18 ವನ್ನು ಅಲ್ಲಗಳೆಯಬಾರದೆಂದು ಆಕೆಯ ತೊದಲು ನುಡಿದಳು: “ತಾತಾ, ಅಜ್ಜಿ ....ಇಲ್ಲ!” ನಿಂತಲ್ಲೆ ನಿಲ್ಲಲಾಗಲಿಲ್ಲ ಸುನಂದೆಗೆ, ದೃಷ್ಟಿ ಇನ್ನೊಂದು ಕೊಠಡಿಯತ್ತ ಹರಿ ಯಿತು. ವಿದ್ಯಾರ್ಥಿ ದೆಸೆಯಲ್ಲಿ ಸೋದರಿಯರಿಬ್ಬರಿಗೂ ಅದು ಅಧ್ಯಯನದ ಜಾಗ ವಾಗಿತ್ತು. ಸುನಂದಾ ಗಂಡನ ಮನೆ ಸೇರಿದ ಬಳಿಕ ವಿಜಯಳೂ ಅದನ್ನು ಒಂದೆರಡು ವರ್ಷ ಉಪಯೋಗಿಸಿದ್ದಳು. ಆನಂತರ ಆ ಕೊಠಡಿ ಡಬ್ಬ ತಪ್ಪಲೆಗಳನ್ನೂ ಹಾಸಿಗೆ ಗಳನ್ನೂ ಕೂಡಿಡುವ ಉಗ್ರಾಣವಾಗಿ ಮಾರ್ಪಟ್ಟಿತು. “ಒಳಗೆ ಏನುಮಾಡುತ್ತಿರುವ ತಾಯಿ? ಮನಸ್ಸು ಕಸಿವಿಸಿಯಾದಾಗ ತಾಯಿಯ ನೆನಪು....” ಸ್ನಾನದ ಮನೆಯಿಂದ, ಸುರಿದುಕೊಳ್ಳುತ್ತಿರುವ ನೀರಿನ ಸದ್ದು... ತಾನೂ ಹಿಂದೆಯೊಮ್ಮೆ... ಅಯ್ಯೋ! ತಂಗಿಯ ವಿಷಯದಲ್ಲಿ ಅಸೂಯೆಯೆ? ಉಂಟೆ ಎಲ್ಲಾದರೂ? ಹಾಳು ಕಂಬನಿ ಒತ್ತರಿಸಿ ಬರುತ್ತಿರುವುದಾದರೂ ಯಾಕೆ? ....ತಾಯಿ ಒಳಬಾಗಿಲ ಬಳಿಗೆ ಬಂದು ಕೇಳಿದರು; “ಏನು ಯೋಚಿಸ್ತಾ ನಿಂತಿದೀಯೇ ಸುನಂದಾ?” ಆ ತಾಯಿಯ ಹಿರಿಯ ಮಗಳಾದ ತನ್ನನ್ನು ಕುರಿತೇ ಯೋಚಿಸುತ್ತಿದ್ದಳೋ “ಏನೂ ಇಲ್ಲಮ್ಮ" “ಕಣ್ಣು ಕಣು ಕೆಂಪಗಿದೆ “ಹೊಗೆ ಸೇರೊಂಡು." ಎಷ್ಟು ಸಹಸ್ರ ಸಾರೆ ಎಷ್ಟು ಸಹಸ್ರ ಹೆಂಗಳೆಯರು ಆ ಉತ್ತರವನ್ನು ಕೊಟ್ಟಿದ್ದರೋ! ಸತ್ಯ ಸಂಗತಿಯನ್ನು ತಾಯಿ ಬಲ್ಲಳು, ವಯಸ್ಸಾದರೇನಾಯಿತು? ತನ್ನದೇ ಮಾಂಸದೊಂದು ತುಣುಕು ನೋವಿನಿಂದ ನರಳಾಡಿದಾಗ ಆಕೆಗೆ ಸಂಕಟವಾಗದೆ ಇರುವ -ಆದರೂ ಪ್ರಸ್ತಾಪ ಮಾಡದಿರುವುದೇ ಮೇಲು, ಎಂದಿತು ಮನಸ್ಸು. “ಅವರದು ಎಷ್ಟು ಹೊತ್ತಾಗುತ್ತೋ ಏನೋ, ನೀನು ಕಾಫಿ ಕುಡೀಬಾರದೆ?” “ಪರವಾಗಿಲ್ಲಮ್ಮ ಏನೂ ಅವಸರವಿಲ್ಲ.” ತಾಯಿ ನಿಟ್ಟುಸಿರು ಬಿಟ್ಟು ಒಳಕ್ಕೆ ತಿರುಗಿದರು. ಸುನಂದಾ ಬೀದಿಬಾಗಿಲ ಕಡೆಗೆ ತಲೆ ಹಾಕುವುದಕ್ಕೂ ಸರಿಹೋಯಿತು, ತಂದೆಯನ್ನು ಕಂಡೊಡನೆ ಸುನಂದಾ ನಗೆ ಬರಿಸಿಕೊಂಡಳು ತಂದೆ ಒಳಬರುವುದಕ್ಕೂ ಮುಖದ ಮೇಲೆ ಗೆಲುವಿನ ಜೋಯಿಸರು ಸಿಕ್ಕಿದರೆ? ಎಂದು ತಾನಾಗಿಯೇ ಪ್ರಶ್ನಿಸ
ಪುಟ:Ekaangini by Nirajana.pdf/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.