ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿಸಿ ಹಸ್ತಾಕ್ಷರ, ಅಲ್ಲಲ್ಲಿ ರಾಮಯ್ಯ ಅದನ್ನು ತಿದ್ದಿದ್ದರು. 31 ಕಾಗದ ಬಂತೆಂಬ ಸಂತೋಷ, ಅದನ್ನೋದುವಾಗ ಉಳಿಯುವುದು ಸಾಧ್ಯವಿರ ಆದರೊಳಗಿದ್ದ ವಿಷಯ ಅಂತಹುದು. “ನೀವು ವಿಳಾಸ ಕೊಡದೆ ಹೋಗಿ ದೊಡ್ಡ ತಪ್ಪು ಮಾಡಿದಿರಿ. ಎಷ್ಟೋ ಸಲ ನಿಮಗೆ ಬರೆಯಬೇಕೆಂದು ತೋರುತ್ತಿತ್ತು. ಆದರೆ ವಿಳಾಸವಿರಲಿಲ್ಲ. ಈಗಲಾದರೂ ನೀವೇ ಬರೆದು ತಿಳಿಸಿದಿರಲ್ಲ. ಇದೇ ದೊಡ್ಡ ಸಮಾಧಾನ.” ... ಸಮಾಧಾನದ ಜತೆಯಲ್ಲಿ ಇದ್ದುವು ವಿಷಾದ ಮತ್ತು ದುಃಖ. “ಸಂತೋಷದ ವಿಷಯವೇನೂ ನಿಮಗೆ ಬರೆಯುವುದಕ್ಕಿಲ್ಲವಲ್ಲ ಎಂದು ವಿಷಾದ ವಾಗುತ್ತದೆ. ನೀವು ಬರೆದಿದ್ದನ್ನೆಲ್ಲ ಓದಿ ಬಹಳ ದುಃಖವಾಯ್ತು. ನಿಮ್ಮ ಯಜ ಮಾನರು ಮನೆ ಖಾಲಿಮಾಡಿ ಆಗಲೇ ಎರಡು ತಿಂಗಳ ಮೇಲಾಯ್ತು, ನೀವಿದ್ದ ಮನೆಗೆ ಬೇರೆಯವರು ಬಿಡಾರ ಒಂದೂ ಬೇರೆಲ್ಲಿಯಾದರೂ ಮನೆ ಮಾಡುತ್ತಾರೋ ಸಾಮಾನು ಸಾಗಿಸುವಾಗ ಅವರೊಡನೆ ಕೆಳಬೇಕೆಂದು ಕಾದು ನಿಂತೆ, ಆದರೆ ಆಯಿತು, ವರ್ಗವಾಯಿತೋ ಅಥವಾ ಎಂದು ತಿಳಿಯಲು ಪ್ರಯತ್ನ ಪಟ್ಟೆ, ಸಾಮಾನುಗಳನ್ನೆಲ್ಲ ಗೋಣಿ ಚೀಲಗಳಲ್ಲಿ ಹೇರಿ ಗಾಡಿಯಲ್ಲಿಟ್ಟು ಸಾಗಿಸಿದವರು ಬೇರೆಯೇ ಒಬ್ಬರು. ನನಗೆ ತುಂಬಾ ದಿಗಿಲಾಯ್ತು. ಆತನನ್ನು ಕೇಳಿದರೆ ಪುಣ್ಯಾತ್ಮ ಉತ್ತರ ಹೇಳಲೇ ಇಲ್ಲ. ಅಂತೂ ನಿಮಗೆ ವಿಷಯ ಗೊತ್ತಿರಬಹುದು ಅಂತ ಸುಮ್ಮ ನಾದೆವು. ಹೀಗೆಂತ ತಿಳಿದಿದ್ದರೆ ನಮ್ಮ ಹುಡುಗನನ್ನು ಗಾಡಿಯ ಹಿಂದೆಯಾದರೂ ಕಳುಹಿಸಿ ಪತ್ತೆ ಹಚ್ಚುತ್ತಿದ್ದೆ. ನಿಮ್ಮ ಯಜಮಾನರು ಆಮೇಲೆ ಈ ಕಡೆ ಸುಳಿಯಲೇ me..." ....ಬಳಿಕ ಸಂದೇಹ ಸಲಹೆಗಳು. “ಇಷ್ಟು ದಿವಸ ನೀವು ಸುಮ್ಮನಿರಬಾರದಾಗಿತ್ತು ಎನಿಸುತ್ತದೆ. ನೀವು ಹೋಗಿ ಆಗಲೇ ಎಂಟು ತಿಂಗಳಾಯಿತು. ತಂಗಿಯ ಮದುವೆ ಮುಗಿದ ಮೇಲೆ ನೀವು ಬರುವಿ ರೆಂದಿದ್ದೆ, ಬರಲೇ ಇಲ್ಲ. ಪೋಸ್ಟಿನವನೂ ನಿಮ್ಮ ಮನೆಗೆ ಬಂದದ್ದೇ ಇಲ್ಲ, ಅವರ ಆಫೀಸಿಗೇ ಕಾಗದ ಬರೆಯುತ್ತಿದ್ದಿರೋ ಏನೋ, ನನಗಾದರು ಸಮಾಚಾರ ತಿಳಿಸಿ ಕಾಗದ ಹಾಕಿದ್ದರೆ? ನೀವು ನನ್ನ ತಂಗಿಗೆ ಸಮಾನ. ನಿಮ್ಮ ಕಷ್ಟ ಬೇರೆ, ನನ್ನ ಕಷ್ಟ ಬೇರೆಯೆ? ನಿಮಗೆ ಬುದ್ಧಿವಾದ ಹೇಳಲು ಸಮರ್ಥ ವಾದ ಹೇಳಲು ಸಮರ್ಥಳಲ್ಲ, ಆದರೆ ಸೆರಗೊಡಿ ಕೇಳು ತೇನೆ. ದಯವಿಟ್ಟು ನಿಮ್ಮ ತಾಯಿ ಮತ್ತು ತಂದೆಯನ್ನು ಕರಕೊಂಡು ಬೇಗನೆ ತಡ ಮಾಡಬೇಡಿ, ನೀವೆಲ್ಲ ನಮ್ಮ ಮನೆಯಲ್ಲೇ ಬಂದಿಳಿಯಬೇಕು. ಖಂಡಿತ ...ವಿಜಯಳ ಮದುವೆಯ ವಿಷಯ ಓದಿ ಅವರಿಗೆ ಸಂತೋಷವಾಗಿತ್ತು. “ದೇವರು ಆಕೆಯನ್ನು ಸುಖವಾಗಿಟ್ಟಿರಲಿ.” ಆ ಕಡೆಯಿಂದಲೂ ಸಂತೋಷದೊಂದು ಸುದ್ದಿ ಇತ್ತು,