ಈ ಪುಟವನ್ನು ಪರಿಶೀಲಿಸಲಾಗಿಲ್ಲ.

00 ಏಳು ಸುತ್ತಿನ ಕೋಟೆ ಹತ್ತು ರೂಗಳ ತೆತ್ತ ನನ್ನೆದೆಯ ಮರುಕ ನೈವೇದ್ಯ ಬಡಜನಕೆ! (ಯಾರಿವನು ತಿರುಕ? ನಿಜಕು ಸೋಮಾರಿಗಳು ನಮ್ಮ ಜನ ಕಂಡೆಯ? ಅದಕೆ ಇಂತಹ ದುಸ್ಥಿತಿಯೊಳಿಹುದು ಇಂಡಿಯ!) ತಾಳ ಹೊಡೆಯಿತು ಬೂಟು ಟಾರು ರಸ್ತೆಯ ಮೇಲೆ, ಥಕಥಕಿಟ, ಥಕತಕದ ಬೆನ್ನು ಹಿಡಿದೇ ನಡೆದ ಕೊಡು-ಮೂರು-ಕಾಸನ್ನು ದೋಸೆ ವಾಸನೆ ಹಗ್ಗ ಹಿಡಿದೆಳೆಯಿತು ಕೂಗು ಜಗುಲಿಗೆ ಮರಳಿ ನನ್ನೆಡೆಗೆ ಹೊರಳಿತು. ಬೆಳೆದವನ ಮೈ ತೊಗಲು ಎಳೆಯ ಎಲುಬಿಗೆ ಅಂಗಿ; ದೊಗಲೆ, ಬಲು ದೊಗಲೆ! ಜಗದ ಶತಮಾನಗಳ ಅಳಲ ಮಲೆ ಎಲುಬಿರದ ಬೆನ್ನ ಮೇಲೆ. ಗೂನು ಬೆನ್ನಿನ ಜೊತೆಗೆ ಅವನ ಎದೆಯೂ ಗೂನು! ಕರಿಮೋಡ, ಬಿಳಿ ಮೋಡ, ಗಿಡ ಮೋಡ, ಗುಡಿ ಮೋಡಗಳು ಗುಡಿಸೆ ಗಾಳಿ ಸೊರಕೆಯ ಬಾನು. ನಿಜಕು ಬೆತ್ತಲು ನೋಡ! ನೋವು ನಲಿವು, ಸೋಲು ಗೆಲವು, ಒಲವು ಚೆಲುವು ಏನೊಂದು ಇರದ ಇದು ಲಕ್ವ ಹೊಡೆದವನ ರಸಶೂನ್ಯ ವದನ! ಇವನು, ದಿಟ, ಸ್ಥಿತಪ್ರಜ್ಞ ದುಃಖೇಷ್ಟನುದ್ವಿಗ್ನ ಮನಾಃ ಸುಖೇಷು ವಿಗತಪ್ಪಹಃ ವೀತರಾಗ ಭಯಕ್ರೋಧಃ.... ಇವನ ನೋಡಿಯೆ ವ್ಯಾಸ ಬರೆದನದನ!