ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೫೧

    ರಾಧಮ್ಮ ರೇಗಿದಾಗಲೂ ನೋಡಲು ಸೊಗಸಾಗಿರುತ್ತಿತ್ತು.
     "ಮನೆ ಗೊತ್ಮಾಡ್ದೋರು ನಮ್ಮ ತಂದೆ ಸ್ನೇಹಿತರು, ಸದ್ಯಃ  ಅಲ್ಲಿದ್ದ

ರಾಯ್ತು, ಮುಂದೆ ಏನೇನಾಗುತ್ತೋ ಯಾರಿಗೆ ಗೊತ್ತು ?”

     ಕೊನೆಯ ಮಾತಿನ ಧ್ವನಿಯಯಲ್ಲಿ ಯಾವ ಭಾವವಿತ್ತೆಂದು ಊಹಿಸಲು

ಕುಸುಮಾ ಯತ್ನಿಸಿದಳು ಆದರೆ ಸಫಲಳಾಗಲಿಲ್ಲ

     ಬಹಳ ಕಾಲ ಯೋಚಿಸಿ ನುಡಿದ ಮಾತು ಎ೦ಬ೦ತೆ ಕುಸುಮಾ ಹೇಳಿ

ವಳು :

    “ಅಂತೂ ನೀವು ಬೆಂಗಳೂರಿಗೇ ಬಂದದ್ದು ಒಳ್ಳೇದಾಯ್ತು".
    ಅದು ಆರಂಭ, ಒಂದು ವಾರ ಸುನಂದಾ ಬಂದರೆ, ಅನಂತರದ ವಾರ 

ರಾಧಮ್ಮ-ಕುಸುಮೆಯರು ಶೇಷಾದ್ರಿಪುರಕ್ಕೆ ಬರಬೇಕು--ಎಂದು ಗೊತ್ತಾ ಯಿತು.

    ಗಂಡನ ಜೊತೆಯಲ್ಲಿ ಹಿಂದೆ ವಾಸಿಸುತ್ತಿದ್ದ ಮನೆ ಈಗಿನದಕ್ಕಿಂತ ಹೆಚ್ಚು

ಅನುಕೂಲವಾಗಿತ್ತು. ಅದು ಪುಟ್ಟದಾಗಿದ್ದರೂ ಅಚ್ಚುಕಟ್ಟಾದುದು. ತಾರಸಿ ಕಟ್ಟಡ. ಈಗ ದೊರೆತಿದ್ದುದು ಮಂಗಳೂರು ಹೆಂಚಿನ ಹಳೆಯ ಕಾಲದಮನೆ.

    “ಈ ಮನೆ ಸಾಕು ಅಲ್ವೆ?” ಎಂದು ಕೃಷ್ಣಪ್ಪನವರು ಮಗಳನ್ನು ಕೇಳಿ 

ದರು.

    "ಧಾರಾಳವಾಯ್ತು, ಇನ್ನೆಷ್ಟು ಬೇಕು ;" ಎಂದಳು ಸುನಂದಾ.
    ರಾಮಕೃಷ್ಣಯ್ಯನ ಮನೆ ಸಮೀಪವಾಗಿಯೆ ಇದ್ದುದರಿಂದ ಸುನಂದೆಗೆ 

ಬೇಸರವಾಗಲಿಲ್ಲ ಕೃಷ್ಣಪ್ಪನವರಿಗೂ ಅಷ್ಟೆ. ಬೆಂಗಳೂರಿನ ನಿವಾಸಿಯಾಗಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಅವರು ಯತ್ನಿಸಿದರು ಬೇಗನೆ ಆ ಯತ್ನದಲ್ಲಿ ಜಯಶೀಲರಾದರು.

     ಒಂದು ದಿನ ವೆಂಕಟರಾಮಯ್ಯ ಬಂದಿಳಿದ. “ಏನೋ ಕೆಲಸವಿತ್ತು, 

ಬಂದೆ," ಎಂದ.

   ಆದರೆ ವಿಜಯ ತನ್ನ ಅಕ್ಕನಿಗೆ ಬರೆದ ಕಾಗದದಲ್ಲಿ ನಿಜ ಸಂಗತಿ ಇತ್ತು. 

'ಹೊಸ ಮನೆಯಲ್ಲಿ ಹೇಗಿದೀರೋ ನೋಡಿಕೊಂಡು ಬರಲು ಕಳಿಸಿದ್ದೇನೆ....'

    ವೆಂಕಟರಾಮಯ್ಯ, "ತಿರುಗಾಡ್ಕೊಂಡು ಬರ್‍ತೀನಿ" ಎಂದಾಗ, ಕೃಷ್ಣಪ್ಪ 

ನವರು ಕೇಳದರು: