ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ...ಸ್ವಲ್ಪ ಹೊತ್ತಿನಲ್ಲೇ ತಾವು ಕಾಣಲಿದ್ದ ತಮ್ಮ ಮಾಸ್ತರು, ಅವರು ಪರಿಚಯಮಾಡಿಸಿಕೊಡುವೆನೆ೦ದಿದ್ದ ಆ ದೊಡ್ಡವರು, ಹೊಟೆಲಿನಲ್ಲಿ ಕ೦ಡಿದ್ದ ಧಾಂಡಿಗ... ಇಷ್ಟು ಜನ. ಅಲ್ಲಿ ಬೇರೆ ಯಾರಿರುವರೋ? " ಅವರು" ಸರಕಾರದ ಕಣ್ಣು ತಪ್ಪಿಸಿ ದುಡಿಯುತ್ತಿದ್ದ ಹಿರಿಯ ನಾಯಕ, ತಮ್ಮ ಮಾಸ್ತರು ಅವರ ಬಗೆಗೆ ಎಷ್ಟೊಂದು ಆದರದಿಂದ ಮಾತನಾಡಿರಲಿಲ್ಲ! ಮಾಸ್ತರು ಒಮ್ಮೆ ಹೇಳಿದರು: "ಅವರೇ ನನಗೆ ಲೋಕದ ಜ್ಞಾನ ದೊರಕಿಸಿಕೊಟ್ಟವರು.ಅವರೇ ನನ್ನ ತಿಳಿವಳಿಕೆಗೆ ರೂಪುಗೊಟ್ಟವರು." ಲೋಕಜ್ಞಾನವೆಂದರೇನೊ? ತಿಳಿವಳಿಕೆಗೆ ರೂಪು ಗೊಡುವುದೆಂದರೇನೊ? ಅದು ಅಸ್ಪಷ್ಟವಾದ ಮಾತು. ಆದರೆ ಇಷ್ಟು ಮಾತ್ರ ಸ್ಪಷ್ಟ: 'ಅವರು' ಮಾಸ್ತರಿಗಿಂತಲೂ ದೊಡ್ಡವರು... -ಹಾಗೆಂದು ಯೋಚಿಸುತ್ತ ಅಪ್ಪು ಮತ್ತು ಚಿರುಕಂಡ ನಡೆದರು....... ಮಾಸ್ತರಿಗಿಂತ ದೊಡ್ಡವರಾದ ಆ ವ್ಯಕ್ತಿ ಹೇಗಿರುವರೋ?ಎತ್ತರದ ದೇಹ, ಬಲವಾದ ತೋಳುಗಳು. ಬೆಲೆಬಾಳುವ ಉಡುಪು. ಹುರಿಮಾಡಿದ ಮೀಸೆ, ಭಯಭಕ್ತಿ ಹುಟ್ಟಿಸುವ ಕಣ್ಣುಗಳು ಗಂಭೀರವಾದ ಧ್ವನಿ.... ಆ ಕಲ್ಪನೆಯ ಚಿತ್ರ ಭವ್ಯವಾಗಿತ್ತು, ಆ ಚಿತ್ರದೆದುರು ಸಲಿಗೆಯ ಮನೋಭಾವ ಸಾಧ್ಯವೇ ಇರಲಿಲ್ಲ, ಆದರೆ ಮಾಸ್ತರು ಹಾಗಲ್ಲ, ಅವರು ಎಷ್ಟೊಂದು ಒಳ್ಳೆಯವರು! ಅವರನ್ನು ಕಂಡೊಡನೆ ಮೊಳೆಯುವುದು-ಅವರ ಬಳಿಗೆ ಹೋಗಿ ಅವರಿಗೆ ಅ೦ಟಿಕೊ೦ಡೇ ಕುಳಿತಿರಬೇಕೆ೦ಬ ಆಸೆ. ಎಲ್ಲರೂ ಅವರ ಹಾಗೆಯೇ ಇದ್ದರೆ ಎಷ್ಟು ಚೆನ್ನ! ಆದರೆ ಅವರಿಗಿಂತಲೂ ದೊಡ್ಡವರು ಮಾಸ್ತರರ ಹಾಗಿರುವುದು ಸಾಧ್ಯವಿಲ್ಲವಲ್ಲ....ಇಬ್ಬರ ತಲೆಯಲ್ಲೂ ಸುಳಿಯುತ್ತಿದ್ದುದು ಅ೦ದ್ದದೇ ಯೋಚನೆ.ಸ್ವಲ್ಪ ಹೆಚ್ಚು, ಇಲ್ಲವೇ ಸ್ವಲ್ಪ ಕಡಿಮೆ. 'ಏನು ಯೋಚಿಸ್ತಿದ್ದೀಯಾ?' ಎ೦ದು ಚಿರುಕ೦ಡನನ್ನು ಕೇಳುವ ಆಸೆ ಅಪ್ಪುವಿಗೆ, ಆದರೆ ಸ್ವರವೆತ್ತಿ ಮಾತನಾಡುವ ಹಾಗಿಲ್ಲ, 'ಶ್' ಸುಮ್ಮನಿರು! ಎಂದು ಚಿರುಕಂಡನ ಕೈಯಲ್ಲಿ ಛೀಮಾರಿ ಹಾಕಿಸಿಕೊಳ್ಳುವವರು ಯಾರು? ಆದರೆ ಚಿರುಕಂಡ, ಮೌನದ ಕೋಟೆಯೊಳಗೆ ತನ್ನಷ್ಟಕ್ಕೆ ಮಾತನಾಡುತ್ತಿದ್ದ. ಕಳೆದ ನಾಲ್ಕು ತಿ೦ಗಳ ಅವಧಿಯಲ್ಲಿ ಎಷ್ಟೊ೦ದು ಸೋಜಿಗವಾದುದೆಲ್ಲ ನಡೆದುಹೋಗಿತ್ತು! ಸತ್ಯ ಮತ್ತು ನ್ಯಾಯ-ಎಷ್ಟು ಒಳ್ಳೆಯ ಪದಗಳು! ಆ ಮಾತನ್ನೆತ್ತಿದಾಗ ಮಾಸ್ತರ ಕಣ್ಣುಗಳು ಹೇಗೆ ಮಿನುಗುತ್ತಿದ್ದುವು!.. ನಮ್ಮ ಹಳ್ಳಿ, ಕರಾವಳಿ ಪ್ರದೇಶ, ಭಾರತದೇಶ, ಅದಕ್ಕಿಂತಲೂ ಹೊರಗೆ ದೂರದೂರದ ವಿವಿಧ