ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ಮಗಳೆನ್ನೆತ್ತಿಕೊಂಡು ಸುನಂದಾ ಹೊರಕ್ಕೆ ಬಂದಳು. ಮೊಮ್ಮಗಳನ್ನು ತಾವೆತ್ತಿಕೊಳ್ಳುತ್ತ ಕೃಷ್ಣಪ್ಪನವರು ಕೇಳಿದರು.

“ಬೆಂಗಳೂರಿನಲ್ಲಿ ನಿಮ್ಮನೆ ಪಕ್ಕದಲ್ಲೆ ಒಬ್ಬರಿದಾರಲ್ಲಾ ಅವರ ಹೆಸರೇನು?”

ಸುನಂದೆಯ ಎದೆ ಗುಂಡಿಗೆ ತೀವ್ರವಾಗಿ ಬಡಿಯತೊದಗಿತು

“ಯಾರು ರಾಧಮ್ಮನೆ: ರಾಮಯ್ಯ ಅಂತ ಅವರ ಯಜಮಾನ್ರು.” “ಅವರೇನೇ, ಸುಂನದಾ, ರಾಧಮ್ಮನಿಗೊಂದು ಕಾಗದ ಬರೀತೀಯಾ?”

  • ಹೊ೦.'

ಎನೆಂದು ಅಕೆ ಕೇಳಲಿಲ್ಲ. ಕೇಳುವ ಆಗತ್ಯಏರಲಿಲ್ಲ.

“ಬಹಳ ದಿವಸವಾಯ್ತು. ಒಮ್ಮೆ ಹೋಗಿಯಾದರೂ ಬರೋದು ಮೇಲ ಅನಿಸುತ್ತೆ. ಹೋಗೋಕುಂಚೆ ವಿಷಯ ಏನೂಂತ ಸ್ವಲ್ಪವಾದರೂ ತಿಳಿದರೆ ಚೆನಾಗಿರುತ್ತೆ, ರಾಧಮ್ಮ ಉತ್ತರ ಬರೀಬಹುದು, ಅಲ್ವೆ?”

"ಬರೀಬಹುದು.”

ಅ ವಿಷಯ ಅಲ್ಲಿಗೆ ನಿಂತು, ದೊಡ್ಡ ಭಾರಏಳಿಸಿದವರಂತೆ ಕೃಷ್ಣವ್ವನವರು ಪ್ರಸನ್ನರಾಗಿ, ಮೊಮ್ಮಗಳನ್ನು ಹೆಗಲ ಮೇಲೆ ಕೊರಿಸಿಕೊಂಡರು


ರಾಧಮ್ಮನ ಕಾಗದಕ್ಕೋಸ್ಕರ ಬಹಳ ದಿನ ಕಾದಿರಬೇಕಾದ ಅಗತ್ಯವಿರ ಲಿಲ್ಲ, ಅದು ಬೇಗನೆ ಬಂತು. ಉತ್ತರ ರಾಧಮ್ಮನದೆ ಹೇಳಿ ಬರೆಸಿದ್ದು ಅವರ ಹುಡುಗನ ಹಸ್ತಾಕ್ಷರ, ಅಲ್ಲಲ್ಲಿ ರಾಮಯ್ಯ ಅದನ್ನು ತಿದ್ದಿದ್ದರು, ಕಾಗದ ಬಂತೆಂಬ ಸಂತೋಷ, ಅದನ್ನೋದುವಾಗ ಉಳಿಯುವುದು ಸಾಧ್ಯ ವಿರಲಿಲ್ಲ. ಅದರೊಳಗಿದ್ದ ವಿಷಯ ಅಂತಹುದು.

ನೀವು ವಿಳಾಸ ಕೊಡದೆ ಹೋಗಿ ದೊಡ್ಡ ತಪ್ಪು ಮಾಡಿದಿರಿ.ಎನ್ನೋಸಲ ನಿಮಗೆ ಬರಯಬೇಕೆಂದು ತೋರುತ್ತಿತ್ತು. ಅದರೆ ಎಳಾಸವಿರಲ್ಲಿಲ್ಲ. ಈಗಲುದರೂ ನೀವೇ ಬರೆದು ತಿಳಿಸಿದಿರಲ್ಲ. ಇದೇ ದೊಡ್ಡ ಸಮಾಧಾನ”