ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ

 "ಕುಸುಮಾ.  ಈಗ ಉತ್ತರ ಹೇಳಿ. ಇಂಥ ಮನುಷ್ಯ  ನನ್ನ ಗಂಡ ಅಂತ

ಯಾಕಾದರೂ ಅನಿಸ್ಕೊಳ್ಲಿ ? ಹೀಗಿರೋದಕ್ಕೆ ಏನಾದರೂ ಅರ್ಥ ಉಂಟೆ ? ಯಾವಾಗಲೂ ಎದೆ ಮೇಲಿನ ಈ ಕುರ ಇಟ್ಕೊಂಡೇ ಬದುಕೋಕಾಗುತ್ತಾ ?"

ಏನಾದರೂ ಹೇಳಬೇಕೆಂದು ಕುಸುಮಾ ಚಡಪಡಿಸಿದಳು.  ಆದರೆ ಹೇಳಲು

ಏನೂ ತೋಚಲಿಲ್ಲ.

 "ಯಾಕೆ ಸುಮ್ಮನಿದೀರಿ ಕುಸುಮಾ.  ವಿಚಿತ್ರವಾಗಿ ಮಾತಾಡ್ತಿದೀನಾ

ನಾನು ? ನನಗೆ ಹುಚ್ಚು ಹಿಡಿದಿದೇಂತ ನೀವು ಭಾವಿಸೋದಿಲ್ಲ ತಾನೆ ?"

"ಯಾಕಕ್ಕ ಹಾಗೆ ಹೇಳ್ತೀರಾ ? ನೀವು ಅನುಭವಿಸ್ತಿರೋದು ಹೆಣ್ಣಾದ ನನಗೆ ಅರ್ಥವಾಗೋದಿಲ್ಲಾಂತಲೆ ?"

"ಮತ್ತೆ ? ಮಾತನಾಡಿ ಹಾಗಾದರೆ. ಸುಮ್ನಿರಬೇಡಿ, ದಮ್ಮಯ್ಯ. ನೀವು ನನ್ನನ್ನು ಬಯ್ದರೂ ಸರಿಯೆ. ಆದರೆ ಸುಮ್ನೆ ಮಾತ್ರ ಇರಬೇಡಿ ."

"ಇಂಥ ದುರವಸ್ತೆ ಪರಮ ಶತ್ರುವಿಗೂ ಬರಬಾರದು ! " "ನೀವು ಮೆರೆತಿರಾ ಕುಸುಮಾ ? ಹಿಂದೆ ನಾನಿಲ್ಲೇ ಇದ್ದಾಗ ನಾವಿಬ್ಬರೂ ಗಂಭೀರ ಚರ್ಚೆ ನಡೆಸ್ತಿದ್ವಿ, 'ಮಾಡೋಕೆ ಏನೂ ಇಲ್ದೇ ಹೋದ್ರೂ ಮಾತಾ ಡೋಕೆ ಏನಂತೆ ? " ಎಂದಿದ್ರಿ ನೀವು. ಆದರೆ ಆಗಲೇ ನನ್ನ ಪಾಲಿಗೆ ಅದು ಬರಿ ಮಾತು ಮಾತ್ರ ಆಗಿರಲಿಲ್ಲ. "

"ಆಗ ನನಗೆ ನಿಮ್ಮ ವಿಷಯ  ತಿಳಿದಿರಲಿಲ್ಲ  ಸುನಂದಕ್ಕೆ."
"ನನ್ನ ಮದುನೆ ಯಾವತ್ತೋ  ಹಾಸ್ಯಾಪ್ಪದವಾಯ್ತು ಕುಸುಮಾ.   ಆಗಲೇ
ಅವನ್ನು ಮುಕ್ತಾಯಗೊಳಿಸ್ಬೇಕೂಂತಿದ್ದೆ. ಆದರೆ ದೈರ್ಯವಿರಲಿಲ್ಲ.  ತಂಗಿ                          

ಯೋಚ್ನೆ, ಮಗುವಿನ ಯೋಚ್ನೆ, ಸಮಾಜದ ನಿಂದೆ......"

"ಸಮಾಜಕ್ಕೆ ಕಣ್ಣೆಲ್ಲ."
 "ಈಗ ಹೀಗಿದೀನಿ. ನನ್ನ ನ್ನೇನೂ ಪರಮ  ಸಾತ್ವಿಕಳು  ಆಂತ ಜನ
ಹೇಳ್ತಾರೇನು?  ಕೆಟ್ಟ ನಡತೆಗಾಗಿ ಗಂಡ ಬಿಟ್ಟದಾನೆ ಆಂತಾರೆ. ಗಂಡನನ್ನು
ಮಾತ್ರ ಆ ಜನ ಏನೂಆನ್ನೋದಿಲ್ಲ."
 "ಅದು ಲೋಕ ನಿಯನು."
 "ಗಂಡನ ನಡತೆ ಕೆಟ್ಟಿದೇಂತ  ಹೆಂಡತಿ ಬಿಡೋಕಾಗಲ್ವ?"
 "ಅದು ಅವರ   ದೃಷ್ಟೀಲಿ  ಧರ್ಮವಲ್ಲ."