ಈ ಪುಟವನ್ನು ಪ್ರಕಟಿಸಲಾಗಿದೆ

ಸೋಕಾಗಲ್ಲ.ಆದರೆ ಒಂದು ವಿಷಯ. ಈ ಪ್ರಪಂಚದಲ್ಲಿ ನಾವು ಯಾವಾಗ್ಲೂ ಹೆಚ್ಚು ನಿರೀಕ್ಷೆ ಇಟ್ಕೋಬಾರ್ದು, ನಮಗೆ ಯಾವ ಭ್ರಮೇನೂ ಇರಬಾರ್ದು, ಆಗ, ನಿರಾಶೆಯಾದರೆ ಹೆಚ್ಚು ದುಃಖವಾಗೋದಿಲ್ಲ, ಸಂಕಟ ಸಹಿಸ್ಕೋಳ್ಳೋ ಸಾಮರ್ಥ್ಯವಿರುತ್ತೆ, ಅಲ್ವೇ?

"ಹೌದು."

“ಇದು ನಿರಾಶಾವಾದಿಯ ವೇದಾಂತ ಅಂತ ದಯವಿಟ್ಟ ಭಾವಿಸ್ಬೇಡಿ. ನಿಷಾವಂತರಾಗಿ ಉಪಾಧಾಯ ವೃತ್ತಿಯ ಹಿರಿಮೆಯನ್ನು ಕಾಪಾಡಿಕೊಂಡಿ ರುವ ಜನ ಈಗಲೂ ಅಲ್ಲಿ ಇಲ್ಲಿ ಇದಾರೆ. ನೀವೂ ಅವರಲ್ಲಿ ಒಬ್ಬರು ಯಾಕೆ ಆಗಕೂಡದು?

ಜಯದೇವನೂ ಅದನ್ನೇ ಯೋಚಿಸಿದ-ಯಾಕೆ ಆಗಕೂಡದು?

ಆ ಪ್ರಶ್ನೆಗೆ ಪೂರಕವಾಗುವಂತೆ ರಂಗರಾಯರು ಮತ್ತೂ ಒಂದು ಮಾತೆಂದರು:

“ಅದಕ್ಕೆ ತುಂಬಾ ತಾಗ ಮಾಡ್ಬೇಕು. ಈ ಉಪಾಧಾಯ ವೃತ್ತಿ ಅನ್ನೋದು ಒಂದು ಮಹಾಯಜ್ಞ.”