ಏಕಾಂಗಿನಿ
ಈ ಕಾದಂಬರಿಯನ್ನು ಕುರಿತು ಸಾಧನಾಗೆ ಒಂದು ಕಾಗದ-
ಸಹಧರ್ನಿಣಿ ಸಾಧನಾ,
ನವರಾತ್ರಿಕಾಣಕೆಯಾಗಿ ನಿನಗೆ ಒಪ್ಪಿಸಿರುವ 'ಏಕಾಂಗಿನಿ'ಯನ್ನು ಓದಿ
ಯಾಯ್ತೆ ?
ನಿನ್ನ ಪ್ರತಿಕ್ರಿಯೆಯನ್ನು ಊಹಿಸಿಕೆಗೊಳ್ಳಬಲ್ಲೆ, ನಿಜ, ಆದರೂ ನಿನ್ನ ಮಾತುಗಳಲ್ಲೇ ಅದೇನೆಂದು ತಿಳಿಯುವ ತವಕ. ನೀನಿದನ್ನು ಬರೆಯುವುದಕ್ಕೆ ಮುಂಚೆ, ಇಗೋ ಒ೦ದು ಚುಟಕು
ಕಾಗದ. 'ಏಕಾಂಗಿನಿ'ಯ ಆರಂಭದ ನಾಲ್ಕು ಸಾಲುಗಳನೋದಿಯೆ ನೀನು ಕಂಡು ಹಿಡಿದಿರಬೇಕು--ಇದು 'ಪಾಲಿಗೆ ಬ೦ದ ಪಂಚಾಮೃತ'ದ ಮು೦ದಿನ ಭಾಗ ವೆಂಬುದನ್ನು.
'ವಾ, ಪಂಚಾಮೃತ'ವನ್ನು ಎಷ್ಟೋಜನ ಹೊಗಳಿದ್ದರು, ಅಷ್ಟೇ ಜನ ತೆಗಳಿದ್ದರು.
ಮೃಧುವಿನಂತಹ ಮೆಚ್ಚುಗೆಗಿಂತ ಖಾರವಾದ ಟೀಕೆಯ ಕಡೆಗೆ ಹೆಚ್ಚು ಗಮನಕೊಡುವುದಗತ್ಯ, 'ಪುಟ್ಟಣ್ಣ ಪುರುಷ ಸಮಾಜದ ಪ್ರತಿನಿಧಿಯಲ್ಲ' ಎಂಬುದು ಒ೦ದು ಟೀಕೆ. ಒಪ್ಪಿದೆ, ಆತನ ಪಾತ್ರವನ್ನು ಪುರುಷ ಸಮಾಜದ ಪ್ರತೀಕವೆಂದು ನಾನು ಸೃಷ್ಟಿಸಿಯೇ ಇಲ್ಲ! ನಾನು ಆಪೇಕ್ಷೆ ಪಟ್ಟದು ವಿಕೃತ ವ್ಯಕ್ತಿತ್ವದ ವಿಶಿಷ್ಟ ಪಾತ್ರವೊಂದನ್ನು. ಅಂತಹ ವ್ಯಕ್ತಿಯ ಜತೆಯಲ್ಲಿ ಮಧ್ಯವೇ ವರ್ಗದಲ್ಲಿ ಸಾಮಾನ್ಯವಾಗಿ ಕಾಣಸಿಗುವ ವಿದ್ಯಾವಂತೆಯಾದ ಸದ್ಗೃಹಿಣಿ ಬದುಕುವುದು ಸಾಧ್ಯವೇ?__ ಎಂಬುದಷ್ಟೆ ಅಲ್ಲಿ ನಾನು ಮುಂದಿರಿಸಿದ ಪ್ರಶ್ನೆ ಪುಟ್ಟಣ್ಣನ ಪಾತ್ರ ಮತ್ತಷ್ಟು ತರ್ಕಬದ್ಧವಾಗಿರಬೇಕಿತ್ತು__ಎನ್ನುವುದನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ. ಆದರೆ ಆ ಪಾತ್ರ ಸೃಷ್ಟಿಯ ಅಲ್ಪ ನ್ಯುನತೆ ಯಿಂದಾಗಿ, ಕತೆಯ ಮೂಲ ಅಂಶಕ್ಕೇನೂ ಕುಂದು ಉಂಟಾಗಿಲ್ಲವೆಂಬುದೆ ನನ್ನ ಅಭಿಪ್ರಾಯ.