಿ ಇನ್ನೊಂದು ಪ್ರಶ್ನೆ ಕೇಳಿದ:
    "ಅವರು ನೋಡೋದಕ್ಕೆ ಹ್ಯಾಗಿ‍‍‍ರ್ರ್ತಾರೆ ಚಿರುಕಂಡ?"      
    ಚಿರುಕಂಡನಿಗೆ ಅದು ಗೊತ್ತಿರಲಿಲ್ಲ
    "ಹ್ಯಾಗಿರ್ರ್ತಾರೋ? ಮಾಸ್ತರು ಹೇಳೇ ಇಲ್ಲ." 
    'ಅವರ'ನ್ನು ಮರೆತು ಅಪ್ಪು ಮಾಸ್ತರನ್ನು ಕುರಿತು ಯೋಚಿಸಿದ. ಆ ಯೋಚನೆ
ಸಿಹಿಯಾಗಿತ್ತು.
    "ಚಿರುಕಂಡ, ನಮ್ಮ ಮಾಸ್ತರು ಬಹಳ ಒಳ್ಳೆಯವರು ಅಲ್ವ?"
    ಆ ವಿಷಯದಲ್ಲಿ ಯಾವ ಸಂದೇಹವೂ ಇರದಿದ್ದ ಚಿರುಕಂಡ ಉತ್ಸಾಹದ
ಸ್ವರದಲ್ಲಿ ಉತ್ತರವಿತ್ತ,"ಹೌದು ಮತ್ತೆ !"
   ಆ 'ಒಳ್ಳೆಯ ಮಾಸ್ತರು' ಕಯ್ಯೂರಿನಲ್ಲಿ ಪ್ರಾಥಮಿಕ ಅಧ್ಯಯನ ಮುಗಿದೊಡನೆ 
ಎಳೆಯರಿಬ್ಬರೂ ನೀಲೇಶ್ವರಕ್ಕೆ ಕಲಿಯಲು ಹೋಗಬೇಕೆಂದು ಬಯಸಿದ್ದರು.
ಆದರೆ, ಅದು ಸಾಧ್ಯವಾಗಿರಲಿಲ್ಲ, ಅಪ್ಪು ಮನೆಯಲ್ಲಿ ಹಿರಿಯ ಮಗ. ಚಿರುಕಂಡ 
ಹೆತ್ತವರ ಏಕಮಾತ್ರ ಸಂತಾನ. ಹೊಲದ ಕೆಲಸದಲ್ಲಿ ಹಿರಿಯರಿಗೆ ಅವರು
ನೆರವಾಗಬೇಕು. ಓದು ಅಲ್ಲಿಗೇ ನಿಂತುಹೋಗಿತ್ತು.
   ಮಾಸ್ತರರ ಮಾತು ಬಂದಾಗಲೆಲ್ಲ ಮುಂದುವರೆಯದೇಹೋದ ತಮ್ಮ
ಅಧ್ಯಯನದ ವಿಷಯವೂ ಅದರೊಡನೆ ಬೆರೆಯದೆ ಇರುತ್ತಿರಲಿಲ್ಲ.
   ಕೊನೆಯ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿ ಆಗಲೆ ಐದು ವರ್ಷಗಳು
ಕಳದಿದ್ದುವು.
   ಅನಿವಾರ್ಯವಾಗಿ ಅದರ ನೆನಪಾಗುತ್ತ ಅಪ್ಪು ಹೇಳಿದ:
  "ನಾವಿನ್ನೂ ಓದ್ಬೇಕಾಗಿತ್ತು ಅಲ್ವ ಚಿರುಕಂಡ ?"
  ಆ ಪ್ರಶ್ನೆಗೆ ಉತ್ತರ ಕೊಡುವ ಬದಲು ಚಿರುಕಂಡ, 'ಶ್' ಎನ್ನುತ್ತ ಅಪ್ಪುವಿನ 

ಕೈಯನ್ನು ಹಿಡಿದು ಜಗ್ಗಿದ.

  "ನೋಡು ಬಂತು ಚಾದಂಗಡಿ;ನಿಧಾನವಾಗಿ ಹೋಗೋಣ."ದಡ್ಡ
  ಅಪ್ಪುವಿನ ಎದೆಗುಂಡಿಗೆಯ ಬಡಿತ ಮತ್ತಷ್ಟು ತೀವ್ರವಾಯಿತು.
  "ಅಲ್ಲಿಗೆ ಹೋಗಿ ಏನೂಂತ ಕೇಳೋದು? ದುಡ್ಡಾದರೂ ಇದ್ದಿದ್ದರೆ ಚಾ

ಕುಡಿಯೋಕೆ ಬಂದಿದೇವೇಂತ ಹೇಳ್ಬಹುದಾಗಿತ್ತು."

  "ಸುಮ್ನೆ ಅಲ್ಲಿಗೆ ಹೋಗಿ ಕೂತಿರೋಣ.... ಮಾಸ್ತರು ಅಲ್ಲೇ ಇದ್ದರೂ 

ಇರಬಹುದು.

  "ಹೂಂ."