ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಹೊಸ ಬೆಳಕು

೭ ಘಂಟೆಗೆ ರೇಡಿಯೋದಲ್ಲಿ ನನ್ನ ಲೆಕ್ಟರ್ ಇದೆ. ನನಗೆ ಹೋಗಲೇಬೇಕಾಗಿದೆ!"

"ಇನ್ನು ಮತ್ತೆ ತೊಂದರೆ ಕೊಡಬಯಸುವುದಿಲ್ಲ. ಶಾಂತವಾಗಿ ಕೇಳು!”
“ನೋಡು, ಒಬ್ಬರ ಮೇಲೆ ಭಾರವಾಗಿರೋದು ಚೆನ್ನಾದುದಲ್ಲ ! ”
“ಅದಕ್ಕೇನು ಮಾಡಬೇಕಂತೀರಿ ? "
ನಾನು ಸರಿಯಾಗಿದ್ದಾಗಿನ ದಿನಗಳನ್ನು ಜ್ಞಾಪಿಸಿಕೊಳ್ಳು ! ”
ವಿಧವೆ ಆದವಳು ತನ್ನ ತುರುಬಿದ್ದಾಗಿನ ದಿನಗಳನ್ನು ಜ್ಞಾಪಿಸಿಕೊಂಡು ಅತ್ತರೇನು ಬರೋದು ?”
“ನೀನು ಹೇಳುವುದು ನಿಜ; ಆದರೆ ನನ್ನ ಅಪಘಾತವಾದ ಮೇಲೆ ನಾನು ಆಸ್ಪತ್ರೆಯಲ್ಲಿದ್ದೆ. ನೀನು ನನಗಾಗಿ ೩-೩|| ತಿಂಗಳು ಕಣ್ಣೀರನ್ನು ಕೋಡಿಯಾಗಿ ಹರಿಸಿದ್ದೆ. ಆ ಅಪಾಯದಿಂದ ನಾನು ಜೀವದಿಂದ ಉಳಿಯದಿದ್ದರೆ, ಭಾಂವಿಯಲ್ಲಿ ಬಿದ್ದು ಸಾಯುವೆನೆಂದು ಪಣ ತೊಟ್ಟಿದ್ದೆ. "
“ನೀವನ್ನೋದೇನು ? ನಾನು ಈಗ ಹೋಗಿ ಭಾಂವಿಯಲ್ಲಿ ಬೀಳಲ್ಯಾ? "
“ತ್ರಿಕಾಲಕ್ಕೂ ಆಗದು !"
"ಮತ್ತೇನು ? "
“ಅಂದಿನ ಪ್ರತಿಜ್ಞೆ ಜ್ಞಾಪಿಸಿಕೊ. ಇಂದಿನ ನಿನ್ನ ನಡತೆಯನ್ನು ದಯವಿಟ್ಟು ವಿಮರ್ಶಿಸಿ ನೋಡು ! ”
“ಸೆರೆಯ ಮಬ್ಬಿನಲ್ಲಿ ಮನುಷ್ಯ ಏನೇನೋ ಒದರಾಡುತ್ತಾನೆ. ಏರು ಜವ್ವನವೂ ಒಂದು ಮಾದಕ ಪೇಯ. ಪ್ರೇಮಭರದಲ್ಲಿಯ ಪ್ರತಿಜ್ಞೆ ಅದು. ಒಬ್ಬ ಮನುಷ್ಯ ಸತ್ತಾಗ, ಎದೆ ಎದೆ ಬಡೆದುಕೊಂಡು ಅಳುವ ಅವನ ಬಳಗವೇ ಅವನ ವರ್ಷಶ್ರಾದ್ಧದ ದಿನ ನಗುತ್ತ ಕೆಲೆಯುತ್ತ ಊಟ ಮಾಡುವುದನ್ನು ನಾವು ನೋಡುತ್ತಿಲ್ಲವೇ ?"

"ನೀನು ಪುತಿಜ್ಞೆ ಮಾಡಿದ್ದಕ್ಕೂ ನನ್ನ ಅಭ್ಯಂತರವಿಲ್ಲ. ಅದರಂತೆ ನಡೆಯಬೇಕೆನ್ನುವಷ್ಟು ಮೂರ್ಖನೂ ನಾನಲ್ಲ ! - ನನಗಾವ ಬೇರೆ ಬಳಗವೂ