ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರುಕಂಡನ ಜತ್ತೆಯಲ್ಲಿ ಹೊರಟುಹೋಗಲು ಅದೊಂದು ಅವಕಾಶ. ಒಡನೆಯೇ ಹೊಂ ಎನ್ನು-ಎಂದಿತು ಮನಸ್ಸು. ಆದರೆ ತಂದೆಯೊಬ್ಬನನ್ನೇ ದುಡಿಯಲು ಬಿಟ್ಟು ಹೊರಟುಹೋಗುವುದೂ ಸರಿಯಲ್ಲ ವೆನಿಸಿತು. "ಹೋರಿಗಳ ಮೈತೊಳೆದು ಹಟ್ಟಿಗೆ ಹೊಡಕೊಂಡು ಹೋಗೋದು ಬೇಡ್ವಾ?" "ನಾನು ನೋಡ್ಕೊಳ್ತೇನೆ.ಹೋಗೋಹಾಗಿದ್ರೆ ಹೋಗು.ಆದರೆ ಬಿಸಿಲಲ್ಲಿ ಅಲೆಯೋಕೆ ಹೊರಡ್ಬೇಡ. ತೆಪ್ಪಗೆ ಮಲಕೋ." ಅಪ್ಪು 'ಹೂಂ'ಎಂದ. "ಚಿರುಕಂಡನನ್ನೂ ಕರಕೊಂಡು ಹೋಗು, ಸಾಯಂಕಾಲದ ತನಕ ಇಬ್ಬರೂ ಮನೇಲೆ ಇದ್ಬಿಡಿ. ಕೇಳಿಸ್ತೇನ್ರೋ?" ಅಪ್ಪು ಮತ್ತೊಮ್ಮೆ "ಹೂಂ" ಅಂದ. ತಾಯಿ ಮಗನೊಡನೆಯೂ ಮಗನ ಸ್ನೇಹಿತನೊಡನೆಯೂ ಗುಡಿಸಲಿಗೆ ಹೊರಟಳು . ಅಪ್ಪುವಿನ ತಂದೆ, ನೆರಳಲ್ಲಿ ಮೆಲುಕಾಡಿಸುತ್ತ, ಮಲಗಿದ್ದ ಹೋರಿಗಳತ್ತ ಒಮ್ಮೆ ದೃಷ್ಟಿ ಬೀರಿ, ತೋಳನ್ನೆ ದಿಂಬಾಗಿ ಮಾಡಿ, ವಿಶ್ರಾಂತಿ ಸುಖ ಅನುಭವಿಸಿದ. ....ಹಿಂದಿನ ದಿನ ತಾವು ಎಲ್ಲಿಗೆ ಹೋಗಿದ್ದೆವೆಂಬುದನ್ನು ಮನೆಯಲ್ಲಿ ಹೇಳದೆಯೇ ಯಶಸ್ವಿಯಾಗಿ ಸುಳ್ಳಾಡಿದ ವಿಷಯ, ಚಿರುಕಂಡನಿಗೆ ತಿಳಿಸಬೇಕೆಂಬ ಆತುರ ಅಪ್ಪುವಿಗೆ . ಹಾಗೆಯೇ ಹುಡುಗ ಪೋಲಿಯಾಗಬಹುದು ಎಂದೆಲ್ಲ ತಂದೆ ಆಡಿದುದನ್ನು ಚಿರುಕಂಡನಿಗೆ ಹೇಳಿ, ಒಟ್ಟಾಗಿಯೇ ಇಬ್ಬರೂ ನಗಬೇಕೆಂಬ ಆಸೆ . ಆದರೆ ತಾಯಿ ಜತೆಯಲ್ಲೇ ಇದ್ದುದರಿಂದ, ಅದು ಸಾಧ್ಯವಿರಲಿಲ್ಲ. ಚಿರುಕಂಡನೊಳಗೆ ರೋದಿಸುತ್ತಿದ್ದೊಂದು ಹೃದಯವಿತ್ತು.ಅದನ್ನು ತೆರೆದು ಆ ನೋವನ್ನು ಅಪ್ಪುವಿಗೆ ತೋರಿಸಿದರೇ ಆತನಿಗೆ ಸಮಾಧಾನ. ಅಮ್ಮನ ಜತೆಯಲ್ಲಿ ಹೊರಡಲು ಅಪ್ಪುವಿಗೆ ಅವನ ತಂದೆ ಸೂಚನೆ ಕೊಟ್ಟಾಗ, ಚಿರಕಂಡನಿಗೆ ಸಂತೋಷವಾಗಿತ್ತು. ಆದರೆ ಇಷ್ಟವಿದ್ದಂತೆ ಮಾತಾಡಲು ಆಗಲೇ ಅವಕಾಶವಿರಲಿಲ್ಲ. ಸ್ನೇಹಿತರು ಮೌನವಾಗಿ ನಡೆದರು . ಆ ಮೌನ ಕಂಡು ಇಬ್ಬರಿಗೂ ಸೋಜಿಗವನಿಸಿತು : ಒಂದು ವರ್ಷದ ಹಿಂದೆ-ಯಾಕೆ,ಕೆಲವು ತಿಂಗಳ ಹಿಂದೆ ಕೂಡ- ಹೀಗಾಗುತ್ತಿರಲಿಲ್ಲ . ಒಂದರಿಂದ ಇನ್ನೊಂದಕ್ಕೆ ಕುಪ್ಪಳಿಸುತ್ತ , ಒಂದಕ್ಕೊಂದು ಸಂಬಂಧವಿಲ್ಲದ ನೂರಾರು ವಿಷಯಗಳನ್ನೆತ್ತಿಕೊಂಡು ದಿನಗಟ್ಟಲೆ ಮಾತನಾಡಲು ಅವರು ಸಮರ್ಥರಾಗಿದ್ದರು. ಆದರೆ ಈಗ ಅಂಥ ಮಾತುಕತೆ ಕಷ್ಟವಾಗಿತ್ತು. ಯಾವ