ಈ ಪುಟವನ್ನು ಪರಿಶೀಲಿಸಲಾಗಿದೆ

ಕೋಭೆ ೫

ಸ್ಕೂಲು, ಕಾಲೇಜುಗಳ ಕಕ್ಕಸಿನ ಗೋಡೆಯೊಳು ರಾರಾಜಿಸುವ ಚಿತ್ರ ನುಡಿವಂಥ ಕಾಮ!

ಯಾವ ರಾಕ್ಷಸ ಕೈ
ಬರೆದ ಚಲನ ನಿಯಮವೋ! ಎದೆಯಂತು
ತಿದಿಯಂತೆ
ಹಿಗ್ಗಿದೆ,
ಕುಗ್ಗಿದೆ!
ಕಡಲ ಮೈ
ಒಡಲಿನುಬ್ಬರವಿಳಿತ.
ಎಂಥ ನಿಟ್ಟುಸಿರೆಳೆತ!
ಗೋಡೆ, ಛಾವಣಿ, ಕಿಟಕಿ, ಕುರ್ಚಿ ಮೇಜುಗಳೆಲ್ಲ
ತೂಗಿವೆ,
ಬಾಗಿವೆ!
ಮುಗಿಲು ನೆಲಗಳ ನಡುವೆ ಉಯ್ಯಲೆಯೊಳಾಡಿವೆ!


ಚಿಟ್ ಚಿಟಾ! ಚಿಟ್ ಚಿಟಾ!
ಇದು ಸದ್ದು ಚಿಗುಟ!
ವಿಷ್ಣವಾದ
ಅನುಭವದ
ಘಳಿಗೆಯಾದರು ಏನು?
ಎಲ್ಲಿ
ಕೈ ಗಡಿಯಾರ?
ಢಢಗಾ! ಢಗ್‌ಢಗಾ
ಕೆಳ ಶ್ರುತಿಯ ಡಮರುಗ
ಇಲ್ಲಿ, ಇಲ್ಲಿ!
ಆಗ ಹೊಳೆಯಿತು ನನಗೆ ವಾಚು ಕ್ಲಾಕಾಯ್ದೆಂದು!