ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲೆಗಾರ-ಕನಸು ಒಂದೆ ಹಂಬಲನ್ನು ಸ್ವರ್ಗವಾಸಿಗರುಹುತಿತ್ತು. ಮಂಜು ಗೋಡೆ ನಡುಗಿದೆ. (ಏನು ಇರದು ಆ ಕಡೆ!) ಮಂಜು ಹಿಂಜರಿಯುತ್ತಿದೆ. (ಏನದೇನು ಆ ಕಡೆ? ಗಿಡವೆ, ಗುಡಿಯೆ?) ಮಂಜುತೆರೆಯು ಕಳಚಿ ಬಿತ್ತು! ಏನದೇನು ಎದುರುಗಡೆ! ಕಲಾವಿದನ ಕರೆಯನೊಪ್ಪಿ ಕಲ್ಲು ಹಡೆದ ಸುಂದರ! ಅಳಿಯ ದೀಪಾವಳಿಗೆ ಮನೆಗೆ ಬರುವನು ಎಂದು ಅರಿತ ಹೆಣ್ಣಿನ ತಂದೆ ತೆರದಿ ಗಾಳಿ ಓಡಾಡತೊಡಗಿರಲು ಸಂಭ್ರಮದಲ್ಲಿ ದೆಸೆದೆಸೆಗು ಸುಖವಾರ್ತೆ ಹರಡಿ. ಮುತ್ತೈದೆ ಕೋಗಿಲೆಯು ಅರೆಮರೆತ ಹಾಡನ್ನು ನೆನಪಿಗೆಳೆತರುತಿರಲು ಹಾಡಿ ಹೊಳೆಯ ಮಗ್ಗುಲ ಬಳ್ಳಿ ಮುಂಗುರುಳ ತಿದ್ದುತಿರೆ ಹೊಳೆವ ಕನ್ನಡಿಯಲ್ಲಿ ಮೊಗವ ನೋಡಿ ಮದುಮಗಳು ನಂದನದ ಮಂದಾರಕುಸುಮವನು ಹೆರಳ ದುಂಡಿನ ಸುತ್ತ ಇಟ್ಟು ಹಿಗ್ಗಿನೊಳು ಕುಳಿತಿರಲು ನಲ್ಲ ಬರುವನು ಎಂದು ಹಸುರ ಪತ್ತಲವೊಂದನ್ನುಟ್ಟು ಜಿಂಕೆ ಆನಂದದೊಳು ಥಕಥಕನೆ ಕುಣಿಯಿತು ನೆಲವುಳಿದ ಎಳೆ ಮೊಲವು ಮೇಲ್ವೆಗೆಯಿತು! ತಾಪಸಿಯ ಮೈಯುದ್ದ ಹೊಳೆ ಮಿಂಚು ಹರಿದಾಡೆ ಅವನು ಅಚ್ಚರಿಯಲ್ಲಿ ಕಣ್ಣು ತೆರೆದ. ಕಡಲ ನೀರ ತರಂಗ ಕಡೆದ ಬೆಳೊರೆಯಂತೆ ನಗುತ ದೇವನು ಭಕ್ತನಿದಿರು ನಿಂತ