ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಏಕಾಂಗಿಸಿ ಆಸೆ," ಎಂದಳು ಸುನಂದಾ ನಗುತ್ತ. 2 ಮಕ್ಕಳ ಒಲವಿನ ಕಲಹ ಕಂಡು ತಾಯಿಗೆ ಸಂತೋಷವಾಯಿತು. “ಸರಸ್ವತಿ ಮಲಕ್ಕೊಂಡಿದ್ದೇಕು ಅಲ್ವೆ ಸುನಂದಾ?” ಒಂದು ಕ್ಷಣ ಸುಮ್ಮನಿದ್ದು ಆಕೆ ಅಂದರು: “ಹೋಗಿ, ನೀವೂ ಮಲಕ್ಕೊಳ್ಳಿ, ಇನ್ನೇನು ಬಂದಿದ್ದೀನಿ. ಹೋಗೀವಾ? ನಿದ್ದೆಗೆ ಮುಂಚೆ ಸ್ವಲ್ಪ ಹೊತ್ತಾದರೂ ಜತೆಯಾಗಿ ಎಚ್ಚರವಿರುವುದು ಸಾಧ್ಯ ವಾಯಿತೆಂದು ಸಂತೋಷದಿಂದಲೆ ಅಕ್ಕ ತಂಗಿ ನಡುಮನೆಗೆ ಬಂದು ಹಾಸಿಗೆಗಳ ಮೇಲೆ ಕಾಲು ಚಾಚಿದರು. ಆಗ ಒಮ್ಮೆಲೆ ವಿಜಯಳಿಗೆ ಅನಿಸಿತು-ಈ ದಿನ ಅಕ್ಕನಿಗೆ ತಾನು ಹೇಳಬೇಕಾದು ದೇನೂ ಇಲ್ಲವೆಂಬುದು, ಸುನಂದೆಗೂ ಬಾಯಿಯಿಂದ ಮಾತು ಹೊರಡಲಿಲ್ಲ. ತಂಗಿ ಸಮೀಪದಲ್ಲೇ ಇದ್ದರೂ ಆಕೆಯ ಹೃದಯ ಆಗಲೆ ತನ್ನಿಂದ ಬಲು ದೂರ ಸಾಗಿದ್ದಂತೆ ಅಕ್ಕನಿಗೆ ತೋರಿತು, ಸ್ವಚ್ಛಂದವಾಗಿ ಹಾರಾಡತೊಡಗಿದ್ದ ಆ ಹಕ್ಕಿ, ಅಕ್ಕನ ಸಂಕಟದ ಅವರಣ ದೊಳಗೆ ಮತ್ತೆ ತಂಗಬೇಕಾದುದಿರಲಿಲ್ಲ. ಅದೇ ವಿಜಯಾ ಸುಖಿಯಾಗಿದ್ದಳು. ಕೈ ಹಿಡಿದವನ ನಿರ್ಮಲ ಒಲವು ಆಕೆಗೆ ದೊರೆ ತಿತ್ತು. ಬದುಕು ಸದಾ ಕಾಲವೂ ಹಾಗೆಯೇ ಇರಲಾರದೆನ್ನುವ ಸಂದೇಹದ ಬಾಧೆಗೆ ಒಳಗಾಗಲು ಆಗ ಆಕೆ ಸಿದ್ಧಳಿರಲಿಲ್ಲ, ಆ ದಿನದ ತನ್ನ ಅನುಭವವನ್ನು ಕುರಿತು ಅಕ್ಕನಿಗೆ ಆ ಹೇಳಬೇಕೆನಿಸಿತೊಮ್ಮೆ. ಸ್ವಲ್ಪ ಮಟ್ಟಿಗೆ ಲಜ್ಜೆ ಅದಕ್ಕೆ ತಡೆಯಾಯಿತು. ನಿದ್ದರೂ ಕೆಲವೊಂದು ವಿಷಯಗಳನ್ನು ಅಕ್ಕನಿಗೆ ಹೇಳುವುದು ಸಾಧ್ಯವಿತ್ತು. ಆದರೆ ವಿವೇಕ, ಕಟು ಧ್ವನಿಯಲ್ಲಿ ವಿಜಯಳನ್ನು ಕುಟುಕಿ ಕೇಳುತ್ತಿತ್ತು: ಅಭಾಗಿನಿಯಾದ ದುಃಖಿನಿಯಾದ ನಿನ್ನಕ್ಕನಿಗೆ ನಿನ್ನ ಸ್ವಂತದ ಸುಖ ತೃಪ್ತಿಯ ವಿಷಯ ಯಾವ ಬಾಯಿ ಯಲ್ಲಿ ಹೇಳುವೆ? ಆ ಯೋಚನೆ ತಂಗಿಯ ಮನಸ್ಸಿನ ಹೊಯ್ದಾಟವನ್ನು ತಿಳಿಯಲು ಸುನಂದಾ ಶಕ್ತಳಾಗಲಿಲ್ಲ. ಇನ್ನು ವಿಜಯಳಿಗೆ ತನ್ನೊಲವಿನ ಅಗತ್ಯವಿಲ್ಲವೆಂದೇ ಆಕೆ ಬಗೆದಳು. ಯಿಂದ ದುಃಖವೆನಿಸಿತು. ಆದರೆ ಮರುಕ್ಷಣವೆ, ಇದರಿಂದ ತನಗೆ ಬೇಸರವಾಗ ಬಾರದು, ತಂಗಿ ಸುಖಿಯಾದುದನ್ನು ಕಂಡು ತಾನು ಸಂತೋಷಪಡಬೇಕು, ಎಂದು ಕೊಂಡಳು. ಅಕ್ಕನ ಹಾಸಿಗೆಯ ಕಡೆಗೆ ಮಗ್ಗಲು ಹೊರಳಿದಳು ವಿಜಯಾ, ಒಲವು ತುಂಬಿದ ದೃಷ್ಟಿಯಿಂದ ತಂಗಿ ತನ್ನನ್ನೇ ನೋಡುತ್ತಿದ್ದುದನ್ನು ಸುನಂದಾ ಕಂಡಳು. ಆಕೆಯ ಕೈ ವಿಜಯಳದನ್ನು ಹುಡುಕಿತು. ಹುಡುಕಿತು. ಬೆರಳುಗಳು ಪರಸ್ಪರ ಹೆಣೆದು ಕೊಂಡವು.