ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ “ಆಗದೆ ಇರತೈ ” ಎಂದು ಕನಿಕರದ ಧ್ವನಿಯಲ್ಲಿ ನುಡಿದು ರಾಮಕೃಷ್ಣಯ್ಯ ನವರು ಮುಂದುವರಿದರು ; “ಧೈರ್ಯವಾಗಿಲ್ಬೇಕಮ್ಮ ನೀನು. ಕಲಿತೋಳು-ವಿದ್ಯಾವಂತೆ. ಯಾವುದಕ್ಕೂ ಹೆದರ್‍ಕೊಡದು.” "ಇಲ್ಲ ಮಾನ. ಧೈರ್ಯವಾಗೇ ಇದೀನಿ. ಏನು ಬಂದರೂ ಅನುಭವಿಸೋಕೆ ಸಿದ್ಧವಾಗಿದೀನಿ." ಪುಟ್ಟಣ್ಣನನ್ನು ಕಾಣಲು ಕೈಗೊಳ್ಳಬೇಕಾದ ವಿವರ ಚರ್ಚಯಾಯಿತು. ಎಲ್ಲರೂ ನೇರವಾಗಿ ಹೊಟೆಲಿಗೆ ಹೋಗುವುದೇ ಸೂಕ್ತ–ಎಂದು ರಾಮ ಕೃಷ್ಣಯ್ಯ ಅಭಿಪ್ರಾಯ ಪಟ್ಟರು. ತಾನು ನಾಯಿಕೆಯಾಗಿ ನಡೆಯಲಿರುವ ನಾಟಕವನ್ನು ಕಲ್ಪಿಸಿಕೂಂಡು ಸುದಂದೆಗೆ ನಗುಬಂತು. ಮಗುವನ್ನು ಮುಖಕ್ಕೆ ಅಡ್ಡವಾಗಿ ಹಿಡಿದು ಆ ನಗುವನ್ನು ಆಕೆ ಮರೆಸಿಕೊಂಡಳು. ಕೃಷ್ಣಪ್ಪನವರಿಗೆ ಆ ಮಾರ್ಗ ಅಷ್ಟು ಹಿತವೆನಿಸಲಿಲ್ಲ. “ಹೊಟಿಲಿನಲ್ಲಿ ಗದ್ದಲವಾಗುತ್ತೆ. ಆತ ನಮ್ಮನ್ನ ಹೊರಹಾಕಿಸ್ಬಹುದು.” "ಖಂಡಿತ ಹೊರ ಹಾಕಿಸೋದಿಲ್ಲ. ಬೇರೆ ಎಲ್ಲೀಂತ

ಅವನನ್ನ ಹಿಡೀ ತೀಯಾ? ಆತನನ್ನ ಆ ದಿನವೆ ನೋಡ್ಲಿಲ್ವೆ? ಬಲು ಘಾಟ. ಅವನಿರೋ ಜಾಗಕ್ಕೆ ಹೋಗದ ಹೊರತು ಬೇರೆ ಉಪಾಯವೇ ಇಲ್ಲ.”

“ಸರಿ, ಹಾಗೇ ಮಾಡೋಣ... ಈಗಲೂ ಅಲ್ಲೇ ಇದಾನೋಇಲ್ವೋ ಅಂತ ಮೊದಲು ನೋಡ್ಬೇಕಾದ್ದಿಲ್ಲ, ಅಲ್ವೆ? ರಾಮಕೃಷ್ಣಯ್ಯ ಅಂದರು: " ಏನೂ ಬೇಡ. ಈ ಸಲ ಸುನಂದೆಯೂ ಇರೋದರಿಂದ, ಸುಳಿವು ಸಿಗ ದೇನೇ ಹೋಗ್ಬೇಕು.” ಹಾಗೆ ಯೋಜನೆ ಸಿದ್ಧಗೊಳಿಸುತ್ತಿದ್ದ ರಾಮಕೃಷ್ಣಯ್ಯನ ವಿಷಯದಲ್ಲಿ ಸುನಂದೆಗೆ ಗೌರವ ಹೆಚ್ಚಿತು. ಆದರೂ ರಾಧಮ್ಮ ಕುಸುಮೆಯರನ್ನು ನೋಡದೆ, ದಂಡಯಾತ್ರೆಗೆ ಹೊರಡಲು ಆಕೆ ಸಿದ್ಧಳಿರಲಿಲ್ಲ. “ಅಪ್ಪಾ, ನಾಳೆ ಬೆಳಗ್ಗೆ ರಾಧಮ್ಮನ ಮನೆಗಿಷ್ಟು ಹೋಗಿ ಬರ್‍‍‍ತೀನಿ.” “ಆಗಲಿ, ಹೋಗ್ಬಿಟ್ಟು ಬಾ,” ಎಂದರು ಕೃಷ್ಣಪ್ಪನವರು. ವಿವರಣೆ ಬರುವುದಕ್ಕೆ ಮುಂಚೆಯೇ ರಾಮಕೃಷ್ಣಯ್ಯ ಅಂದರು: