11 ಬಂದಳು. “ಮಡಿಯುಟ್ಟುಕೊಂಡ ಮೇಲೆಯೇ ಕಾಫಿ ತಗೋತೀರಾ? ಅಥವಾ ಒಂದು ಗುಟುಕು ಮೊದಲೇ ಕುಡಿಯೋಕೆ ಆಕ್ಷೇಪವೇನಾದರೂ ಉಂಟೆ? ಅಂತ ಕೇಳ್ತಾರೆ.” 46 ಯಾರು?” 93!" ಭೂಪತಿಗೆ ಕಸಿವಿಸಿಯಾಯಿತು. ಸ್ನಾನ ಆಮೇಲೆ ಎಂದರೆ. ಮಡಿ ಮೈಲಿಗೆಯ ವ್ಯತ್ಯಾಸವೇ ಇಲ್ಲದವನೆಂದು ಅತ್ತೆ ಮಾವ ತನ್ನನ್ನು ಟೀಕಿಸಬಹುದೆಂಬ ಭಯ, ಬದಲು, ಕಾಫಿ ಮೊದಲಾಗಲಿ ಎಂದರೆ, ಕೈ ಹಿಡಿದವಳ ಮುಖವನ್ನಾದರೂ ಈಗಲೇ ಕಾಣಬಹುದೆಂಬ ಆಸೆ. ನಿಂತೇ ಇದ್ದಳು ಆಕೆ. ತಾನು ಏನಾದರೂ ಉತ್ತರ ಕೊಡ web..... ಆಗದೆ?” ಆತನ ತೊಳಲಾಟವನ್ನು ಗಮನಿಸಿದ ಸುನಂದಾ ಅಂದಳು; “ತಿಂಡಿ ಸ್ನಾನವಾದ ಮೇಲೆ ತಗೊಳುವಿರಂತೆ, ಕಾಫಿ ಮೊದಲೇ ಆಗಲಿ “ನಿಮ್ಮಿಷ್ಟ,” ಎಂದ ವೆಂಕಟರಾಮಯ್ಯ, ಸಮಸ್ಯೆಯನ್ನು ಬಗೆ ಹರಿಸಿ ಕೊಟ್ಟು ಪಕ್ಕೆ ಮನಸಿನಲ್ಲಿ ಸುನಂದೆಗೆ ಧನ್ಯವಾದವನ್ನರ್ಪಿಸುತ್ತ. “ನೀವು ಆ ಕೊಠಡಿಗೆ ಹೋಗಿ, ಕಾಫಿ ತಡ್ತೀನಿ." ಕೊಠಡಿಗೆ ಹೋಗಬೇಕೆಂಬ ಸೂಚನೆ ಯೋಗ್ಯವಾಗಿತ್ತು. ಬಯಲಿನಂತಹ ನಡುಮನೆಗಿಂತ ಕೊಠಡಿಯ ಏಕಾಂತವೇ ಪ್ರಿಯಕರ. ಆದರೆ, 'ಕಾಫಿ ತಡ್ತೀನಿ' ಎನ್ನುವ ಮಾತಿಗೆ ಏನರ್ಥ? 'ಕಾಫಿ ಕಳಿಸ್ತೀನಿ' ಎನ್ನಬಾರದಾಗಿತ್ತೆ? ವೆಂಕಟರಾಮಯ್ಯನಿಗೆ ಈಗ ರೇಗಿತು. ಮೆಲ್ಲನೆದ್ದು ಆತ ಕೊಠಡಿಯ ಕಡೆಗೆ ನಡೆದ, ಅಲ್ಲೊಂದು ಕಿಟಕಿಯಿತ್ತು. ತನಗೆ ಪರಿಚಿತವಾದ ಪ್ರಿಯವಾದ ಕೊಠಡಿ ಕಿಟಕಿ. ಇಂದಿನ ಸಿಡುಕನ್ನು ಕರಗಿಸುತ್ತಿದ್ದ ಹಿಂದಿನ ನೆನಪನ್ನು ಸವಿಯುತ್ತ, ಬೀದಿ ಯನ್ನು ದಿಟ್ಟಿಸುತ್ತ, ಆತ ನಿಂತ. ಅದು, ಬಲು ದೀರ್ಘವೆಂದು ಕಂಡ ಒಂದೆರಡು ನಿಮಿಷ ಬಳೆಗಳ ಸದ್ದಾಯಿತು. ತನ್ನಾಕೆಯೇ ಇರಬಹುದೆಂಬ ಆಸೆ, ಇರಲಾರಳೆಂಬ ಭೀತಿಯೊಡನೆ ಸಣ ಮಾಡಿತು. ಮತ್ತೆ ಬಳೆಗಳ ಸದ್ದು. ವೆಂಕಟರಾಮಯ್ಯ ತಿರುಗಿ ನೋಡಲೇ ಇಲ್ಲ. “ಕಾಫಿ ಆರೋಗುತ್ತೆ. ಸರಕ್ಕನೆ ತಿರುಗಿದ ಮನೆಯಳಿಯ, ಕಾಫಿಲೋಟದೊಡನೆ ಬಂದಿದ್ದ ತನ್ನಾಕೆ ಯನ್ನು ದಿಟ್ಟಿಸಿದ. ಅಂತೂ ಬಂದಳು ಪುಣ್ಯವಂತೆ! "3285!"
ಪುಟ:Ekaangini by Nirajana.pdf/೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.