ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಏಕಾಂಗಿನಿ ಒಂದು ಲಕೋಟೆಯೊಳಗೆ ಎರಡು. ತಮಗೊಂದು, ಆಕ್ಕನಿಗೊಂದು. ಬರೆಯಲು ತಡವಾಯಿತೆಂದು ಕ್ಷಮಾಯಾಚನೆ ತಾನು ಆರೋಗ್ಯವಾಗಿದೇನೆಂದೂ ತನ್ನನ್ನೆಲ್ಲರೂ ಚೆನ್ನಾಗಿ ನೋಡುಕೊಳ್ಳುತ್ತಿರುವರೆಂದೂ ಆಶ್ವಾಸನೆ ಬೇಡಿಕೊಂಡ ಆಶೀರ್ವಾದಗಳು. “ಮಗು ಚೆನ್ನಾಗಿದಾಳಂತಾ?” ಎಂದು ಆಗಲೆ ಎರಡು ಬಾರಿ ಕೇಳಿ ಉತ್ತರ ದೊರೆಯದೆ ಸ್ವಲ್ಪ ಸಿಟ್ಟುಗೊ೦ಡಿದ್ದರು ಸುನಂದೆಯ ತಾಯಿ, ಮೂಗಿನ ಮೇಲೆ ಶನ್ನಡವೇರಿಸಿ ಕೃಷ್ಣಪ್ಪನವರು ಮೌನವಾಗಿ ಕಾಗದ ಓದಿ ಮುಗಿದವರೆಗೂ, ಅವರು ಸಹನೆಯಿಂದ ನಿಂತರು. ತಲೆ ಬಾಗಿಸಿ ಕನ್ನಡಕದೆಡೆಯಿಂದ ಆವರು ತಮ್ಮನ್ನು ಕುರಿತು ಮುಗುಳು ನಕ್ಕಾಗ ಮಾತ್ರ ಆವರಿಗೆ ಮೈಯುರಿಯಿತು. “ಮಗು ಏನು ಬರೆದಿದೆ? ಸ್ವಲ್ಪ ಗಟ್ಟಿಯಾಗಿ ಓದ್ಬಾರ್ದೆ?" ಕೃಷ್ಣಪ್ಪನವರು ಸಣ್ಣಗೆ ನಕ್ಕು ತಲೆಯೆತ್ತಿ ಗಟ್ಟಿಯಾಗಿ ನಿಧಾನವಾಗಿ ಓದಿ ಹೇಳಿದರು. ಓದಿ ಮುಗಿದ ಬಳಿಕ ಕಾಗದವನ್ನು ಮಡಚಿ ಹಾಗೆಯೇ ಲಕೋಟೆಯೊಳಗಿರಿಸಿ ಅವರು ಸಮಾಧಾನದ ನಿಟ್ಟುಸಿರು ಬಿಟ್ಟರು. "ಆಂತೂ ವಿಜಯಾ ಒಳ್ಳೇ ಮನೆ ಸೇರಿದ ಹಾಗಾಯ್ತು.ಇನ್ನೆಲ್ಲಾ ದೇವರಿಚ್ಛೆ." ಅಷ್ಟರಲ್ಲೆ ಅ ವ ರಿ ಗೆ.ತನ್ನ ಕಾಗದವನ್ನೆತ್ತಿಕೊಂಡು ಒಳಹೋಗಿದ್ದ ಸುನಂದೆಯ ನೆನಪಾಯಿತು ಆವರು ಕರೆದರು. "ಸುಂದಾ,ಒದೇನಮ್ಮ ಬರೆದಿದಾವನಿಂಗೆ?" ... ಸುನಂದಾ ಆಗಲೇ ಕಾಗದವನ್ನು ಓದಿಯಾಗಿತ್ತು, ಅಕ್ಕನಿಗೆ ಬರೆದ ಆ ಓಲೆಯಲ್ಲಿದ್ದುದು ಸಲಗೆಯ ಧ್ವನಿ 'ಈ ಊರು ಬೇಜಾರು. ಹೊತ್ತೇ ಹೋಗಲ್ಲ. ಅವರು ಆಫೀಸಿನಿಂದ ಬರೋವರೆಗೂ ಎಷ್ಟು ಕಷ್ಟವಾಗುತ್ತೇಂತ!' ಅತ್ತೆಯ ವಿಷಯವಾಗಿ ಒಳ್ಳೆಯ ಮಾತು, “ನಿನ್ನ ಕೈಲಿ ಎಷ್ಟಾಗುತ್ತೋ ಅಷ್ಟು ಸಹಾಯ ಮಾಡಮ್ಮಾ ಅ೦ತಾರೆ. ಮೈದುನನೂ ಒಳ್ಳೆಯವರು. ಈಗಲೇ ಮದುವೆ ಮಾಡಿಕೊಳ್ಳೊದಿಲ್ಲವಂತೆ...ಮತ್ತೆ ತವರುಮನೆಯನೆನಪು. 'ನಿನ್ನೆ ರಾತ್ರೆ ಇದ್ದಕ್ಕಿದ್ದಂತೆ ಅಳು ಬಂದು ಬಿಡ್ತು. ಯಾಕಳ್ತೀಯಾ?–