ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೫೫

 ....ವೆಂಕಟರಾಮಯ್ಯ ಊರಿಗೆ ಹೊರಟು ಹೋದ ಎರಡು ದಿನಗಳಲ್ಲೆ
ಕೃಷ್ಣಪ್ಪನವರು ಸೋಮಶೇಖರನಲ್ಲಿಗೆ ಬಂದರು. ಹಿಂದಿನ ಸಾರೆ ಬಂದಿದ್ದ 
ಸಮಯವೇ.
 "ಸಾಯಂಕಾಲ ತಡವಾದರೆ ಸಿಗ್ತೀರೋ, ಇಲ್ಲವೊ ಅಂತ, ಕೋರ್ಟನಿಂದ 
ನೀವು ಬರೋ ಹೊತ್ತು ನೋಡ್ಕೊಂಡೇ ಬಂದೆ,"ಎಂದರು.
"ಬನ್ನಿ. ಏನ್ಸಮಾಚಾರ?”
ಏನು ಸಮಾಚಾರವೆನ್ನುವುದು ಕೇಳಿ ಕೇಳಿ ರೂಢಿಯಾಗಿದ್ದ ಕುಶಲ ಪ್ರಶ್ನೆ.
ತಮ್ಮ ಹಿರಿಯ ಮಗಳ ವಿಷಯ ಮಾತನಾಡುವುದಕ್ಕೇ ಅವರು ಬಂದಿದ್ದ
ರೆಂದು ಸೋಮಶೇಖರ ಊಹಿಸಿದ.
  “ನಮ್ಮದೊಂದು ಸ್ವಂತದ ಮನೇನ ಮಾರಿದ ವಿಷಯ ನಮ್ಮಳಿಯ
ನಿಮಗೆ ಹೇಳಿದಾರೋ ಏನೋ."
  ಸೋಮಶೇಖರ ಇಲ್ಲವೆನ್ನಲೂ ಇಲ್ಲ, ಹೌದೆನ್ನಲೂ ಇಲ್ಲ. ಕೃಷ್ಣಪ್ಪನವರೇ
ಮುಂದೆ ಅಂದರು:
 “ಸ್ವಲ್ಪ ಸಾಲವಿತ್ತು. ಅದನ್ನೆಲ್ಲಾ ಸಂದಾಯಮಾಡಿ ಎರಡು ಸಾವಿರದ
ಆರು ನೂರು ಉಳೀತು. ಎರಡು ಸಾನಿರಾನ ಫಿಕ್ಸೆಡ್  ಡಿಪಾಜಿಟಾಗಿ ಬ್ಯಾಂಕಿ 
ನಲ್ಲಿಟ್ಟದೀನಿ."
 ಸಾವಿರಕ್ಕೆ ಲಕ್ಷದ ಬೆಲೆಯನ್ನು ಕೊಟ್ಟು ಅವರು ಮಾತನಾಡುತಿದ್ದ ರೀತಿ
ವಿಸ್ಮಯಕರವಾಗಿತ್ತು.
ಮುಂದೆ?_ಎಂದು ಬರಿಯ ನೋಟದಿಂದಲೆ ಸೋಮಶೇಖರ ಪ್ರಶ್ನಿಸಿದ.
"ಆ ಹಣವನ್ನ ನನ್ನ ಇಬ್ಬರು ಮಕ್ಕಳಿಗೂ ಸಮನಾಗಿ ಹಂಚಿ ಒಂದು
ಉಯಿಲು ಸಿದ್ಧಪಡಿಸ್ಬೇಕು.”
  ಕೃಷ್ಣಪ್ಪನವರ ಆತುರ ಕಂಡು ಸೋಮಶೇಖರ ಮನಸಿನಲ್ಲೆ ನಕ್ಕ. ದೊಡ್ಡ 
ಮಗಳ ಪ್ರಶ್ನೆಯನ್ನು ಅವರೆತ್ತಲಿಲ್ಲವಲ್ಲಾ_ಎಂದು ಅವನಿಗೆ ಸ್ವಲ್ಪ ನಿರಾಸೆ
ಯಾಯಿತು. ಆದರೆ ಆಕ್ಷಣವೇ, ಸದ್ಯಃ ಎತ್ತದೆ ಇದ್ದುದೇ ಮೇಲಾಯಿತಂದು
ಸಮಾಧಾನವೂ ಆಯಿತು.
 “ಆದಕ್ಕೇನು? ಮಾಡಿದರಾಯ್ತು.”
 “ಆದರೆ ನಮ್ಮ ಆಳಿಯನಿಗೆ, ಅಂದರೆ ವೆಂಕಟರಾಮಯ್ಯನಿಗೆ, ಇದು ಇಷ್ಪ