ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೦೪ ಏಕಾಂಗಿನಿ
.....ಹೆಂಡತಿಯೊಡನೆ ರಾತ್ರೆ ಮಾತನಾಡಲು ಒಳ್ಳೆಯ ವಿಷಯ ಎಂದು ಕೊಂಡರು ನಾಯಾಧೀಶರು. ಅವರ ದೃಷ್ಟಿ ಅರ್ಜಿದಾರಳನ್ನು ಪರೀಕ್ಷಿಸಿತು. ಕತ್ತಿನಲ್ಲಿನ್ನೂ ಇತ್ತು ಮಾಂಗಲ್ಯ ಸೂತ್ರ, ಹೇಗೆ ದಿಟ್ಟತನದಿಂದ ನಿಂತಿದಾಳೆ! ಪೋಷಾಕಿನಲ್ಲಿ ಆಡಂಬರವಿಲ್ಲ. ಬಣ್ಣದ ಚಿಟ್ಟೆಯಲ್ಲ ಅನ್ನೋದು ಸ್ಪಷ್ಟ. ಏನು ಕಡಮೆ ಇವಳಿಗೆ? ಆತ ಯಾಕೆ ವೆಚ್ಚಲಿಲ್ಲ? ಎಂಥವನೋ ಆ ಪ್ರಾಣಿ? ಸೋಮಶೇಖರನ ಏರಿದ ಸ್ವರ ಕೇಳಿಸಿತು: “ಘನ ಕೋರ್ಟಿನಲ್ಲಿ ವಿವಾಹ ವಿಚ್ಛೇದವಾಗುವಂತೆ ಅರ್ಜಿದಾರಳ ಪರ ಡಿಕ್ರಿ ಬಗ್ಗೆ ಪ್ರಾರ್ಧನೆ—ಅಂತ ಅರ್ಜಿಯಲ್ಲಿದೆ. ನೀವು ಪ್ರಾರ್ಧಿಸುತ್ತಿರಾ?” "ಹೌದು." "ಮುಗಿಯಿತು ಖಾವೆಂದರೆ." ಖಾವಂದರು ಸ್ವತಃ ತಾವಾಗಿಯೂ ಕೆಲ ಪ್ರಶ್ನೆ ಕೇಳಿದರು, ಸುನಂದಾ ಉತ್ತರ ಕೊಟ್ಟಳು. ಇನ್ನು ಮನಸ್ಸು ಬದಲಾಯಿಸುವ ಪ್ರಮೇಯವಿಲ್ಲವೆಂದಳು. 'ಜೀವನಾಂಶ?" “ನನಗೆ ಬೇಕಾಗಿಲ್ಲ " ಲರ್ಜಿಯಲ್ಲಿ ಮಗುವಿನ ಮಾತು ಬಂದಿತ್ತು. 'ಮಗು ಇಲ್ಲಿದೆಯೇನು?” ಎ೦ದು ಸಾಯಾಧೀಶರು ಕೇಳಿದರು. "ಹೌದು ಖಾವೆಂದರೆ, ಎಂದ ಸೋಮಶೆಖರ, “ಎಲ್ಲಿ ನೋಡೋಣ." ದಫೆದಾರ ಮಗುವನ್ನೆತ್ತಿಕೊಂಡಿದ್ದ ಮುದುಕನನ್ನು ಕರೆದ. "ಬಾ ಇಲ್ಲಿ." ಕ್ರಿಷ್ಣಪ್ಪನವರು ಮಗುವಿನೋಡನೆ ಒಳಬ೦ದರು. ಎತ್ತರದಲ್ಲಿ ಕುಳಿತಿದ್ದ ನ್ಯಾಯಾಧೀಶರನ್ನು ಸರಸ್ವತಿ ನೋಡಿದಳು. ಒಂದು ಬದಿಯಲ್ಲಿ ನಿಂತಿದ್ದ ತಾಯಿಯನ್ನು ಕ೦ಡಳು. ಆಕೆಗೆ ಭಯವಾಯಿತು. "ಅಮ್ಮಾ!" ಎಂದು ಸುನಂದೆಯತ್ತ ಆಕೆ ಕೈ ಚಾಚಿದಳು. ಮಗು ಬಲು ಮುದಾಗಿ ತೋರಿತು ನಾಯಾಧೀಶರಿಗೆ, [ಸೊಸೆಯ ಮಗು ರಾಜಿಯ ಹಾಗೆಯೇ.] ಮಗು ಕೈ ಚಾಚಿದ್ದರೂ ಸುನಂದಾ ಎತ್ತಿಕೊಳ್ಳುವುದಾದರೂ ಹೇಗೆ?