ಈ ಪುಟವನ್ನು ಪ್ರಕಟಿಸಲಾಗಿದೆ

ರಸ್ತೆಯಿಂದ ವಿದ್ಯುದ್ದೀಪಗಳಿಂದ ಹಾಗೂ ಫೋನುಗಳಿಂದ ಸಂಪರ್ಕ ಪಡೆದ ಹಳ್ಳಿಗಳು ಕೂಡ ಇಂದು ಕಾಲಕ್ಕೆ ತಕ್ಕಂತೆ ಬದಲಾಗಿವೆ.

ಸೇತುವೆಗಳಿಲ್ಲದೆ ಸಂಪರ್ಕ ಮೊದಲು ಕಷ್ಟವಾಗಿತ್ತು. ಈ ದಿಸೆಯಲ್ಲಿ ನೇತ್ರಾವತಿ, ಗುರುಪುರ, ಹಾಲಾಡಿ, ಗಂಗೊಳ್ಳಿಯಂತಹ ದೊಡ್ಡ ಹೊಳೆಗಳಿಗೂ ಸೇತುವೆಯನ್ನು ನಿರ್ಮಿಸಿ ಸಂಪರ್ಕವನ್ನು ತೀವ್ರಗತಿಯಲ್ಲಿ ಬೆಳೆಸಲಾಗಿದೆ.

ಪ್ರಯಾಣ ಸೌಕರ್ಯದಲ್ಲಿ ನಮ್ಮ ಜಿಲ್ಲೆ ಇಡೀ ದೇಶದಲ್ಲಿ ಅತ್ಯಂತ ಅಭಿವೃದ್ಧಿಯನ್ನು ಸಾಧಿಸಿದಂತಾಗಿದೆ. ಜಿಲ್ಲೆಯಲ್ಲಿ ಖಾಸಗಿ ವಾಹನಗಳಿಂದಾಗಿ ಬಸ್ಸಿನ ವ್ಯವಸ್ಥೆಯಲ್ಲಿ ಸ್ಪರ್ಧೆ ಏರ್ಪಟ್ಟು ಎಲ್ಲ ಗ್ರಾಮಗಳಿಗೂ ಪ್ರಯಾಣ ಸೌಲಭ್ಯ ಅತ್ಯಂತ ಅನುಕೂಲಕರವಾಗಿದೆ.

ಪ್ರಯಾಣದ ಸೌಲಭ್ಯ ಹೆಚ್ಚಿದಂತೆ ಯಾತ್ರಿಕರ ಸಂಖ್ಯೆಯೂ ಅಪಾರವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗವೇ ಬೇರೆ ಪ್ರದೇಶದವರಿಗೆ ಒಂದು ರಮ್ಯ ಅನುಭವ. ಇಷ್ಟೇ ಅಲ್ಲದೆ ದಕ್ಷಿಣ ಕನ್ನಡದ ಉಡುಪಿ, ಧರ್ಮಸ್ಥಳ, ಕೊಲ್ಲೂರು, ಸುಬ್ರಹ್ಮಣ್ಯ ಮುಂತಾದ ಧಾರ್ಮಿಕ ಕ್ಷೇತ್ರಗಳೂ ಅಪಾರ ಸಂಖ್ಯೆಯಲ್ಲಿ ಯಾತ್ರಿಕರನ್ನು ಆಕರ್ಷಸುತ್ತವೆ. ಇದರಿಂದಾಗಿ ಜಿಲ್ಲೆಯ ಪ್ರವಾಸೋದ್ಯಮದಲ್ಲಿಯೂ ಬೆಳವಣಿಗೆಯಾಗಿದೆ.

ನಮ್ಮ ಜಿಲ್ಲೆಯ ಪ್ರದೇಶಗಳಿಗೆ ಏಕಸೂತ್ರವಾಗಿ ಪ್ರಯಾಣ ಮಾಡುವಂತೆ ಯಾತ್ರಿಕರು ಒಂದೆ ದಿನದಲ್ಲಿ ಎಲ್ಲ ಕ್ಷೇತ್ರಗಳನ್ನು ನೋಡುವಂತೆ ಪ್ರಯಾಣದ ವ್ಯವಸ್ಥೆಯನ್ನು ಯಾರು ಮಾಡಿಲ್ಲ. ದೆಹಲಿಯಿಂದ ಬೇರೆ ಬೇರಿ ಕಡೆಯ ಯಾತ್ರಾರ್ಥಿಗಳು ಒಂದೇ ದಿನದಲ್ಲಿ ಯಾತ್ರಾಸ್ಥಳಗಳನ್ನು ಸಂದರ್ಶಿಸಲು ವ್ಯವಸ್ಥೆಯಿರುವಂತೆ ನಮ್ಮ ದಕ್ಷಿಣ ಕನ್ನಡದ ಉದ್ದಗಲಗಳಲ್ಲಿ ಎಲ್ಲ ಕ್ಷೇತ್ರಗಳನ್ನು ಸಂದರ್ಶಿಸಬಲ್ಲ ಟೂರಿಸ್ಟ್ ಬಸ್ಸುಗಳ ಅಗತ್ಯ ದಕ್ಷಿಣ ಕನ್ನಡದಲ್ಲಿ ಇದೆ.

ಜಲಮಾರ್ಗಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಾಲೈದು ಬಂದರುಗಳಿವೆ. ಮಂಗಳೂರು, ಮುಲ್ಕಿ, ಮಲ್ಪೆ, ಹಂಗಾರಕಟ್ಟೆ, ಕುಂದಾಪುರ, ಬೈಂದೂರುಗಳಲ್ಲಿ ಬಂದರಿನ ವ್ಯವಸ್ಥೆಗಳಿವೆ. ಮಂಗಳೂರು ಬಂದರನ್ನು ದೇಶವಿದೇಶಗಳ ಸರಕು ಸಾಗಣೆಗಳಿಗೆ ಅನುಕೂಲವಾಗುವಂತೆ ದೊಡ್ಡ ಬಂದರಾಗಿ ಯೋಜಿಸಲಾಗಿದೆ.

40