ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೪೭ ಕೇಷ್ಣಪ್ಪ ಅ೦ದರು: “ನಾನು ಸ್ವಲ್ಪ ತಿರುಗಾಡ್ಕೊಂಡು ಬರ್ತೀನಿ. ಚೀಲ ಇಲ್ಲೇ ಇರ್ಲಿ, ಆಗದೆ?” "ಹೋಗ್ಬಿಟ್ಟು ಬನ್ನಿ. ಇನ್ನೇನು, ಅವರು ಬರೋ ಹೊತ್ತೂ ಆಯ್ತು,” ಎಂದರು ರಾಮಕೃಷ್ಣಯ್ಯನ ಹೆಂಡತಿ, ಬೀದಿಯ ಕಡೆ ನೋಡುತ್ತಾ. ನಿದ್ದೆ ಮುಗಿದು ಕಣ್ಣು ತೆರೆದಾಗಲೆ, ತಾವೊಮ್ಮೆ ರಾಧಮ್ಮನನ್ನು ಕಂಡು ಬರಬೇಕೆಂಬ ಅಪೇಕ್ಷೆ ಅವರ ಮನಸ್ಸಿನಲ್ಲಿ ಸ್ಫುಟವಾಗಿತ್ತು. ... ಎರಡು ಬೇರೆ ಬೇರೆ ಬಸ್ಸುಗಳನ್ನೇರಿ ಇಳಿದು, ಆ ಬಡಾವಣೆಗೆ ನಡೆದು. ಷ್ಣಪ್ಪನವರು ತಮ್ಮ ಅಳಿಯ ಹಿಂದೆ ವಾಸವಾಗಿದ್ದ ಮನೆಯನ್ನು ತಲ ಸಿದರು. ಬಾಗಿಲು ತಟ್ಟಿ, “ರಾಮಯ್ನೋರೇ” ಎಂದು ಕರೆದುದಾಯಿತು. “ಯಾರು?” ಎನ್ನುತ್ತ ರಾಮಯ್ಯ ಕದ ತೆರೆದರು. ವಿದ್ಯುದ್ದೀಪದ ಮಂದೆ ಪ್ರಕಾಶ ಆ ಮನೆಯೊಳಗೆ ನೆರಳು-ಬೆಳಕುಗಳ ಚೆಲ್ಲಾಟ ನಡೆಸಿತ್ತು. ಬಂದ ವ್ಯಕ್ತಿಯ ಪರಿಚಯವಾಗದೆ ಇದ್ದರೂ “ಬನ್ನಿ” ಎಂದರು ರಾಮಯ್ಯ ಗಂಡನ ಹೆಂದೆಯೆ ಬಂದು ಹೊರನೋಡಿದ ರಾಧಮ್ಮ, ಕೃಷ್ಣಪ್ಪನವರ ಗುರುತು ಹಿಡಿದು ಸಂತೋಷದ ಧ್ವನಿಯಲ್ಲಿ ಅಂದರು. “ಬನ್ನಿ. [ಸುನಂದೆಯ ತಂದೆ ಕಣ್ರೀ] !” “ದಯಮಾಡಿಸಿ, ದಯಮಾಡಿಸಿ.” ಎಂದರು ರಾಮಯ್ಯ ಈಗ, ಲವಲವಿಕೆ ಯಿಂದ ತುಂಬಿದ ಸ್ವರದಲ್ಲಿ. " ಮೊದಲು ಗುರುತು ಸಿಗಲಿಲ್ಲ, ಮುಖತಃ ಮಾತನಾಡಿ ಪರಿಚಯವಿಲ್ಲ ನೋಡಿ. ಹೀಗಾಗಿ ” ಎಂದೂ ಹೇಳಿದರು, ವಿವರಣೆ ಕೊಡುವ ಧ್ವನಿಯಲ್ಲಿ. ಕೃಷ್ಣಪ್ಪನವರು ಒಳಹೊಕ್ಕು, ಮನೆಯವರು ಹಾಸಿದ ಚಾಸಯ ಮೇಲೆ ಕುಳಿತರು ಓದುತ್ತ ಬರೆಯುತ್ತ ಕುಳಿತಿದ್ದ ಹುಡುಗರಿಬ್ಬರು ತಲೆಯೆತ್ತಿ ಬಂದ ವರನ್ನು ನೋಡಿದರು. 'ರಾಧಮ್ಮನ ಮಕ್ಕಳಿರಬೇಕು' ಎ೦ದುಕೊಂಡರು ಕೃಷ್ಣಪ್ಪ. ದೃಷ್ಟಿ ಬಾಗಿಲಿನಾಚೆಗೆ ಇರುಳನ್ನು ಭೇದಿಸುತ್ತಾ ಪಕ್ಶದಲ್ಲಿದ್ದ ಮನೆ ಯತ್ತ ಹರಿಯಿತು. ಸುನಂದೆ ವುಟ್ಟಣ್ಣನೊಡನೆ ಸಂಸಾರ ಮಾಡಿದ ಮನೆ. ಅಲ್ಲಿಂದ ನಾಲ್ಕಾರು ಹುಡುಗರ ಸ್ವರಗಳು ಕೇಳಿಸುತಿದ್ದುವು; ಒಬ್ಬ ಮಗ್ಗಿ ಗಟ್ಟ ಮಾಡುತ್ತಿದ್ದ. ಇನ್ನೊಬ್ಬ ಇತಿಹಾಸವನ್ನು. ಇಬ್ಬರು ಜಗಳವಾಡು