ಈ ಪುಟವನ್ನು ಪ್ರಕಟಿಸಲಾಗಿದೆ

ಸುಖಜೀವಿಯಲ್ಲದ ಜಯದೇವನಿಗೆ ಶಾಲೆಮುಗಿದ ಅನಂತರ ಸಂಜೆಯ ಹೊತ್ತನ್ನು ಕಳೆಯುವುದು ಕಷ್ಟವಾಯಿತು. ತಿದ್ದಲು ಹುಡುಗರ ಕಾಪಿ ಪುಸ್ತಕ' 'ನೋಟ್ಸ್ ಪುಸ್ತಕ'ಗಳೆಷ್ಟಿದ್ದರೂ ರಾತ್ರೆಯ ಸ್ವಲ್ಪ ಹೊತ್ತಿನಲ್ಲೇ ಆ ಕೆಲಸ ಮುಗಿಯುತಿತ್ತು... ಶಾಲೆಯ ಹುಡುಗರಿಗೆ ಆಡಲು ಒಳ್ಳೆಯ. ಆಟದ ಬಯಲಿರಲಿಲ್ಲ, ಹುಡುಗರನ್ನು ಹುರಿದುಂಬಿಸಿ ಶ್ರಮದಾನದ ಸೇನೆಯೊಂದನ್ನು ಸಿದ್ಧಗೊಳಿಸುವುದು ಸಾಧ್ಯವಾದರೆ–ಎನಿಸಿತು ಆತಗೆ.

ಜಯದೇವ ಹುಡುಗರೊಡನೆ ಆ ವಿಷಯವನ್ನು ಪ್ರಸ್ತಾಪಿಸಿದ. ಕೆಲ ಹುಡುಗರು ಕೇಳಿದರು: ``

“ನಾವೇ ಮಣ್ಣು ಅಗೀಬೇಕೆ ಸಾರ್?”

“ಹೂಂ ಮತ್ತೆ.”

“ಹೊರೋದು ??

“ನಾವೇನೇ!“

ಒಬ್ಬಿಬ್ಬರು ಹುಡುಗರು, “ಮನೇಲಿ ಕೇಳಿ ಬರಬೇಕು ಸಾರ್" ಎಂದರು. ಹೆಚ್ಚಿನ ಹುಡಗರೇನೋ ಜಯದೇವನ ಜತೆಯಲ್ಲಿ ಆ ಶ್ರಮದ ಕೆಲಸಕ್ಕೆ ಸಿದ್ಧರಾದರು.

ಆದರೆ ಅದಕ್ಕೆ ಮುಖೋಪಾಧಾಯರ ಸಮ್ಮತಿ ಸಿಗಲಿಲ್ಲ.

“ಇದೆಲ್ಲಾ ಯಾಕೋ ಸರಿಯಾಗಿಲ್ಲ ಜಯದೇವ !”

“ಏನಾಯ್ತು ಸಾರ್ ?”

ಪ್ರತಿಭಟನೆಯೇನೋ ಎಂಬ ಸಂದೇಹ ಮೂಡುವಂತಹ ಧ್ವನಿಯಲ್ಲಿ. ಜಯದೇವ ಕೇಳಿದ.

ವೆಂಕಟರಾಯರ ಉತ್ತರದ ಸ್ವರ ಜೋರಾಗಿಯೆ ಇತು.

“ಮತ್ತೇನಿದೆಲ್ಲ? ನೀವು ಬಿತ್ತುತಾ ಇರೋದು ಅಶಿಸ್ತಿನ ಬೀಜ. ನಾನಿದಕ್ಕೆಲಾ ಸಮ್ಮತಿ ಕೊಡೋದು ಸಾಧ್ಯವಿಲ್ಲ !”

“ಈ ರೀತಿ ಹುಡುಗರು ತಾವಾಗಿಯೇ ಸ್ವಾವಲಂಬನ ಜೀವನ ಅಭ್ಯಾಸ ಮಾಡೋದು ತಪ್ಪೆ ಸಾರ್?”

“ಸಿದ್ದಾಂತ ನನಗೆ ಕಲಿಸ್ಬೇಡಿ. ನಿಮಗೇನೂ ತಿಳಿದು. ಹುಚ್ಚುಚ್ಚಾಗಿ ಏನಾದರೂ ಮಾಡಿ ನಿಮ್ಮ ಕಾಲಿಗೆ ನೀವೇ ಕಲ್ಲು ಹಾಕ್ಕೊಬೇಡಿ.