ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 59 "100" “ಬುಧವಾರ ಹೊರಡ್ತೀನಿ, ಆಗದೆ?" ಸುನಂದಾ ನಕ್ಕಳು.

  • ಮಂಗಳವಾರ ಹೊರಟು ಆಶುಭ ಫಲ ಪ್ರಾಪ್ತಿಯಾಗೋದು ಬೇಡ, ಬುಧ

ವಾರವೇ ಹೊರಡು. ಕೃಷ್ಣಪ್ಪನವರು ಏನನ್ನೂ ಹೇಳಲಾರದೆ ನೀಳವಾಗಿ ಉಸಿರುಬಿಟ್ಟರು.

ಮಗಳೊಡನೆ ವಿಚಾರವಿನಿಮಯವಾದ ಬಳಿಕ, ಹೆಂಡತಿಯೊಡನೆ ಪ್ರಸ್ತಾಪ, ಆಕೆ ಇತ್ತೀಚೆಗೆ ಎಷ್ಟೋ ಸಾರೆ ಗಂಡನೊಡನೆ ತಮ್ಮ ಹಿರಿಯ ಅಳಿಯನ ವಿಷಯ ಕೇಳಿದ್ದರು. ದೊಡ್ಡ ದೊಡ್ಡ ಮಗಳ ಅದೃಷ್ಟ ಹೀಗಾಯಿತೇ ಎಂದು ಮರುಗಿ ಕಣ್ಣೀರು ಮಿಡಿದಿದ್ದರು. ವಿಜಯಳ ಮದುವೆಯ ಮತ್ತು ಆನಂತರದ ಸಂಭ್ರಮದಲ್ಲಿ, ಅವರ ಮನಸ್ಸಿನ ನೊಳಗಿನ ಕೊರಗು ತನ್ನ ಸರದಿ ಕಾಯುತ್ತ ಮರೆಯಲ್ಲಿ ನಿಂತಿತು. ಅನಂತರವೂ ತಕ್ಷಣವೆ ಮುಖ ತೋರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಎಷ್ಟೋ ಕಾಲದ ಬಳಿಕ ಮಕ್ಕಳನ್ನು ಜತೆಯಾಗಿ ಕಾಣುತಿದ್ದ ತಾಯಿ, ತಮ್ಮ ವಯಸ್ಸಾದ ಕಣ್ಣುಗಳು ಅನು ಭವಿಸುತ್ತಿದ್ದ ಆ ಹಬ್ಬ ಆದಷ್ಟು ಹೆಚ್ಚು ದಿನ ಹಾಗೆಯೇ ಇರಲಿ ಎಂದು ಬಯಸಿದರು. ಆದರೆ ಈಗ ಹಾಗಲ್ಲ. ವಿಜಯ ಗಂಡನ ಮನೆಗೆ ಹೊರಟು ಹೋದ ಮೇಲೆ ಹಿರಿಯ ಮಗಳ ಪ್ರಶ್ನೆ ಮುಖ್ಯವಾಗಿ ಮುಂದೆ ನಿಂತಿತು. ವೃದ್ಧಾಪ್ಯದಲ್ಲಿ ಗಂಡು ಮಕ್ಕಳಿಲ್ಲದೆ ಸಂಕಟಪಡುವುದೇನೋ ಸರಿ. ಮಗಳೂ ಮೊಮ್ಮಗಳೂ ಜತೆಯಲ್ಲೇ ಇದ್ದರೆ ಆ ಸಂಕಟ ಕಡಮೆಯಾಗುವುದೆಂಬುದೂ ನಿಜ, ಆದರೆ ಆ ಮಗಳು ಮನೆಯಲ್ಲೇ ಇರಲಿ ಎಂದು ಹಾರೈಸುವುದಕ್ಕುಂಟೆ? ಅದು ಹೆಣ್ಣು ಹೆತ್ತವರೆಂದಿಗೂ ಮಾಡಲಾಗದಂತಹ ಮಾಡ ಬಾರದಂತಹ ಯೋಚನೆ... ಆ ವಿಷಯವಾಗಿ ಸುನಂದೆಯ ತಾಯಿ ಎಷ್ಟೋ ಚಿಂತಿಸಿದರು, ಗೊಣಗಿದರು. ಅಡುಗೆ ಮನೆಯಲ್ಲಿ ಒಬ್ಬರೆ ಇದ್ದಾಗ ಅಸ್ಪಷ್ಟವಾದ ಮಾತುಗಳು ಆಕೆಯ ಬಾಯಿಂದ ಆಗಾಗ್ಗೆ ಹೊರಬೀಳುತ್ತಿದ್ದುವು. “ಏನಮ್ಮಾ ಅದು?” ಎಂದು ಸುನಂದಾ ನಡುಮನೆ ಯಿಂದ ಕೇಳಿದರೆ, “ಏನಿಲ್ಲ ಕಣೇ, ಇನ್ನು ಆರುಳು ಮರುಳು ವಯಸ್ಸಾಯ್ತು, ಎನ್ನುತ್ತಿದ್ದರು. ಆದರೆ ಗಂಡ ಒಬ್ಬರೇ ದೊರೆತಾಗ ಮಾತ್ರ, ಹೃದಯದ ದುಗುಡ ಪನ್ನು ಹರಿಯಬಿಡುತ್ತಿದ್ದರು. ಆಗ ಕೃಷ್ಣಪ್ಪನವರು ಕೊಡುತ್ತಿದ್ದ ಭರವಸೆಯೊಂದೇ “ತಾಳು, ದೇವರು ಬಿಟ್ಟು ಹಾಕಲಾರ. ಎಲ್ಲಾ ಸರಿಹೋಗುತ್ತೆ. ಸ್ವಲ್ಪ ತಾಳು.” ಬೆಂಗಳೂರಿಗೆ ಹೊರಡುವ ನಿರ್ಧಾರ ಮಾಡಿದ ಬಳಿಕ ಕೃಷ್ಣಪ್ಪನವರು ಅಡುಗೆ ಮನೆಯಲ್ಲಿದ್ದ ಒಡತಿಯ ಬಳಿಗೆ ಹೋದರು. ಆಪ್ತಾಲೋಚನೆ ಇದ್ದಾಗಲೆಲ್ಲ ಅಲ್ಲಿಗೆ ಬಂದು ಕುಳಿತುಬಿಡುವುದು ಅವರ ಪದ್ಧತಿ. ಆ ಮಾತುಕತೆಗೆ ಪೀಠಿಕೆಯಾಗಿ ಅವರು ಕೇಳುತ್ತಿದ್ದ ಪ್ರಶ್ನೆಯೊಂದಿತ್ತು; ಏನ್ಮಾಡ್ತೀಯಾ?” ಅಂತ. ಆದರೆ ಈ ದಿನ ಅವರಿಂದ ಆ ಪ್ರಶ್ನೆ ಬರಲಿಲ್ಲ. ಕುಳಿತವರು ಒಂದು ಕ್ಷಣ ಮೌನವಾಗಿದ್ದು ಬಳಿಕ ಹೇಳಿದರು: