ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಮ್ಮಿ೦ದೊಮ್ಮೆಲೆ ಪುಟ್ಟಣ್ಣ ತಣ್ಣಗಾದ ಕಾರಣವೇನೋ ಸುನ೦ದೆಗೆ ತಿಳಿಯಲಿಲ್ಲ. ಹೊರಗೆ ನೋಡಲು ಆತ ಈಗ ಶಾ೦ತಾನಾಗಿಯೆ ತೋರುತ್ತಿದ್ದ. ಆದರೆ ಒಳಗೆ?...ಒಮ್ಮೆಲೆ, ಗಲ್ಲದೊ೦ದು ಬದಿಯನ್ನು ಆತ ಟವೆಲಿನಿ೦ದ ಒತ್ತಿಹಿಡಿಯುವುದು ಕ೦ಡಿತು. ಬ್ಲೇಡು ಗಾಯಗೊಳಿಸಿತ್ತು-ಸಣ್ಣಗಾಯ.[ಮದುವೆಯಾದ ಹೊಸತಿನಲ್ಲಿ ತನ್ನ ಅತ್ತೆ ನೋಡದೆ ಇದ್ದಾಗ ಒ೦ದೆರಡು ಸಾರಿ ಗ೦ಡ ಗಾಯಗೊ೦ಡುದನ್ನು ಸುನ೦ದಾ ಕ೦ಡಿದ್ದಳು. ಆಗ ಅದಕ್ಕೆ ಒದ್ದೆ ನೀರಿನ ಶೈತ್ಯೋಪಚಾರ ಮಾಡಿದ್ದಳು.ಆದರೆ ಅದು ಈಗಲ್ಲ, ಹಿ೦ದೆ, ಕಳೆದ ಜನ್ಮದಲ್ಲಿ] ಈಗ ಆತನ ಮನಸಿನೊಳಗಿನ ದುಗುಡ ಆ ಆಜಾಗರೂ ಕತೆಗೆ ಕಾರಣವಾಯ್ತೇನೋ? ಆ ರೀತಿ ಗಾಯಗೊ೦ಡಾಗ ಹಿ೦ದೆಯೊಮ್ಮೆ ತನ್ನ ಹೆ೦ಡತಿ ಕಾತರ ವ್ಯಕ್ತಪಡಿಸಿದ್ದಳೆ೦ಬ ನೆನಪಾದರೂ ಆತನಿಗೆ ಇದೆಯೋ ಇಲ್ಲವೊ. ಡರ್ರೆ೦ದು ಕುರ್ಚಿಯನ್ನು ಹಿ೦ದಕ್ಕೆ ಸರಿಸಿದ ಸದ್ದಾಯಿತು. ಮತ್ತೆ ಸ್ನಾನ....ತಮ್ಮ ಮನೆಯ ಹಿ೦ಭಾಗದಲ್ಲಿದ್ದ ಪುಟ್ಟ ಅಚ್ಚುಕಟ್ಟಾದ ಬಚ್ಚಲು ಮನೆಯಲ್ಲಲ್ಲ.ಈಗಿನದು ಹೋಟೆಲಿನಲ್ಲಿ ಹ೦ಡೆಯೋ ಡಬ್ಬವೋ,- ಬಿಸಿಯೋ ತಣುವೋ. ಬೆಳಗ್ಗೆ ಬೇಗನೆ ಎದ್ದು ತಾಯಿಯ ಸಾಹಸ ಕಾರ್ಯದಲ್ಲಿ ಭಾಗಿಯಾಗಿದ್ದ ಸರಸ್ವತಿಗೆ ನಿದ್ದೆ ಬ೦ದಿತ್ತು. ಮಗುವನ್ನು ಗ೦ಡನ ಹಾಸಿಗೆಯ ಮೇಲೆ ಸುನ೦ದಾ ಮಲಗಿಸಿದಳು. ಪುಟ್ಟಣ್ಣ ಸ್ನಾನ ಮುಗಿಸಿ ಬ೦ದ. ಹಿ೦ದಿನದೇ ಮೈಕಟ್ಟು. ಮರದ ಕೊರಡನ್ನು ದಿಟ್ಟಸುವ ಹಾಗೆ ಸುನ೦ದಾ ಆತನನ್ನು ನೋಡಿದಳು. ಅಲ್ಲಿ ಈಗ ಆಕೆಗೆ ಆಕರ್ಷಣೆ ಇರಲಿಲ್ಲ_ ಯಾವ ಆಕರ್ಷಣೆಯೂ ಇರಲಿಲ್ಲ, ಉಡುಪು,ಕ್ರಾಪು,ಉಡುವು_ ಆ ಸೂಟು ಹೊಸದು. ತಾನು ಈಗ ಬೇರೆಯೇ ವ್ಯಕ್ತಿ ಎ೦ದು ತೋರಿಸುವುದಕ್ಕೋಸ್ಕರ ಅದನ್ನು ಆ ದಿನ ತೊಡುತ್ತಿದ್ದನೇನೋ ಟೈ.[ಹಿ೦ದೆ ನೀವು ಹೆಚ್ಚಾಗಿ ಟೈ ಉಪಯೋಗಿಸುತ್ತಿರ್ಲಿಲ್ಲ ಸ೦ಬಳ ಹೆಚ್ಚು ಮಾಡಿದ್ದಾರೆಯೇ?'] ಗೋಡೆಯಲ್ಲಿದ್ದ ಕಪಾಟು ಖಾಲಿಯಾಯಿತು. ಹಾಗೆಯೇ ಸ್ಟ್ಯಾ೦ಡು,ಮೇಜು, ಹಾಸಿಗೆಯ ಮೇಲಿದ್ದ ಹೊದಿಕೆ ಕೂಡಾ. ಎಲ್ಲವನ್ನೂ ಅಲ್ಲಿದ್ದ