ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಕಾಗದದೊಡನೆ ಹೊರಬಂದಳು. "ವಿಜಯಾ ನಿನಗೂ ಬರೆದಿದಾಳಾ?"ಎಂದು ತಾಯಿ ಕೇಳಿದರು "ಹೂಂ," ಎನ್ನುತ್ತ ಸುನಂದಾ ಕಾಗದವನ್ನು ತಂದೆಯ ಕೈಗೆ ಕೊಟ್ಟಳು. ಅವರು, ತಮ್ಮ ಕೈಲಿದ್ದುದನ್ನು ಮಗಳಿಗಿತ್ತು, ಆಗಲೆ ತೆಗೆದು ಕಿಟಕಿಯ ದಂಡೆಯ ಮೇಲಿರಿಸಿದ್ದ ಕನ್ನಡಕವನ್ನು ಮತ್ತೆ ಏರಿಸಿದರು. ಒಂದೆರಡು ಸಾಲುಗಳ ಮೇಲೆ ಮೌನವಾಗಿ ಕಣ್ಣೋಡಿಸಿ, ಬಳಿಕ, ಹೆಂಡತಿಗೂ ಕೇಳಿಸಲೆಂದು ಗಟ್ಟಿಯಾಗಿ ಓದತೊಡಗಿದರು. ಓದುತ್ತಲಿದ್ದಂತೆ ನಗು ಬಂತು. ಬಿದ್ದು ಬಿದ್ದು ನಕ್ಕರು. ನಗುತ್ತ ಓದಿದರು. ವಯಸ್ಸಾದ ಕಣ್ಣುಗಳಿಂದ ಹಷ್ರಾಶ್ರು ಉದುರಿತು.ಒಡಹುಟ್ಟಿದವರೊಳಗಿನ ಒಲವನ್ನು ತಿಳಿದು ತಾನು ಧನ್ಯ ಎಂದುಕೊಂಡರು. ಬಳಿಕ ಕೊನೆಯಲ್ಲಿ ಮಾರ್ಮಿಕವಾದ ಸಾಲಗಳಿದ್ದುವು, ಅಕ್ಕನನ್ನು ಕುರಿತು ತಂಗಿಯ ಕೊರಗು. ಅದನ್ನೋದುತ್ತಲಿದ್ದಂದೆ ಆನಂದ ಬಾಷ್ಪ ಸಂಕಟದ ಕಂಬನಿಯಾಯಿತು. ಉಸಿರಾಡುವುದೆ ಕಷ್ಟವೆನಿಸಿತು ಒಂದು ಕ್ಷಣ ಮಗು ತಮಾಷೆಯಾಗಿ ಬರೆದಿದ್ದ ಕಾಗದವನು ಓದಿ ಕೇಳಿ ತಾಯಿಯೂ ಸಂತೋಷದಿಂದ ಅತ್ತರು. ಅನಂತರ ಆ ದಿನವೆಲ್ಲಾ, ವಿಜಯಾ ತಮ್ಮೊಡನೆಯೇ ಸುಳಿದಾಡುತಿದ್ದಂತೆ ಅವರೆಲ್ಲರಿಗೂ ಭಾಸವಾಯಿತು. ವಿಜಯ ಬರೆದ ಕಾಗದಗಳಿಂದಲೇ ಹೃದಯ ತುಂಬಿತೆಂದು ಹೆಚ್ಚು ಮಾತನ್ನೇ ಯಾರೂ ಆ ಹೊತ್ತು ಆಡಲಿಲ್ಲ. ಮಾರನೆಯದಿನವೇ ಸುನಂದಾ ತಂಗಿಗೆಮಾರೋಲೆ ಬರೆದಳು.ಬಲುದೀಘ್ರವಾದ ಓಲೆ.ಅದರಲ್ಲಿಯೂ ಆಕೆ ಹೃದಯ ತೋಡಿಕೊಳ್ಳಲಿಲ್ಲ. ಆ ವಿಷಯ ಈ ವಿಷಯ ಬಲು, ಸ್ವಾರಸ್ಯವಾಗಿ, ತಂಗಿ ಅದನ್ನೋದಿ ವೆಚ್ಚುವಂತೆ ನಗುವಂತೆ ಬರೆದಳು. ಕೃಷ್ಣಪ್ಪನವರು ಆಶೀರ್ವಾದ ತಿಳಿಸಿದರು, ತಾಯಿಯಿಂದ ಆರೈಕೆಯ ವಿಷಯವಾಗಿ ಹಿತವಚನ.... ಮತ್ತೆ ಎಂದಿನಂತೆಯೆ ದಿನಗಳು,ಹಗಲಿರುಳ.... ನಡುವೆ ಕೆಲವಷ್ರ ಸುನಂದಾ ಅರಮನೆಯಲ್ಲಿರಲಿಲ್ಲ,ಸರಸ್ವತಿ ಎಂಬ ಮಗು ಹಿಂದಿನಿಂದಲೂ ಅಲ್ಲಿರಲಿಲ್ಲ-ಎಂದು ಯಾರಾದರೂ ಅಂದರೆ,ಕೃಷ್ಣಪ್ಪನವರೂ ಅವರ ಪತ್ನಿಯೂ ಆ ಮಾತನ್ನು ಖಂಡಿತ ನಂಬಲಾರರು,ಎನ್ನುವಂತಾಯಿತು ಪರಿಸ್ಥಿತಿ. ಆ ಮನೆಯ ಇರುವಿಕೆಯೊಡನೆ ಅಷ್ಟೊಂದು ಬೆರೆತ