ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ಊರಿನಿಂದ ಬರೆದ ಕಾಗದಗಳಲ್ಲೂ ಒಲವಿನ ಟೆಂಟಿಣಿನಾದವೇ ತುಂಬಿರುತ್ತಿತ್ತು, ಆದರೂ... “ನನಗೆ ಭಯವಾಗುತ್ತೆ ಅಕ್ಕ.” ನಾಲ್ಕು ವರ್ಷಗಳ ಹಿಂದೆ ತನಗೆ ಭಯವಾಗಿರಲಿಲ್ಲ, ಸಂತೋಷವಾಗಿತ್ತು. ಆದರೆ ಅನಂತರ ತಾನು ಅನುಭವಿಸಿದ ಸುಖದ ಕಥೆಯನ್ನು ತಂಗಿ ಈಗಾಗಲೇ ತಿಳಿ ದಿದ್ದಳು, ಅದರ ಫಲವಾಗಿ, ಈಗ ಸಂತೋಷವಾಗಿರಬೇಕಾದ ದಿನ ಭಯದ ಮಾತನ್ನು ಆಡುತ್ತಿದ್ದಳು ಆಕೆ. “ಇಲ್ಲದ ಯೋಚನೆ ಮಾಡ ವಿಜೀ, ನನಗೊಬ್ಬಳಿಗೆ ಹೀಗಾಯಂತ ನಿನಗೂ ಹೀಗೆಯೇ ಆಗಿ ತೀಡೋಕು ಅನ್ನೋದೆಲ್ಲಿದೆ? ಅಲ್ವೆ, ಗಂಡನ ಮನೆ ಸೇರಿ ಸುಖ ವಾಗಿ ಸಂಸಾರ ಮಾಡೋ ಹೆಂಗಸರನ್ನ ನಾವು ಕಂಡೇ ಇಲ್ಲವೆ?” ಆ ಮಾತೇನೋ ಸರಿಯೆ, ಅಂತಹ ಧೋರಣೆಯನ್ನು ಅನುಸರಿಸಿ ಸಮಾಧಾನ ತಳೆಯುವುದೂ ಜಾಣತನವೇ....ಹಾಗೆಂದು ಯೋಚಿಸುತ್ತ ವಿಜಯ ಮೌನವಾಗಿ ಅಕ್ಕನ ಮುಖವನ್ನೇ ದಿಟ್ಟಿಸಿದಳು. e ತನ್ನ ಮಾತಿಗೆ ತಂಗಿ ಉತ್ತರ ಕೊಡಲಿಲ್ಲವೆಂದು, ಕೊರಗಿನ ಆವರಣದಿಂದ ಆಕೆ ಯನ್ನು ಹೊರಕ್ಕೆಳೆಯಲು ತಾನು ಸಮರ್ಥಳಾದೆನೆಂದು, ಸುನಂದಾ ತೃಪ್ತಳಾದಳು. ಮತ್ತೆ ಮುಖದಲ್ಲಿ ನಗೆ ಮೂಡಿತು. ನಗುತ್ತ, ಆಜ್ಞಾಪಿಸುವವಳಂತೆ ಅಧಿಕಾರವಾಣಿ ಯಿಂದ ಸುನಂದಾ ಹೇಳಿದಳು: ಇನ್ನು ಗಂಡನ ಮನೆಗೆ ಹೊರಡೋವರೆಗೂ ನಾನು ಹಿರಿಯಕ್ಕ ಅನ್ನೋದನ್ನೇ ಮರೀಬೇಡ, ಏನು ನಾನು ಹೇಳೀನೋ ಹಾಗೆ ನಡೆಬೇಕು ನೀನು, ಕೇಳಿಸ್ತೇನೇ?” ವಿಜಯಾ ನಕ್ಕಳು. "100" ಬಂದರು. ಅಷ್ಟರಲ್ಲಿ ಅವರ ತಾಯಿ ಅಳುತ್ತಲಿದ್ದ ಮೊಮ್ಮಗಳನ್ನು ಎತ್ತಿಕೊಂಡು ಅವರು ಬಂದುದು, ಮಗುವನ್ನು ಹಿರಿಯ ಮಗಳ ಕೈಗೆ ಕೊಡಬೇಕೆಂದು, “ಎಲ್ಲಿದೀಯೆ ಸುನಂದಾ? ಈ ಸರಸ್ವತೀನ ಒಂದಿಷ್ಟು ಕರಕೋಬಾರದೇನೇ?" ಸುನಂದಾ-ವಿಜಯಾ ಗಡಬಡಿಸಿ ಎದ್ದು ನಿಂತರು. ಹಾಸಿಗೆಗಳಿನ್ನೂ ಹಾಗೆಯೇ ಅಸ್ತವ್ಯಸ್ತವಾಗಿದ್ದುದನ್ನು ಕಂಡು ಅವರ ತಾಯಿಗೆ ರೇಗಿತು. “ಇದೇನೇ ಇದು? ಯಾವತ್ತಮ್ಮಾ, ವಿಜಯಾ ನಿನಗೆ ಬುದ್ದಿ ಬರೋದು? ಗಂಡನ ಮನೇಲೂ ಎಂಟು ಗಂಟೆಗೆ ಎದ್ದು ಹೆತ್ತೋರಿಗೆ ಒಳ್ಳೆ ಹೆಸರು ಬರೋ ಹಾಗೆ ಮಾಡು, ಹೂ....!” ವಿಜಯಳ ಮುಖ ವಿವರ್ಣವಾಯಿತು. ಹೆತ್ತವರಿಗೆ ಒಳ್ಳೆಯ ಹೆಸರು ತರುವ ಮಕ್ಕಳ ಪ್ರಸ್ತಾಪ ಬಂತೆಂದು, ಚೇಳು ಕುಟುಕಿದ ಅನುಭವವಾಯಿತು. ಸುನಂದೆಗೆ, ಏನೇ ಬಂದರೂ ತಂಗಿಯನ್ನು ಹರ್ಷಚಿತ್ತಳಾಗಿ ಯೇ ಇಡಬೇಕೆಂದು ನಿರ್ಧಾರ ಮಾಡಿದ್ದ