ಈ ಪುಟವನ್ನು ಪರಿಶೀಲಿಸಲಾಗಿದೆ

ಒಂದು ಉತ್ಕೃಷ್ಟ ಲೇಖನದ ಗುಣಗಳೇನು?

ಸಾಮಾನ್ಯವಾಗಿ ಒಂದು ಉತ್ಕೃಷ್ಟ ಲೇಖನವು ೫ ಅಂಶಗಳನ್ನು ಹೊಂದಿರುತ್ತವೆ:

  • ಓದಲು ಮತ್ತು ಅರ್ಥೈಸಿಕೊಳ್ಳಲು ಸುಲಭವಾದ ಮುಖ್ಯವಾಹಿನಿಯನ್ನು ಅದು ಹೊಂದಿರುತ್ತವೆ.
  • ಅದಕ್ಕೆ ಒಂದು ಸ್ಪಷ್ಟವಾದ ಸ್ವರೂಪವಿರುತ್ತದೆ.
  • ಸಮತೋಲನ ಹೊಂದಿರುತ್ತದೆ.
  • ತಟಸ್ಥ ಶೈಲಿಯ ವಸ್ತು ವಿಷಯಗಳಿರುತ್ತವೆ.
  • ಅತ್ಯುತ್ತಮ ಆಧಾರ ಮೂಲಗಳನ್ನು ಹೊಂದಿರುತ್ತವೆ.


YesY ಲೇಖನದ ಮುಖ್ಯವಾಹಿನಿಯ ಸಾರಾಂಶವು ಸುಲಭವಾಗಿ ಅರ್ಥವಾಗುವಂತೆ ಇರಬೇಕು. ಉದಾಹರಣೆಗೆ ಒಬ್ಬರ ಆತ್ಮಚರಿತ್ರೆಯೊಂದರಲ್ಲಿ ಅವರು ವಾಸ ಮಾಡಿದ ಸ್ಥಳ ಮತ್ತು ಅವರು ಏತಕ್ಕೆ ಪ್ರಸಿದ್ಧರಾಗಿದ್ದಾರೆ ಎಂಬುದನ್ನು ತಿಳಿಸುವುದು ಮುಖ್ಯ. ಬದಲಿಗೆ ಅವರ ಬಾಲ್ಯಜೀವನದ ಕುರಿತ ಮಾಹಿತಿಯನ್ನು ಮತ್ತೊಂದು ಪರ್ಯಾಯ ಅಂಕಣದಲ್ಲಿ ಬಳಸುವುದು ಸೂಕ್ತವಾಗಿರುತ್ತದೆ.


YesY ಸ್ವರೂಪ ಪಾರದರ್ಶಕವಾಗಿರಬೇಕು. ಅಲ್ಲಿ ಹಲವಾರು ಮುಖ್ಯಅಂಶಗಳು, ಅಧೀನ ಅಂಶಗಳು,ಚಿತ್ರಪುಟಗಳು ಹಾಗೂ ಪಟ್ಟಿಗಳು ಸಮರ್ಪಕವಾಗಿ ಕ್ರಮವಾಗಿ ಜೋಡಿಸಲ್ಪಟ್ಟಿರಬೇಕು.ಆಧಾರಗಳು ಮತ್ತು ಅನುಬಂಧಗಳು ಅಂತ್ಯದಲ್ಲಿ ಬಂದಿರಬೇಕು. ಹಲವಾರು ಲೇಖನಗಳಲ್ಲಿ ವಸ್ತು ವಿಷಯಗಳು ಕಾಲಾನುಕ್ರಮದಲ್ಲಿ ಜೋಡಿಸಲ್ಪಟ್ಟಿರಲೇಬೇಕಾಗಿರುತ್ತದೆ.


YesY ವಿಷಯವೊಂದರ ಬೇರೆ ಬೇರೆ ದೃಷ್ಟಿಕೋನಗಳು ಸಮತೋಲಿತವಾಗಿ ಜೋಡಿಸಲ್ಪಟ್ಟಿರಬೇಕಾಗಿರುತ್ತದೆ. ಯಾವುದೇ ಒಂದು ದೃಷ್ಟಿಕೋನವು ಇಲ್ಲಿ ಮುಖ್ಯವಾಗಿರುವುದಿಲ್ಲ. ಎಲ್ಲಾ ದೃಷ್ಟಿಕೋನಗಳ ಮೂಲಕವೂ ಸಮಚಿತ್ತ ಸಾಧಿಸಲಾಗಿರುತ್ತದೆ. ಮುಖ್ಯವಾದ ಅಂಶಗಳು ಲೇಖನದಲ್ಲಿ ಮುಖ್ಯವಾದ ಭಾಗ ಪಡೆದಿರುತ್ತವೆ.


YesY ವಸ್ತು ವಿಷಯದ ಪ್ರಸ್ತಾಪ ತಟಸ್ಥವಾಗಿರುತ್ತದೆ. ಲೇಖನಗಳು ಸಂಶಯಾಸ್ಪದವಾಗಿರಬಾರದು. ಆ ವಿಷಯದ ಕುರಿತ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸದಂತಿರಬೇಕು.ಬೇರೆ ಬೇರೆ ದೃಷ್ಟಿಕೋನಗಳು ಸಮತೋಲಿತವಾಗಿರಬೇಕು. ಹೀಗೆ ಬಳಸಿಕೊಳ್ಳುವ ಮೂಲಕ ಧನಾತ್ಮಕ ಮತ್ತು ಋನಾತ್ಮಕ ಚಿಂತನೆಗಳೆರಡನ್ನು ತೋರಿಸುವಂತಿರಬೇಕು. ಒಳ್ಳೆಯ ಲೇಖನಗಳು ತಟಸ್ಥ ಭಾಷೆಯನ್ನು ಬಳಸುತ್ತವೆ ಮತ್ತು ಸತ್ಯಕ್ಕೆ ಹೆಚ್ಚು ಒತ್ತು ನೀಡುತ್ತವೆ.


YesY ಬಳಸಿಕೊಂಡಿರುವ ಆಧಾರಗಳ ಬಗ್ಗೆ ಮೂಲಗಳ ಬಗ್ಗೆ ಸಮಸ್ತ ಮಾಹಿತಿ ಇರಬೇಕು. ಒಳ್ಳೆಯ ಲೇಖನಗಳು ಅಂತ್ಯದಲ್ಲಿ ಸಾಕಷ್ಟು ಅಡಿಟಿಪ್ಪಣಿಗಳನ್ನು ಹೊಂದಿರುತ್ತವೆ. ಒಂದು ಪ್ರಕಟಣೆಯಲ್ಲಿ ಅದು ಪಡೆದ ಮಾಹಿತಿ ಕುರಿತು ಹಲವಾರು ಕೊಂಡಿಗಳು ಇದ್ದರೆ ಅದು ಓದುಗರಲ್ಲಿ ಒಂದು ಧನಾತ್ಮಕ ಚಿಂತನೆ ಮೂಡಿಸುತ್ತದೆ. ಒಬ್ಬನು ಒಂದು ವಿಷಯ ಕುರಿತು ಸಾಕಷ್ಟು ಚಿಂತಿಸಿ ಅದನ್ನು ಬರೆದಿದ್ದಾನೆ ಎಂಬುದನ್ನು ಸಾಬೀತು ಪಡಿಸುತ್ತದೆ. ಲೇಖನ ಚಂದ್ರನ ಕುರಿತಾಗಿದ್ದರೆ ಅದು ನಾಸಾ ವೆಬ್‍ಸೈಟಿಗೆ ಕೊಂಡಿಯನ್ನು ಹೊಂದಿರಬೇಕು. ಬದಲಿಗೆ ಆ ವಿಷಯದ ಕುರಿತು ತಿಳಿಯದ ಯಾರೋ ಅಂತರಿಕ್ಷಶಾಸ್ತ್ರ ಉತ್ಸಾಹಿ ಬ್ಲಾಗಿಗೆ ಕೊಂಡಿಯನ್ನು ಹೊಂದಿರಬಾರದು.