ಈ ಪುಟವನ್ನು ಪರಿಶೀಲಿಸಲಾಗಿದೆ
೪೮
ಚಿರಸ್ಮರಣೆ

ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.

      ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:
"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"
"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"
ಎಂದ ಪ್ರಭು, ನಗುತ್ತ.
ಪಂಡಿತರೂ ನಕ್ಕರು.
"ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"
ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.

ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:

"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ. ನನಗೇನೂ ಅವಸರವಿಲ್ಲ."

    ಉಳಿದವರು ಆ ಮಾತು ಕೇಳಿ ನಕ್ಕರು.
ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.

ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.

    ಒಮ್ಮೆಲೆ ಪಂಡಿತರು ಕೇಳಿದರು:
" ಬೇರೆ ಯಾರಾದರೂ ಬರ್ತಾರಾ?"
ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:
"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."
ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:
ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:
"ಶುರು ಮಾಡೋಣ್ವ ಇನ್ನು?"
"ಹೂಂ."

ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ