ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಸ್ನಾನದ ಮನೆಯಲ್ಲಿ, ನೀರು ಜಾಸ್ತಿ ಬಿಸಿಯಾಗಿದೆಯೇನೋ ಎಂದು ನೋಡಲು ವಿಜಯಾ ಹಂಡೆಯೊಳಕ್ಕೆ ಬೆರಳಿಕ್ಕಿದಳು. “ಸುಟ್ಟಿತು, ಹುಷಾರಿ!” ಎಂದ ಗಂಡ, “ಎಲ್ಲಿ, ನೋಡೋಣ” ಎನ್ನು ತ್ತ, ಹಂಡೆಯಿಂದ ಆಕೆ ಹೊರತೆಗೆದ ಬೆರಳನ್ನು ಆತ ತನ್ನ ತುಟಿಗೊತ್ತಿಕೊಂಡು ಮಧುರ ಸ್ಪರ್ಶದ ಚಿಕಿತ್ಸೆಗೆ ಒಳಗು ಮಾಡಿದ. “ಬಿಡೀಂದ್ರೆ, ಅಕ್ಕ ಬಂದಿತ್ತಾಳೆ," ಎಂದು ಪ್ರತಿಭಟಿಸಿದಳು ವಿಜಯಾ, “ಖಂಡಿತ ಬರೋಲ್ಲ. ಅಷ್ಟೂ ತಿಳೀದು ಅಂತ ತಿಳಕೊಂಡಿಯಾ ನಿನ್ನಕ್ಕನಿಗೆ?” ಪೆಂಡತಿ ಸ್ನಾನದ ಮನೆಯ ಬಾಗಿಲಿನತ್ತ ನೋಡಿದಳು. ಗಂಡ ಅವನ್ನು ಮುಚ್ಚಿದ... ... ಸರಸ್ವತಿ ಅಳತೊಡಗಿದಳು. ತಾಯಿ ಎತ್ತಿಕೊಂಡಾಗ, ಮಗುವಿನ ಬಾಯಿ ಅಭ್ಯಾಸ ಬಲದಿಂದ ಹೆತ್ತವಳ ಎದೆಯತ್ತ ತಿರುಗಿತು. ಸೀರೆಯನ್ನೂ ರವಕೆಯನ್ನೂ ಕಿತ್ತಾಡತೊಡಗಿದುವು ಆ ಪುಟ್ಟ ಕೈಗಳು. ಆದರೆ, ಆ ಸುಖ ಈಗ ತನಗಿಲ್ಲ ಎಂಬ ನೆನಪಾಗಿ ಅದರ ಅಳು ಹೆಚ್ಚಿತು. ಸುನಂದಾ ಮಗುವನ್ನೆತ್ತಿಕೊಂಡು ನಡು ಮನೆಗೆ ಬಂದಳು. ಅಲ್ಲಿಂದ ಮಗ್ಗುಲು ಕೊಠಡಿಗೆ ಪಕ್ಕದ ಮನೆಯ ಬೆಕ್ಕು ಅಂಗೈಯಿಂದ ಮುಖ ತೀಡುತ್ತ ಹಿತ್ತಿಲ ಗೋಡೆಯ ಮೇಲೆ ಕುಳಿತಿತ್ತು. “ಆಗೋ ಬೆಕ್ಕು! ಬೆಕ್ಕು- ನೋಡು, ಮಿಯಾಂವ್!” ಎಂದು ಸುನಂದಾ ಸರಸ್ವತಿಯ ದೃಷ್ಟಿಯನ್ನು ಬೆಕ್ಕಿನೆಡೆಗೆ ಸೆಳೆದಳು. ಸರಸ್ವತಿ ಅಳು ನಿಲ್ಲಿಸಿ, "ಬೆಕ್ಕು!" ಎಂದು ಅಬ್ಬರಿಸಿ, ತಾಯಿಯ ಮುಖ ನೋಡಿದಳು, ಮನುಷ್ಯ ಸ್ವರಗಳನ್ನು ಕೇಳಿದ ಆ ಪ್ರಾಣಿ, ಕಿಟಿಕಿಯ ಕಡೆಗೊಮ್ಮೆ ನೋಡಿತು. ಕೆಳಕ್ಕೆ ಧುಮುಕಬೇಕು ಎನ್ನುವಷ್ಟರಲ್ಲಿ ಆ ಮನುಷ್ಯರು ಮನೆಯೊಳಗೆ ಇದ್ದರೆಂಬುದು ಅರಿವಾಗಿ, ಅವರ ತಿರಸ್ಕಾರದ ದೃಷ್ಟಿಯನ್ನೊಮ್ಮೆ ಬೀರಿ, ಪುನಃ ಮುಖಮಾರ್ಜನದ ಕಾರ್ಯದಲ್ಲಿ ನಿರತವಾಯಿತು. ಮತ್ತೆ ಮರುಕಳಿಸಬಯಸುತ್ತಿದ್ದ ಮಾನಸಿಕ ಸಂಕಟವನ್ನು ಹಿಂದಕ್ಕೆ ತಳ್ಳಲೆತ್ನಿ ಸುತ್ತ ಸುನಂದಾ ಮಗುವಿಗೆ ಮುದ್ದಿಟ್ಟಳು. ಈ ಪ್ರೀತಿ ಪ್ರದರ್ಶನ ತನಗೆ ಪ್ರಿಯ ವಾದುದೆಂದು ಮಗು ಇಲ್ಲ!' ಎಂದಿತು. ಒಲವಿನ ವಿಷಯದಲ್ಲಿ ತಾನೆಂದೂ ಬಡವೆ ಯಾಗಬಾರದು, ಎಂದುಕೊಂಡಳು ಸುನಂದಾ, ತನ್ನ ಹೊರತು ಬೇರೆ ಯಾರಿದ್ದಾರೆ ಈ ಮಗುವಿಗೆ? ತಂದೆಯನ್ನು ಇನ್ನು ಕಂಡಾಗ, ಆತನ ಪರಿಚಯವಾದರೂ ಅದಕ್ಕೆ ಇರುವುದೊ ಇಲ್ಲವೊ, ಮಗು ಬಸಿರಲ್ಲಿರುವಾಗಲೇ ಹೆಣ್ಣು ವಿಧವೆಯಾಗುವುದುಂಟು, ಅಥವಾ ಕೈಗೂಸನ್ನೂ ಅದರ ತಾಯಿಯನ್ನೂ ಬಿಟ್ಟು ಗಂಡು ಕಣ್ಣು ಮುಚ್ಚುವು ಅಂತಹ ಸಂದರ್ಭಗಳಲ್ಲಿ ಹೆತ್ತಾಕೆಯೇ ಮಗುವಿನ ಪಾಲಿಗೆ ತಂದೆ ತಾಯಿ ಎಲ್ಲವೂ, ಆದರೆ ತನ್ನ ಸ್ಥಿತಿಗತಿ ಅಂತಹುದಲ್ಲವಲ್ಲ. ತಾನು, ಗಂಡ ಕೈಬಿಟ್ಟ ಹೆಂಗಸು. ಕೂಸಿನ ಪಾಲಿಗೆ, ತಂದೆ ಇದ್ದೂ ಇಲ್ಲದಂತೆ. ಆದರ ಬಾಯಲ್ಲಿ ಉಚ್ಚಾರವಾಗುವ ಪದ-ಅಮ್ಮಾ;' 'ಅಜ್ಜಿ' ಇಲ್ಲವೆ ತಾತ.” 'ಅಪ್ಪಾ' ಎನ್ನುವ ಅಗತ್ಯವೇ ಇಲ್ಲ