ಈ ಪುಟವನ್ನು ಪ್ರಕಟಿಸಲಾಗಿದೆ

ವಿಜ್ಞಾನದ ವಿಷ

೧೦೯

ತೊಡಗಿತು. ರಾಜುವಿನ ಹೃದಯದಲ್ಲಿಯ ಹೊಯ್ದಾಟ ಆ ಸಹಸ್ರಾರು ಮುದುಕಿಯರ ಭೀಕರ ಕೂಗಿಗೆ ಹೆಚ್ಚಾಯಿತು. ಅದೇ ಹುಚ್ಚಿನಲ್ಲಿ ರಾಜ ತನ್ನ ಖುರ್ಚಿಯನ್ನು ಬಿಟ್ಟೆದ್ದ. ಜನ ಅವನನ್ನೇ ದಿಟ್ಟಿಸತೊಡಗಿದರು. ರಾಜನ ಕಣ್ಣೆದುರಿನಲ್ಲಿ ಮತ್ತೆ ನಿರುದ್ಯೋಗಿ ಪುತ್ರರನ್ನು ಕಳೆದುಕೊಂಡ ಮುದುಕ ಮಾತೆಯರ ಭೀಕರ ತಂಡ ಕಾಣಿಸಿದಂತೆ ಭಾಸವಾಯಿತು. ಆಗ ಪೂರ್ಣ ಎಚ್ಚರದಪ್ಪಿದ ರಾಜ, ಟೇಬಲ್ಲಿನ ಮೇಲಿರಿಸಿದ ಯಂತ್ರದ ಮಾದರಿಯನ್ನು ತನ್ನ ಎಡಗಾಲ ಬೂಟಿನಿಂದ ಒದೆದು ಬಿಟ್ಟ. ಯಂತ್ರ ಮುರಿದು ತುಂಡುತುಂಡಾಗಿ ಬಿದ್ದಿತು. ಕೂಡಿದ ಜನ ದಿಗ್ಗಾಂತರಾದರು. ಆ ಮಶಿನ್ನಿನ ಬಿದ್ದ ತುಂಡುಗಳು ಗಹಗಹಿಸಿ ನಕ್ಕು, ತನ್ನನ್ನು ಅಣಕಿಸುವಂತೆ ಭಾಸವಾಯಿತು.

"ಪಶು, ರಾಕ್ಷಸ– ಧಿಕ್ಕಾರ!" ಬಿದ್ದ ತುಂಡುಗಳ ಸಪ್ಪಳದಲ್ಲಿ ಈ ಶಬ್ದಗಳು ರಾಜನ ಕಿವಿಗೆ ಕೇಳಿಸುತ್ತಿದ್ದುವು.