ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಎಕಾಂಗಿನಿ

ಸಂಜೆ ನೇರವಾಗಿ ಆತ ಕೊರಡಿಗೆ ಮರಳುತ್ತಿದ್ದುದೇ ಕಡಿಮೆ. ಈ ದಿನವೂ ಆಫೀಸು ಬಿಟ್ಟೊಡನೆಯೇ ಆತ ಹವ್ಯಾಸ ಬಂಧುಗಳ ಕಡೆಗೆ ನಡೆದ. ಹಿಂದಿನ ಸಂಜೆಯಿಂದ ತನ್ನನ್ನು ಕಾಡಿದ್ದ ಅಪ್ರಿಯವಾದ ಯೋಚನೆಗಳನ್ನು ಸಂಪೂ‌ಣ‍‌ ವಾಗಿ ಕಿತ್ತುಹಾಕಲು ಆತನಿಗೆ ಸಹವಾಸ ಸುಖ ಬೇಕಿತ್ತು, ದೇಹ ಸುಖ ಬೇಕಿತ್ತು. ....ಕೋಮಲವಿಲಾಸದ ಕೆಳಭಾಗದಲ್ಲಿ ಫಲಾಹಾರ ಮಂದಿರವೂ ಇತ್ತು. ಕೃಷ್ಣಪ್ಪ ರಾಮಕೃಷ್ಣಯ್ಯನ ಜತೆಗೂಡಿ ಐದೂವರೆ ಘಂಟೆಯಿಂದಲೇ ಆಲ್ಲಿ ಕಾದು ಕುಳಿತರು. ಎರಡು ಸಾರೆ ಕಾಫಿಯಾಯಿತು. ಸಧ್ಯಃ ಗಿರಾಕಿಗಳ ಗದ್ದಲ ವಿರಲಿಲ್ಲ. ಹೀಗಾಗಿ ಆಮಾತು ಈಮಾತು ಆಡುತ್ತಾ ಬಾಗಿಲ ಕಡೆಗೇ ನೋಡುತ್ತಾ ಅವರಿಬ್ಬರೂ ಹೊತ್ತು ಕಳೆದರು.

  ಗಂಟೆ ಎಂಟಾದರೂ ಪುಟ್ಟಣ್ಣ ಅತ್ತ ಸುಳಿಯಲಿಲ್ಲ. ಇವರಿಬ್ಬರೂ ಒಂದೇ 

ಸಮನೆ ಕುಳಿತುದು, ವಸತಿ ಗೃಹದ ಹುಡುಗರ ಕುತೂಹಲಕ್ಕೆ ಸಹಜ ವಾಗಿಯೇ ಕಾರಣವಾಯಿತು ಒಬ್ಬ ಹುಡುಗ ಅವರನ್ನು ಸಮಿಪಿಸಿ ಕೇಳಿದ :

 “ಯಾರನ್ನಾದರೂ ಕಾಣ್ಬೇಕಾಗಿತ್ತಾ?”

ರಾಮಕೃಷ್ಣಯ್ಯ ಉತ್ತರವಿತ್ತರು , “ಹೂನಪ್ಪಾ. ಪುಟ್ಟಣ್ಣ ಅಂತ ಇಲ್ಲಿ ಒಬ್ಬರು ವಾಸವಾಗಿಲ್ವೆ? ಅವರು

ನಮ್ಮ ಸ್ನೇಹಿತರು. ಅವರನ್ನ ಕಾಣ್ಬೇಕಾಗಿತ್ತಾ?."

ಹುಡುಗನೆ೦ದ : “ಇಷ್ಟು ಹೊತ್ತಿಗೆ ಎಲ್ಲಿ ಸಿಗ್ತಾರೆ ? ಅವರು ಬರೋದು ಹನ್ನೊಂದು

ಘಂಟೆಗೋ ಹನ್ನೆರಡು ಘಂಟೆಗೋ."

ಕೃಷ್ಣಪ್ಪನವರ ಮುಖ ಕಪ್ಪಿಟ್ಟಿತು :ಈ ದಿನ ಭೇಟೆ ಸಾಧ್ಯವಿಲ್ಲ ಎಂಬುದು ಒಂದು ಕಾರಣ; ಅಷ್ಟು ರಾತ್ರಿಯವರೆಗೂ ಅಳಿಯ ಕೆಟ್ಟವರ ಸಹವಾಸದಲ್ಲೆ

ಇರುವನೆಂಬುದು ಇನ್ನೊಂದು ಕಾರಣ.

ರಾಮಕೃಷ್ಣಯ್ಯನವರಿಗೂ ಆಅಂಶಗಳು ಹೊಳೆದವು. ಆದರೂ ಅವರೆಂದರು: “ಊಟಕ್ಕೆ ಇಲ್ಲಿಗೆ ಬರಲಿಲ್ವೇನು?” “ನಡೀವ್ವಾ ಹೋಗೋಣ", ಎಂದರು ರಾಮಕೃಷ್ಣಯ್ಯ ಕೃಷ್ಣಪ್ಪನವರನ್ನು ದ್ದೇಶಿಸಿ.