ಈ ಪುಟವನ್ನು ಪ್ರಕಟಿಸಲಾಗಿದೆ

ಹಿರಿತನವನ್ನು ಎತ್ತಿ ತೋರಿಸಿದುವು. ಮಾತೃಪ್ರೇಮದ ಅನುಭವ ಆತನಿಗಿರಲಿಲ್ಲ ನಿಜ, ಅದರೆ ಮಾತೆ ದೈವೀ ಸ್ವರೂಪಳೆಂದು ಸಹಸ್ರಸಾರೆ ಆತ ಕೇಳಿದ್ದನಲ್ಲವೆ?

ಆದರ್ಶ ಮಹಿಳಾರತ್ನಗಳು....

ತನ್ನ ತರಗತಿಯಲ್ಲಿ, ತನ್ನನ್ನೆ ಬೆರಗುಗಣ್ಣುಗಳಿಂದ ನೋಡುತ್ತಿದ್ದ ವಿದ್ಯಾರ್ಥಿನಿಯರನ್ನೇ ಎಷ್ಟೋ ಬಾರಿ ದಿಟ್ಟಿಸಿ ಜಯದೇವ ಮಾತನಾಡಿದ.

"ನಮ್ಮದು ಪುಣ್ಯ ಭೂಮಿ. ಈ ತಾಯಿಯ ಬಸಿರಲ್ಲಿ ಒಳ್ಳೆಯ ಮಾನವರು ಹಲವರು ಜನಿಸಿದ್ದಾರೆ. ಆದರ್ಶಮಹಿಳಾರತ್ನಗಳು ನಮ್ಮ ಬದುಕನ್ನು ಬೆಳಗಿವೆ. ಹುಟ್ಟಿದವರೆಲ್ಲ ಮಹಾತೇಜಸ್ವಿಗಳಾಗೋದಿಲ್ಲ. ಅಥವಾ ಮಹಾತೇಜಸ್ವಿಗಳಾಗಿಯೇ ಯಾರೂ ಹುಟ್ಟೋದಿಲ್ಲ. ಎಲ್ಲರಲ್ಲೂ ಒಳ್ಳೆಯ ಗುಣಗಳಿರುತ್ತವೆ. ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ. ಹೆಚ್ಚು ಗುಣಗಳಿರುವವರು ಆದರ್ಶವ್ಯಕ್ತಿಗಳಾಗ್ತಾರೆ. ಜೀಜಾಬಾಯಿಯಂತಹ ವೀರಮಾತೆ ಆದರ್ಶ ಸ್ತ್ರೀರತ್ನ -ನಮ್ಮಲ್ಲೇ ಹುಟ್ಟಿ ಬರಲಾರಳೆಂದು ಹೇಗೆ ಹೇಳೋಣ? ಖಂದಿತ ಹುಟ್ಟಬಹುದು..."

ನಡುನಡುವೆ ತಾನೆ ಮಾತನಾಡುತ್ತಿರುವೆನೆ ಎಂದು ಜಯದೇವನಿಗೆ ಸಂದೇಹವಾಗುತಿತ್ತು. ಹಿಂದೆ ತಾನೆಲ್ಲೋ ಕೇಳಿದ್ದ ಎಲ್ಲೋ ಓದಿದ್ದ ಮಾತುಗಳೇ ತನ್ನ ನಾಲಿಗೆಯಿಂದ ಹೊರಬೀಳುತಿದ್ದಂತೆ ತೋರಿತು. ಮಾತನಾಡುತ್ತಲಿದ್ದಂತೆಯೇ ಮನಸ್ಸಿನಲ್ಲೇ ಆತ ಅಂದುಕೊಂಡ:

"ಇದೆಲ್ಲಾ ನನ್ನ ಸ್ವಂತದ ವಿಚಾರಗಳಲ್ಲದೇ ಇರಬಹುದು. ಆದರೆ ಇವು ಒಳ್ಳೆಯ ವಿಚಾರಗಳು. ಇಷ್ಟುಮಾತ್ರ ನಿಜ."

ಪಾಠದ ಅವಧಿ ಮುಗಿಯಿತೆಂದು ಘಂಟಿ ಬಾರಿಸಿತು. ಜಯದೇವನ್ಲೂ ತನ್ನ ಕಥನ-ಭಾಷಣದ ಕೊನೆಯನ್ನು ತಲಪಿದ್ದ. ಮಂತ್ರಮುಗ್ಧರಾಗಿ ಕುಳಿತಿದ್ದರು ಅ ಹುಡುಗ-ಹುಡುಗಿಯರೆಲ್ಲ.

"ಇವತ್ತಿಗಿಷ್ಟು. ಇನ್ನೊಂದು ದಿವಸ ವೀರಮಾತೆ ವಿಮಲಾ ಆರಂಭಿಸೋಣ."

ಸ್ವಾರಸ್ಯವಾದುದು ಸವಿಯಾದುದು ಇಷ್ಟಕ್ಕೇ ನಿಂತು ಹೋಯಿತಲಾ ಎಂದು ವಿದ್ಯಾರ್ಥಿಗಳು ಚಡಪಡಿಸಿದರು. ಅವರಲ್ಲಿ ಹೆಚ್ಚು ಕಡಿಮೆ ಎಲ್ಲರ