ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಏಕಾ೦ಗಿನಿ

ದ್ದರೂ ಬೇಗನೆ ಸಾಯುವವನು. ಮುಂದೆ ಬದುಕಬೇಕಾದವಳು ಸುನಂದಾ

ಆ ಎಳೆ ಕೂಸನ್ನು ಕಾಪಾಡಬೇಕಾದ್ದು ಅವಳು, ಆಕೆಯ ಸುಖಮುಖ್ಯ--
ಹಿತಮುಖ್ಯ...' ಮತ್ತೆ ಘೋರ ರೂಪ ತಳೆಯತೊಡಗಿದ ಶಂಕೆ ಸಂದೇಹ

ಗಳು. ಪುನಃ ಸಮಾಧಾನ ಹೇಳುವ ಯತ್ನ.” ಬೆಳಗಿನಜಾವ ಸ್ವಲ್ಪ ಹೊತ್ತು ಅವರಿಗೆ ಜೊಂಪು ಹತ್ತಿತು. ಎದ್ದವರೇ

ಮನೆ ಬಿಟ್ಟು ಹೊರಟರು. ಯಾರಿಗೂ ಏನನ್ನೂ ಹೇಳಲಿಲ್ಲ.

"ರಾಮಕೃಷ್ಣಯ್ಯನವರ ಮನೆಗೆ ಹೋಗಿರ್ತಾನೆ” ಎಂದಳು ಸುನಂದಾ.

ಅ ಊಹೆ ನಿಜವಾಗಿತ್ತು,

ಆದರೆ ಬೆಳಗಾಗಿ ಬಿಸಿಲೇರಿ ಬಹಳ ಹೊತ್ತಾದರೂ ಅವರು ಬರದೇ ಇದ್ದು

ದನ್ನು ಕಂಡು ಎಲ್ಲರೂ ವಿವಂಚನೆಗೊಳಗಾದರು. 

“ಎಲ್ಲಿದೆಯಕ್ಕ ಆವರ ಮನೆ? ವಿಳಾಸ ಹೇಳು. ಇವರು ಹೋಗಿ ನೋ ಡ್ಕೊ೦ಡು ಬರ್ಲಿ," ಎ೦ದಳು ವಿಜಯಾ. “ಮನೆ ಸಮೀಪದಲ್ಲೇ ಇದೆ. ಮಧಾಹ್ನದವರೆಗೂ ನೋಡೋಣ.ಊಟದ ಹೊತ್ತಿಗೆ ಬರಬಹುದು,” ಎಂದು ಸುನಂದಾ ಉತ್ತರವಿತ್ತಳು. ಊಟದ ಹೊತ್ತಿಗೆ ಅವರು ಬಂದರು. ಕಣ್ಣುಗಳು ಆಳಕ್ಕಿಳಿದು, ಕೆನ್ನೆಗಳು

ಗುಳಿಬಿದ್ದು, ಮುಖ ವಿಕಾರವಾಗಿತ್ತು. ಆ ಹುಬ್ಬುಗಳ ಮೇಲೆ ಹೆಪ್ಪಗಟ್ಟಿ
ನಿ೦ತಿತ್ತು ಯಾತನೆ.

ಬಂದವರು ಹೊದ್ದು ಕೊಂಡಿದ್ದ ಶಾಲನ್ನು ಚಾಪೆಯ ಮೆಲಕ್ಕೆ ಎಸೆದರು. "ಸುನ೦ದಾ!" ಎ೦ದು ಕರೆದರು. ಎ೦ದಿನ 'ಸು೦ದಾ' ಆಗಿರಲಿಲ್ಲ ಮಗಳು. ಆಕೆ ಎದುರು ನಿ೦ತೊಡನೆಯೇ ಅವರೆ೦ದರು: “ನನ್ನ ಅಕ್ಷೇಪವಿಲ್ಲವಮ್ಮ. ದೇವರು ಹ್ಯಾಗೆ ಬುದ್ಧಿ ಕೊಡ್ತಾನೋ ಹಾಗೆ

ಮಾಡು. ನಾನು ತೀರ್ಥಯಾತ್ರೆ ಹೊರಡ್ಬೇಕೂ೦ತಿದೀನಿ. ನನಗೆ ಅಡ್ಡಿ

ಯಾಗ್ಬೇಡ." “ಅಪ್ಪಾ!” ಎಂದು ಕೂಗಿದಳು ಸುನಂದಾ. ಕರ್ಕಶವಾಗಿತ್ತು ಸ್ವರ. ತಂದೆ ಯೆಡೆಗೆ ಮಗಳು ಧಾವಿಸಿ ಅ ಕಾಲುಗಳೆರಡನ್ನೂ ಹಿಡಿದುಕೊಂಡಳು. ದೇಹ

ಸರಿದು, ತಲೆ ಪಾದಗಳ ಮೇಲೆ ನಿ೦ತಿತು.