ಈ ಪುಟವನ್ನು ಪರಿಶೀಲಿಸಲಾಗಿದೆ

ಕ್ಷೋಭೆ

ಗಾಳಿ
ಮಲ್ಲಿಗೆ ಕಂಪ ಮೂಸಿತ್ತು ನನಗಿಂತ ಬಲು ಮೊದಲೆ.
ಕೊಠಡಿಯುದ್ದಕು ಹರಿಯಿತೊಂದು ಕರೆಂಟು!
ಗಾಳಿಯೊಳು ಕುಣಿದು ತೋರಿದರೆನಗೆ ನೂರು ಜೋಡಿಗಳಾಗ ವಾಲ್ಟ್ಜ್ ಕುಣಿತದ
ಜೈಲರಿನ ಸೊಂಟದೊಳು ತುಂಟ ಬೀಗದ ಕೈಯ ಗೊಂಚಲದೊ ಮೂಕ!-ಘಳಿಗೆ ಸರಿಗಮ ಮಿಡಿ
ಅದಕೆ ಬಂದಿಯ ಹೃದಯ ಕುಣಿವುದುಂಟು.
ನೂರು ಯೋಜನದಾಚೆ ಗಾಳಿಯಿಡುತಿರೆ ದಾಳಿ
ಸ್ಪಂದಿಸಿದೆ ರೇಡಿಯೋ ಬರುವ ಕ್ಷೇಭೆಯ ಮೊದಲ ತೊದಲುನುಡಿ ನುಡಿದು!

ಗಾಳಿ ಕಳವಳ ನುಡಿಯೆ ತಲೆಯನೆತ್ತಿಗೆ ನಾನು ಪುಸ್ತಕದ
ಸಾಲುಸಂಕೋಲೆಯಿಂದ
ಬಿಸವಂದ!
ಬಿಸವಂದ!
ತೆರೆದ ಬಾಗಿಲನೊರಗಿ ನಿಂತ ಹರೆಯದ ಹೆಣ್ಣ
ಮಾಟ ತುಂಬಿತು ಕಣ್ಣ.
ಘಳಿಗೊಳದ ನೀರಿನೊಳಗಣ ನೆರಳು
ಈ ತರಳೆ!
ತನ್ನರಿವ ಮಂದಿರದ ಹೊಸ್ತಿಲೊಳು ನಿಂತಿರುವ ತೂಗು ಮನಸಿನ ಕನಸು