ಗೇರುಬೀಜ ಸಂಸ್ಕರಣೆಯ ನಂತರ ಅದರ ಸಿಪ್ಪೆಯಿಂದ ಎಣ್ಣೆ ತೆಗೆಯುತ್ತಾರೆ. ಈ ಗೇರು ಬೀಜದ ಎಣ್ಣೆ ಮೋಪುಗಳ ಬಾಳಿಕೆಗೆ, ಹಡಗುಗಳ ಪೈಂಟ್‌ಗಳಿಗೆ ಬಳಕೆಯಾಗುತ್ತದೆ.
ಜಿಲ್ಲೆಯ ಇನ್ನೊಂದು ಪ್ರಮುಖ ಉದ್ಯಮ ಬೀಡಿ ಉದ್ಯಮ. ಮಂಗಳೂರು ಬೀಡಿಗಳು ಎಲ್ಲ ಕಡೆ ಪ್ರಚಾರ ಪಡೆದಿದೆ. ಬೀಡಿ ಕಟ್ಟುವ ಕೆಲಸದಿಂದಾಗಿ ಸಾಮಾನ್ಯ ಜನರಿಗೆ ಕೈ ತುಂಬಾ ಕೆಲಸವಂತೂ ಸಿಗುತ್ತದೆ. ಇಡಿಯ ಜಿಲ್ಲೆಯ 70,000ದಷ್ಟು ಜನ ಬೀಡಿ ಕಟ್ಟುತ್ತಿದ್ದಾರೆ.
ಈಗ ಬೀಡಿ ಕಟ್ಟುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬೀಡಿ ಉದ್ಯಮದಲ್ಲಿ ಒಟ್ಟು 17 ಫ್ಯಾಕ್ಟರಿಗಳು ನಮ್ಮ ಜಿಲ್ಲೆಯಲ್ಲಿ ತೊಡಗಿವೆ.
ಇತರ 46 ಬೇರೆ ಬೇರೆ ಉದ್ಯಮಗಳು ಜಿಲ್ಲೆಯಲ್ಲಿವೆ. ಅವು ತಾಂತ್ರಿಕ ಉಪಕರಣಗಳನ್ನು ತಯಾರಿಸುವ ಕಂಪೆನಿಗಳಾಗಿವೆ. ಮೋಟರ್ ಸ್ಪ್ಲಿಂಗ್‌ಗಳನ್ನು ತಯಾರಿಸುವ ಕಂಪೆನಿಗಳೂ ಇದೆ. ಬಾಲ್ ಬೇರಿಂಗ್‌ಗಳನ್ನು ತಯಾರಿಸುವ ಕಂಪೆನಿಗಳಿವೆ. ಲೋಹದ ತಂತಿಯನ್ನು ನಿರ್ಮಿಸುವ ಉದ್ಯಮಗಳಿವೆ.
ಅಲ್ಯೂಮಿನಿಯಂ ಕಂಪೆನಿಗಳು ಕೂಡಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಸಾಮಾನ್ಯ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಸಾಮಾಗ್ರಿ ತಯಾರಿಕೆ, ಪ್ರಿಂಟಿಂಗ್ ಪ್ರೆಸ್‌ಗಳು, ಮತ್ಸೋದ್ಯಮದ ಕಾರ್ಖಾನೆಗಳು, ಎಂಸಿಎಫ್ ಮೊದಲಾದವು ಜಿಲ್ಲೆಯಲ್ಲಿ ಹೆಸರಾಂತ ಉದ್ಯಮಗಳಾಗಿವೆ.
ಹಾಗೆಯೇ ಟೆಕ್ಸೆಟಾಲ್ಸ್ ಉದ್ದಿಮೆ, ಮರದ ಉತ್ಪನ್ನಗಳು, ಬೇಕರಿಗಳು, ಕಾಫಿ ಕ್ಯೂರಿಂಗ್, ಅಕ್ಕಿಯ ಮಿಲ್ಲುಗಳು, ಎಣ್ಣೆಯ ಉದ್ಯಮಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟಿವೆ.
ನಶ್ಯ ಮತ್ತು ಸಾಬೂನು ತಯಾರಿಕೆಯ ವಹಿವಾಟುಗಳಿವೆ. ಕೈ ಮಗ್ಗಗಳಿಂದ ಬಟ್ಟೆಗಳನ್ನು ಉತ್ಪಾದಿಸುತ್ತಾರೆ. ಖಾದಿ ಗ್ರಾಮೋದ್ಯೋಗ ಇಲಾಖೆಯ ಕೈಗಾರಿಕೆಗಳಿವೆ. ಇನ್ನೂ ಗ್ರಾಮೀಣ ನೆಲೆಯಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹವನ್ನು ಕೊಡಲಾಗುತ್ತಿದೆ. ಜೇನು ಸಾಕಣೆ, ಬುಟ್ಟಿ ಹೆಣೆಯುವಿಕೆ, ಚಾಪೆ ಹೆಣೆಯುವುದು, ಮಡಕೆಗಳ ತಯಾರಿ, ಮರದ ಕೆತ್ತನೆ ಕೆಲಸ, ಕಮ್ಮಾರರ ಉದ್ಯೋಗ, ಬಂಗಾರ ಮಾಡುವುದು, ಬೆಲ್ಲ ತಯಾರಿಸುವ ಕೆಲಸ, ಮತ್ತು ರಬ್ಬರ್ ಉದ್ಯಮ ಇವುಗಳಿಗೆಲ್ಲ
36