ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವತಿಯ ಕೈಗೆ ಆಕೆಯ ಬೊಂಬೆಪಾಪನನ್ನಿತ್ತು, ಕೆಳಗೆ ಕುಳ್ಳಿರಿಸಿ, ಸುನಂದಾ ಹಾಸಿಗೆಗಳನ್ನು ಸುರುಳಿ ಸುತ್ತಿದಳು.ಪೊರಕೆ ತಂದು, ಹೊರ ಜಗುಲಿಯನ್ನೂ ನಡುಮನೆಯನ್ನೂ ಪಕ್ಕದ ಕೊಠಡಿಗಳನ್ನೂ ಗುಡಿಸಿ ಸ್ವಚ್ಛಗೊಳಿಸಿದಳು.ಹಿಂದಿನ ದಿನವೇ ಅಣಿಗೊಳಿಸಿದ್ದ ಮಾವಿನೆಲೆಯ ಒಂದೆಳೆ ಸಾಲು ಹೆಬ್ಬಾಗಿಲನ್ನು ಅಲಂಕರಿಸಿತ್ತು. ಅದರಲ್ಲೊಂದೆಡೆ ಎಲೆಗಳು ಒಂದರ ಮೇಲೊಂದು ಬಿದ್ದು ಸಿಕ್ಕುಗಟ್ಟಿದ್ದವು. ಸುನಂದಾ ಅದನ್ನು ಸರಿಪಡಿಸಿದಳು. ಮನೆಯ ಒಂದೇ ಒಂದು ಪೀಠೋಪಕರಣವಾದ ಆರಾಮ ಕುರ್ಚಿಯನ್ನು ತಂದು ನಡು ಮನೆಯಲ್ಲಿ ಬಿಡಿಸಿದಳು. ನಾಲ್ಕು ವರ್ಷಗಳ ಹಿಂದೆಯೂ ಆದಿನ ಇದೇ ಆರಾಮ ಕುರ್ಚಿ ಇತ್ತು. ಆದರೆ ಆಗ ಅದು ಹೊಸದು. ಅಲ್ಲದೆ ಜತೆಯಲ್ಲಿ ನೆರೆಹೊರೆಯವರಿಂದ ಎರವಲು ತಂದಿದ್ದ ಬೇರೆ ಎರಡು ಕುರ್ಚಿಗಳಿದ್ದವು.ಅಷ್ಟೇ ಅಲ್ಲ ಆಗ ಅಡುಗೆಗೆಂದು ಹೆಂಗಸರಿಬ್ಬರನ್ನು ಗೊತ್ತು ಮಾಡಿದ್ದರು. ತನ್ನ ಗಂಡ ಅತ್ತೆಯೊಡನೆ ಆದಿನ ಬಂದಿಳಿದುದೂ ಬೆಳಗು ಮುಂಜಾನೆಯೇ.ಆ ಸಾರೆ ನಡುರಾತ್ರಿಯೇ ಮನೆಯೆಲ್ಲ ಎಚ್ಚರಗೊಂಡು ಕೆಲಸ ಕಾರ್ಯಗಳು ಆರಂಭವಾಗಿದ್ದುವು. ಆ ಮನೆಯಳಿಯನನ್ನು ತೃಪ್ತಿಪಡಿಸಲು ಆಗ ತೋರಿದ ಸಂಭ್ರಮವೆಷ್ಟು.! ಈಗ ಅಂತಹ ಯತ್ನವಿಲ್ಲ. ಈ ದಿನ ಸರಳತನ ಮೈವೆತ್ತು ನಿಂತಿದೆ. ಎಂದಿಗಿಂತ ಎಲ್ಲಿಯೋ ಸ್ವಲ್ಪ ಹೆಚ್ಚು ಸಂಭ್ರಮ ಅಷ್ಟೆ--ಸ್ವಲ್ಪ ಮಾತ್ರ ಹೆಚ್ಛು.

       ಯಾಕೆ ಹೀಗೆ? ಕಾಲ ಬದಲಾಯಿತೆಂದೆ? ನಿವೇಕ ಪ್ರಸ್ತದಂತಹ ಸಮಾರಂಭದ ಘನತೆ ಗಾಂಭೀರ್ಯ ಹಿರಿಮೆಗಳು ಕಡಿಮೆಯಾದುವೆಂದೆ? ಹಾಗೆ ಹೇಳುವುದು ಕಷ್ಟವೆಂದು ಸುನಂದಾ ಬಲ್ಲಳು. ವಿಜಯಳ ಗಂಡ ತಾನೊಬ್ಬನೇ ಬರುವೆನೆಂದು ಬರೆದಿದ್ದ. ಯಾವ ಕಾರಣದಿಂದಲೂ ಏನೊಂದು ವೆಚ್ಚವನ್ನೂ ಮಾಡಬಾರದು ಎಂದು ತಿಳಿಸಿದ್ದ. ಎರಡನೆಯ ಸೂಚನೆ ಆಶ್ಚರ್ಯಕ್ಕೆ ಕಾರಣವಾಗಿತ್ತು. ಹಾಗೆಯೇ ಯಾವುದೋ ಆಸೆಯ ಕಿರಣ ಉದಿಸುವುದಕ್ಕೂ ಎಡೆಗೊತ್ತಿತ್ತು. ಸ್ವತಃ ಬಡವನಾಗಿದ್ದರೂ ಆತ ವರದಕ್ಷಿಣೆ ಕೇಳಿರಲಿಲ್ಲ. ಅಂತಹ ದೊಡ್ಡ ವೆಚ್ಚವಿರದೆ ಇದ್ದೂ ಸಣ್ಣ ಪುಟ್ಟ ಸಾಲವಾಗಿತ್ತು. ಆ ವಿಷಯ ಅಳಿಯನಿಗೆ ತಿಳಿಯುವ ಸಂಭವವಿರಲಿಲ್ಲ. ಆದರೂ ಆತ ಊಹಿಸಿಕೊಂಡಿದ್ದನೋ ಏನೋ.... ಅಂತೂ ವಿಜಯಳ