ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಜಯರಾಮಶೆಟ್ಟರ ಮನೆಯಲ್ಲಿ ಶಾಮಲೆಯನ್ನು ಕಂಡಾಗಲೆಲ್ಲ ಜಯದೇವನಿಗೆ ಬೆಂಗಳೂರು ನೋಡುವ ಹಂಬಲ ಉಂಟಾಗುತಿತ್ತು.

ವೇಣುಗೋಪಾಲನೇನೋ “ನವರಾತ್ರಿಯ ರಜದಲ್ಲಿ ಬಾ” ಎಂದು ಬರೆದಿದ್ದು, ಆ ಕಾಗದದ ಕೊನೆಯಲ್ಲಿ, “ಜಯದೇವನವರೆ ಬನ್ನಿ” ಎಂದು ಸುನಂದೆಯೂ ದುಂಡದುಂಡಗಿನ ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಳು; “ಜಯಣ್ಣ ಬಾ” ಎಂದಿರಲಿಲ್ಲ ಆಕೆ, ಒಂದು ವರ್ಷದ ತನಕ ಬೆಂಗಳೂರಿಗೆ ಹಿಂತಿರುಗಬಾರದು ಎಂದುಕೊಂಡಿದ್ದ ಜಯದೇವ ಮಾತ್ರ, ಆ ನಿರ್ಧಾರಕ್ಕಿದಿರು ಪ್ರತಿಭಟಿಸುತ್ತಿದ್ದ ಮನಸ್ಸನ್ನು ಬಿಗಿ ಹಿಡಿದ. ಆತ ಕೊಟ್ಟ ಉತ್ತರ ಸ್ಪಷ್ಟವಾಗಿತ್ತು : "ನಿಮ್ಮನ್ನೆಲ್ಲ ನೋಡಬೇಕೆಂದು ನನಗೂ ಆಸೆ, ಆದರೆ ಬೇಸಗೆ ರಜಾದವರೆಗೂ ಬರಲಾರೆ.”

ಆಗಿನ್ನೂ 'ನನ್ನನ್ನು ದಾಟಿದ ಮೇಲಲ್ಲವೆ ಬೇಸಗೆ?” ಎಂದು ಚಳಿಗಾಲ ಅಣಕಿಸುತಿತ್ತು.

ಚಿಕ್ಕ ಪರೀಕ್ಷೆ ಮುಗಿಯಿತು. ತನ್ನ ಪಾಠಗಳಲ್ಲಿ ಹೆಚ್ಚಿನ ಹುಡುಗರು ನೀಡಿದ ಉತ್ತರ ನೋಡಿ ಜಯದೇವನಿಗೆ ಸಮಾಧಾನವೆನಿಸದಿರಲಿಲ್ಲ.

ಶಾಲೆಯನ್ನು ಕುರಿತು ಇನ್ಸ್ಪೆಕ್ಟರ್ ರಾಧಾಕೃಷ್ಣಯ್ಯ ಮಾಡಿದ ವರದಿಯ ಪ್ರತಿಯೊಂದು ಬಂದಾಗ ಜಯದೇವನ ಆತ್ಮವಿಶ್ವಾಸ ಮತ್ತಷ್ಟು ಬೆಳೆಯಿತು. 'ತೃಪ್ತಿಕರ'ವೆಂದೇ ಇತ್ತು ವರದಿ. ಅದಕ್ಕೆ ತಾವೇ ಕಾರಣ ಎಂಬಂತೆ ವೆಂಕಟರಾಯರೂ ವರ್ತಿಸಿದರು; ನಂಜುಂಡಯ್ಯನೂ ವರ್ತಿಸಿದರು. ಆದರೆ ರಾಧಾಕೃಷ್ಣಯ್ಯ ವರದಿ ಬರೆದಾಗ, ಬಹುಮಟ್ಟಿಗೆ ತಾನೇ ಅವರ ದೃಷ್ಟಿಯ ಮುಂದೆ ಇದ್ದೆನೆಂಬುದನ್ನು ಊಹಿಸುವುದು ಜಯದೇವನಿಗೆ ಕಷ್ಟವಾಗಲಿಲ್ಲ, ಒಂದೆಡೆ ರಾಧಾಕೃಷ್ಣಯ್ಯ ಬರೆದಿದ್ದರು: ಪಠ್ಯ ಪುಸ್ತಕಗಳ ಹೊರತಾದ ಬೌದ್ಧಿಕ ಚಟುವಟಿಕೆಗಳಿಗೆ ತುಂಬಾ ಆಸ್ಪದವಿದೆ. ಆ ಜವಾ ಬ್ದಾರಿಯನ್ನು ಹೊರಬಲ್ಲ ಉತ್ಸಾಹಿ ಉಪಾಧ್ಯಾಯರಿದ್ದೂ ಅತ್ತ ಗಮನ ಕೊಡದೇ ಇರುವುದು ಸರಿಯಲ್ಲ, ಆಟಗಳ ವಿಷಯದಲ್ಲೂ ಸಾಕಷ್ಟು ಸೌಕರ್ಯವಿಲ್ಲ.” ಅದನ್ನೋದಿದ ಜಯದೇವ ಮುಗುಳ್ನಕ್ಕ, ಉತ್ಸಾಹಿ