ಈ ಪುಟವನ್ನು ಪರಿಶೀಲಿಸಲಾಗಿದೆ



ಚಿರಸ್ಮರಣೆ

ಬರಹಗಾರನಿಗೆ ಆ ಊರು ಇಷ್ಟವಾಯಿತು. ಬೋಧನ ಮಾಧ್ಯಮ ಇಂಗ್ಲಿಷ್, ಎರಡನೆಯ ಭಾಷೆ ಮಲಯಾಳಂ ಅಥವಾ ಕನ್ನಡ. ಕೇರಳೀಯರ ಆ ಊರು ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುದರಿಂದ, ಹೈಸ್ಕೂಲಿನಲ್ಲಿ ಕನ್ನಡ ಕಲಿಸುತ್ತಿದ್ದರು. ಊರೂರುಗಳಿಂದ ಕನ್ನಡ ವಟುಗಳು ಅಲ್ಲಿಗೆ ಬರುತ್ತಿದ್ದುದು ಆ ಕಾರಣದಿಂದ. ರಾಜಕೀಯ ಪ್ರಜ್ಞೆಯ ವಿಷಯದಲ್ಲಿ ಮಲಯಾಳಿಗಳು ಕನ್ನಡಿಗರಿಗಿಂತ ಭಿನ್ನ. ಅವರ ಜತೆ ಓಡಾಡುತ್ತ ಶಿವರಾವ್ ಪ್ರಬುದ್ಧನಾದ. ಅವನು ಅಲ್ಲಿ ಮೊದಲ ಬಾರಿಗೆ ಕೇಳಿದ ಘೋಷ:'ಇಂಕ್ಷಿಲಾಬ್ ಜಿಂದಾಬಾದ್'.'ಸಾಮ್ರಾಜ್ಯಶಾಹಿಗಿದಿರು, ಸ್ಥಳೀಯ ಶೋಷಕರಿಗಿದಿರು ರೈತರನ್ನೂ ಕಾರ್ಮಿಕರನ್ನೂ ವಿದ್ಯಾರ್ಥಿಗಳನ್ನೂ ಸಂಘಟಿಸುವುದು ಅವನಿಗೆ ಹೊಸದು. ಗಾಂಧೀಭ್ರಮೆ ನಿಧಾನವಾಗಿ ಕರಗಿತು. ಮು೦ದಿದ್ದುದು ದ್ವಿಮುಖ ಹೋರಾಟ. ಬ್ರಿಟಿಷರ ಉಚ್ಚಾಟನೆಯೊ೦ದಿಗೆ ಸ್ವತಂತ್ರಭಾರತದಲ್ಲಿ ಸಮಾನತೆಯ ತಳಹದಿಯ ಮೇಲೆ ಹೊಸ ಸಮಾಜವನ್ನು ಸ್ತಾಪಿಸುವ ಗುರಿ ಆಕರ್ಷಕವಾಗಿತ್ತು. ಗಾ೦ಧೀವಾದ, ನೆಹರೂವಾದಗಳ‌‌‌ಷ್ಟೇ ದೇಶೀಯವೆನಿಸಿದುವು ಮಾರ್ಕ್ಸ್ವಾದ, ಕಮ್ಯೂನಿಸ೦.
ನನ್ನ ಪ್ರಾಮಾಣಿಕತೆ, ವಾಕ್ಬಟುತ್ವ ಕ್ರಾಂತಿಕಾರಿಗಳ ಗಮನ ಸೆಳೆದಿರಬೇಕು. ಹಾಗೆಯೇ ತಮ್ಮ ಪ್ರಾಮಾಣಿಕತೆ, ನಿಸ್ಪ್ರಹತೆಗಳಿಂದ ನನಗೆ ಹತ್ತಿರವಾದವರು ಗಣಪತಿ ಕಾಮತ್ ಮತು ಅವರ ಮೂಲಕ ಕಾಞ೦ಗಾಡ್ ಮಾಧವನ್. ಮಾಧವನ್ ದ್ವಿಪಾತ್ರಧಾರಿ: ಪೋಲೀಸರ ಕಣ್ಣಿಗೆ ಮಣ್ಣೆರಚಲೆಂದು ಹಗಲು ಹಿಂದೀ ಮಾಸ್ತರು. ರಾತ್ರಿ ಗ್ರಾಮಾಂತರ ಪ್ರದೇಶದಲ್ಲಿ ಸುತ್ತಾಡಿ ರೈತರನ್ನು ಸಂಘಟಿಸುತ್ತಿದ್ದ ಸಂಗಾತಿ. ನನ್ನ ಗೌರವಕ್ಕೆ ಪಾತ್ರರಾದ ಮೂರನೆಯವರು ಕರಿವೆಳ್ಳೂರಿನ ವಿ.ವಿ. ಕು೦ಇಂಬು–ಅಧಾಪಕ ವೃತ್ತಿಯನ್ನು ಬಿಟ್ಟು ಸ್ವಾತಂತ್ರ್ಯಯೋಧನಾದ ವ್ಯಕ್ತಿ. ಮುಂದೆ ಪರಿಚಯವಾದವರು ಸರಕಾರದ ಕಣ್ಣಿಗೆ ಬೀಳದೆ ತಿರುಗಾಡುತ್ತಿದ್ದ ಕೇರಳೀಯನ್ ಚಂದ್ರೋತ್, ನಾಯನಾರ್ ಮತ್ತಿತರರು. ನೀಲೇಶ್ವರ ವಾಸ್ತವ್ಯದ ಕೊನೆಯ ವರ್ಷ ಬಂತು. 1941ರಲ್ಲಿ 'ದೊಡ್ಡ ಪರೀಕ್ಷೆ'ಗೆ ನಾನು ಅಣಿಯಾಗುತ್ತಿದ್ದಂತೆ, ಹತ್ತಿರದ ಕುಗ್ರಾಮ ಕಯ್ಯೂರಿನಲ್ಲಿ ಜನತೆಯ ಸತ್ವಪರೀಕ್ಷೆಗಾಗಿ ಅಗ್ನಿಕುಂಡ ಸಿದ್ದವಾಗುತ್ತಿತ್ತು. ನೀಲೇಶ್ವರವನ್ನು ಹಗಲಿರುಳೂ ತಟ್ಟುತ್ತಿತ್ತು ಅ ಧಗೆ. ಕಯ್ಯೂರು ಒಮ್ಮೆಲೆ ಭುಗಿಲೆಂದಿತು. ಹೊಗೆಮೋಡ ಆಕಾಶವನ್ನು ಮುಸುಕಿತು.
ಹೊಗೆ ತು೦ಬಿದಾಗ ಕಣ್ಣುಗಳು ಹನಿಯಾಡುತ್ತವೆ. ಆಗಲೇ ಒಂದು ನಿರ್ಧಾರಕ್ಕೆ ಬಂದಿದ್ದೆ. "ಇನ್ನು ಶಿಕ್ಷಣ ಸಾಕು. ನನ್ನ ಲೇಖನಿಯನ್ನು ಅವಲಂಬಿಸಿ ನಾನು