ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ಏಕಾಂಗಿನಿ ದೊಳಗಿತ್ತು. ಮನಸಿನ ಪಾತ್ರೆಯಲ್ಲಿ ಎಲ್ಲ ಭಾವನೆಗಳನ್ನೂ ಒಟ್ಟಿಗೆ ಸೇರಿಸಿ ಬೇಯಿಸುತಿದ್ದ ಹಾಗೆ. ಉರಿಯುತಿದ್ದ ಮೈಯೇ ಕೊಳ್ಳಿ.

 ಸುನಂದೆಗೆ ಅನಿಸಿತು: ಸಾಧ್ಯವಿಲ್ಲ, ತನ್ನಿಂದ ಖಂಡಿತ ಸಾಧ್ಯವಿಲ್ಲ. ಕಾನೂ

ನಿನ ಮರೆ ಹೊಕ್ಕು ವೈಯಕ್ತಿಕ ಸ್ವಾತಂತ್ರ್ಯವನ್ನು ಗಳಿಸುವುದು ತನ್ನಿಂದಾ ಗದ ಮಾತು. ಆ ವಿಚಾರಣೆಯ ಚಿತ್ರಹಿಂಸೆಯಿಂದ ಬದುಕಿ ಪಾರಾಗುವುದು ದುಸ್ತರ....

 ಮನೆತಲುಪಿದೊಡನೆಯೇ ಸುನಂದಾ, ಸರಸ್ವತಿಯನ್ನೆತ್ತಿಕೊಂಡು, ದೀರ್ಘ 

ಕಾಲ ಅಗಲಿದ್ದವಳ ಹಾಗೆ ಆ ಮುದ್ದು ಮುಖಕ್ಕೆ ಮುತ್ತಿನ ಮಳೆಗರೆದಳು.

 ಎಷ್ಟು  ಹೊತ್ತಾದರೂ  ಮಗಳು ಕಾಣಿಸಲಿಲ್ಲವೆಂದು ಚಿಂತೆಗೊಳಗಾಗಿದ್ದ 

ಕೃಷ್ಣಪ್ಪನವರು ಕೇಳಿದರು:

 “ರಾಧಮ್ಮನವರು ಸಿಕ್ಕಿದ್ದರಾ?" 
 “ಹೂಂ. ಅಲ್ಲಿಂದ ಸೀತಮ್ಮನ ಮನೆಗೆ ಹೋದೆ-ಬಸವನಗುಡಿಗೆ.” 
 “ಅದಕ್ಕೇ ತಡವಾಯ್ತು ಅನ್ನು.” 
 ಮನೆಯ  ಛಾವಣಿಯ  ಆಶ್ರಯದಲ್ಲಿ ಸುನಂದೆಯ ಮನಸ್ಸಿನ ನೆಮ್ಮದಿ 

ಸ್ವಲ್ಪ ಮಟ್ಟಿಗೆ ಮರಳಿ ಬಂತು. ಮೊದಲಬಾರಿಗೆ ಕೊಂಡು ಬಿಟ್ಟು ಸುತ್ತು ಮುತ್ತಲಲ್ಲೇ ಹಾರಾಡಲೆತ್ನಿಸಿ, ಗಾಬರಿಗೊಂಡು ಹಿಂತಿರುಗಿದ ಪುಟ್ಟಹಕ್ಕಿಯ ಹಾಗಿತ್ತು ಆಕೆಯ ಮನೋಸ್ಥಿತಿ.

 ಅಡುಗೆ  ಊಟಗಳಾದುವು. ನಿದ್ದೆಯ  ರಕ್ಷಣೆಯಲ್ಲಿ  ಯೋಚನೆಗಳನ್ನೆಲ್ಲ 

ದೂರವಿಡಲು ಸುನಂದಾ ಯತ್ನಿಸಿದಳು.

 ....ಕತ್ತಲು ಕಳೆಯಿತು. ಯೋಚನೆಗಳು ಮತ್ತೆ “ಸುಪ್ರಭಾತ!” ಎಂದುವು.
 ಈಗ, ಹಿಂದಿನ ದಿನದ ತನ್ನ ಸಾಹಸ ಪ್ರವಾಸ “ಭೀಕರ'ವಾಗಿ ಸುನಂದೆಗೆ

ತೋರಲಿಲ್ಲ. ಸೋಮಶೇಖರ ಕೊಟ್ಟಿದ್ದ ಕಾನೂನಿನ ವಿವರಣೆಯ ನೆನಪು 'ಭಯ'ವನ್ನುಂಟುಮಾಡಲಿಲ್ಲ. ತಾನು ಮಾಡಿದುದು, ಹಿಂದಿನ ದಿನ ಹಾಗೆ ಮಾತನಾಡಿದುದು, ಸರಿಯಾಗಿಯೇ ಇತ್ತು ಎಂಬ ಬಾವನೆ ಮೊಳೆತು ಬಲಿ ಯಿತು. ಮಾಡಬೇಕೆಂದಿದ್ದ ಕೊನೆಯ ನಿರ್ಧಾರ ಮೆಲ್ಲಮೆಲ್ಲನೆ ಸ್ಪಷ್ಟವಾಗ ತೊಡಗಿತು.

 ತಂದೆಯೊಡನೆ ಆ ವಿಷಯ ಸುನಂದಾ ಪ್ರಸ್ತಾಪಿಸಿರಲಿಲ್ಲ. ಆ ಮಾತುಕತೆ