ಈ ಪುಟವನ್ನು ಪರಿಶೀಲಿಸಲಾಗಿದೆ

'ವಂ'ಮಂತ್ರದಿಂದ – ಧೇನು ಮುದ್ರೆ
'ಓಂ'ಮಂತ್ರದಿಂದ - ಮತ್ಸ್ಯಮುದ್ರೆ (10 ಬಾರಿ)

ದ್ವಾರಪೂಜೆ
ಬಾಗಿಲ ಕಡೆ ಅರ್ಥೈಜಲ ಸಿಂಪಡಿಸುತ್ತಾ -

ಓಂ ದ್ವಾರದೇವತಾಭ್ಯೋ ನಮಃ |

ನಂತರ ಕೆಳಗಿನ ಮಂತ್ರ ಹೇಳುತ್ತಾ ಪೂಜಿಸಿ -

ಓಂ ಏತೇ ಗಂಧಪುಷ್ಪೇ ದ್ವಾರದೇವತಾಭ್ಯೋ ನಮಃ |

ನಂತರ ನೈರುತ್ಯ ದಿಕ್ಕಿಗೆ -

ಓಂ ಏತೇ ಗಂಧಪುಷ್ಪ ಬ್ರಹ್ಮಣೇ ನಮಃ |
ಓಂ ಏತೇ ಗಂಧಪುಷ್ಪ ವಾಸ್ತುಪುರುಷಾಯ ನಮಃ |

ಭೂತಾಪಸಾರಣ
ಅಕ್ಷತೆಯ ಮೇಲೆ ಕೈಯಿಟ್ಟು ಜಪಿಸಿ -

'ಫಟ್' (7 ಬಾರಿ)

ಈಗ ನಾರಾಚ ಮುದ್ರೆಯಿಂದ ಗಂಟೆ ಬಾರಿಸುತ್ತಾ ಅಕ್ಷತೆ ಎರಚಿ -

ಓಂ ಸರ್ವವಿಘ್ನಾನುತ್ಸಾರಯ ಹೂಂ ಫಟ್ ಸ್ವಾಹಾ |
ಓಂ ಅಪಸರ್ಪಂತು ತೇ ಭೂತಾ ಯೇ ಭೂತಾ ಭುವಿಸಂಸ್ಥಿತಾಃ |

ಯೇ ಭೂತಾ ವಿಘ್ನಕರ್ತಾರಸ್ತೇ ನಶ್ಯಂತು ಶಿವಾಜ್ಞಯಾ ||

ಭೂಮಿಶುದ್ದಿ

ಓಂ ರಕ್ಷ ರಕ್ಷ ಹೂಂ ಫಟ್ ಸ್ವಾಹಾ |

ಮಂತ್ರದಿಂದ ಮುಷ್ಠಿಯಲ್ಲಿಯ ನೀರನ್ನು ನೆಲದ ಮೇಲೆ ಬಿಡಿ -
ಆಸನಶುದ್ದಿ
ಆಸನದ ಮುಂದೆ ತ್ರಿಕೋನಮಂಡಲ ಬರೆದು ಪೂಜಿಸಿ -

ಓಂ ಹ್ರೀಂ ಏತೇ ಗಂಧಪುಷ್ಪ ಆಧಾರಶಕ್ತ್ಯಾದಿಭ್ಯೋ ನಮಃ |

ಈಗ ಆಸನ ಸ್ಪರ್ಶ ಮಾಡಿ -

ಓಂ ಅಸ್ಯಾಸನೋಪವೇಶನಮಂತ್ರಸ್ಯ ಮೇರುಪೃಷ್ಠಋಷಿಃ ಸುತಲಂ ಛಂದಃ

ಕೂರ್ಮೊದೇವತಾ, ಆಸನೋಪವೇಶನೇ ವಿನಿಯೋಗಃ|

ಕೈ ಮುಗಿದು -

2