ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯ ಏಕಾಂಗಿನಿ

ಬೇರೆ ವಾತಾವರಣದಲ್ಲಿ ಆ ಮಾತು ಕೇಳಿ ವಿಜಯಳ ಮೈ ಪುಲಕಿತಗೊಳ್ಳುವುದು ಸಾಧ್ಯವಿತ್ತು. ಮಾರನೆಯ ದಿನ ರಾತ್ರೆ ಆಕೆಯ ಶಯನ ಗಂಡನ ಜೊತೆಗೆ. ಆದರೆ ಈಗ ಆ ಯೋಚನೆ, ಮರಳಲ್ಲಿ ಇಂಗಿದ ನೀರ ಹನಿಯ ಹಾಗೆ ಹೇಳ ಹೆಸರಿಲ್ಲದೆ ಮರೆಯಾಯಿತು. ಉಳಿದುದೊಂದೇ-- ಬೆಂಗಾಡಿನ ಉಸುಬು, ಸುಖಿಯಲ್ಲದ ಅಕ್ಕನನ್ನು ಬಿಟ್ತಿರಬೇಕೆಂಬ ದುಃಖ.
 "ಅಕ್ಕ, ನಿನ್ನ ಹಾಸಿಗೇನ ಇನ್ನೂ ಈಚೆಗೆ ಎಳಕೋ ಅಕ್ಕಾ."
 ಸುನಂದಾ ಹಾಗೆ ಮಾಡಲೆಂದು ಮುಂದಾದಳು. ಸರಸ್ವತಿಗೆ ಎಚ್ಚರವಾಗದಂತೆ ಹಾಸಿಗೆಯನ್ನ ಮೆಲ್ಲನೆ ಎಳೆದು ತಂಗಿಯದಕ್ಕೆ ಜೋಡಿಸಿದಳು. 
 ಅಕ್ಕ-ತಂಗಿ ಮತ್ತೆ ಹಸುಳೆಗಳಾಗಿ ಒಬ್ಬರಿಗೊಬ್ಬರು ಆಹ್ತುಕೊಂಡು ಮಲಗಿದರು.
 .. ಕತ್ತಲು ಕಳೆದು ಬೆಳಗಾಯಿತು. ಆ ಮನೆಯಲ್ಲಿ ಆದು ಸಂಭ್ರಮದ ಹಗಲು, ಬಳಿಕ ಸಂಭ್ರಮದ ಇರುಳು.
 ಕೊನೆ ಘಳಿಗೆಯವರೆಗೂ ನಿಮಿಷವೂ ಬಿಡುವಿಲ್ಲದೆ ಸುನಂದಾ ಉತ್ಸಾಹದಿಂದ ಓಡಾಡಿದಳು. ಆಮಂತ್ರಿತರಾಗಿ ಬಂದಿದ್ದ ಮುತ್ತೈದೆಯರು ಕುತೂ ಹಲದಿಂದ ಆಕೆಯನ್ನು ನೋಡದಿರಲಿಲ್ಲ. 'ಸುನಂದೇನ ಗಂಡ ಬಿಟ್ಟುಬಿಟ್ಟದ್ದ್ ನಂತೆ'  ಎಂಬ ಆಲಾಪನೆಯನ್ನು ಕೆಲವು ಸ್ತ್ರೀ ಕಂಠಗಳು ಈಗಾಗಲೇ ಮಾಡಿಯೂ ಇದ್ದವು. ಅವರ ನೋಟಗಳೊಂದನ್ನೂ ಸುನಂದಾ ಲೆಕ್ಕಿಸಲೇ ಇಲ್ಲ. ಆಕ ಮುಂದಿರಿಸಿಕೊಂಡುದೊಂದೇ ಗುರಿ: ತಂಗಿಯನ್ನು ಹರ್ಷಚಿತ್ತಳಾಗಿಡುವುದು. ಅದಕ್ಕೋಸ್ಕರ ತಾನೊಂದು ಕ್ಷಣವೂ ಸಪ್ಪೆಮೋರೆ ಹಾಕುವಂತಿರಲಿಲ್ಲ. ಗುರಿ ಸಾಧನೆಯಲ್ಲಿ ಸುನಂದ ಯಶಸ್ವಿಯಾಗಿದ್ದಳು. 
 ಹಾಸಿಗೆಯ ಮೇಲೆ ಮೈಚಾಚಿದೊಡನೆ ಮಾತ್ರ, ಕತ್ತಲಲ್ಲಿ ಎಲ್ಲಿಲ್ಲದ ಬೇಸರ ಅವಳನ್ನು ಆವರಿಸಿತು. ಆದರೆ, ಬೇಸರಕ್ಕಿಂತಲೂ ಮಿಗಿಲಾಗಿತ್ತು ಓಡಾಟದ ಆಯಾಸ. ಸುನಂದೆಗೆ ಬೇಗನೆ ನಿದ್ದೆ ಬಂತು. 
 ಎರಡು ಮೂರು ದಿನಗಳಾದರೂ ಇದ್ದು ಹೋಗುವುದು ನ್ಯಾಯವಾಗಿತ್ತು. ಆದರೆ ಅಳಿಯನಿಗೆ ರಜವಿರಲಿಲ್ಲ. ಬೆಳಗ್ಗಿನ ರೈಲಿನಲ್ಲಿ ಹೊರಡುವುದೆಂದು ಗೊತ್ತಾಯಿಗಿತ್ತು.
 ಆದರೆ ಗಂಡನಿದ್ದ ಕೊಠಡಿಯಿಂದ ಎದ್ದು ಬಂದು, "ರಾತ್ರೆಯ ಗಾಡಿಗೆ