ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಹೊಗೆಯಿಂದ ಹೊರಗೆ

ಅವರ ಮಗ ಹೊಸದಾಗಿ ನಡೆದ ಈ ಕುರುಕ್ಷೇತ್ರ ಚಟುವಟಿಗೆಯಲ್ಲಿ ಬಲಿ ಹೋಗಿದ್ದಾನೆ. ಅದಕ್ಕೆಯೇ ಇವರಿಗೂ ನಿರ್ವಾಸಿತರ ಮೇಲೆ ತುಂಬ ಮಮತೆ. ತಮ್ಮಿಂದಾದಷ್ಟು ಸೇವೆ ಅವರಿಗೆ ಸಲ್ಲಿಸಬೇಕೆನ್ನುವದು ಅವರ ಇಚ್ಛೆ."

ಆ ನಿರ್ವಾಸಿತ ಕೇಳಿದ: "ಹಾಗಾದರೆ ಇಂದು ಅವರು ಎಲ್ಲರಿಗೂ ತಮ್ಮ ಟ್ರೆಝರಿಯಲ್ಲಿಯ ಹಣವನ್ನು ಎಲ್ಲ ನಿರಾಶ್ರಿತರಿಗೆ ಹಂಚುತ್ತಾರೆಯೇ?"

"ಇಲ್ಲಾ ಮಹಾಸ್ವಾಮಿ, ಅವರೀಗ ದತ್ತು ತೆಗೆದುಕೊಳ್ಳಬೇಕೆಂದು ಇಲ್ಲಿ ಕ್ಯಾಂಪಿಗೆ ಬರುವವರಿದ್ದಾರೆ, ತಮಗೆ ಮನಸ್ಸಿಗೆ ಬಂದ ಹುಡುಗನನ್ನು ಅವರು ದತ್ತು ತೆಗೆದುಕೊಳ್ಳುವವರಿದ್ದಾರೆ. ಅದಕ್ಕೆ ಇದೊಂದು ಲಾಟ್ರಿ ಅಂತ ಹೇಳಿದ್ದು"

ನಿರ್ವಾಸಿತ ಅತ್ಯಾನಂದದಿಂದ ಕೂಗಿದ: "ದೇವರೇ, ನೀನೇ ಅವರ ಬಾಯಲ್ಲಿ ಹೋಗಿ ಕುಳಿತು ನನ್ನನ್ನಾರಿಸಪ್ಪ, ನನ್ನ ಮನೆಯ ಹತ್ತಿರವೇ ಒಂದು ಗುರುದ್ವಾರಾ ಕಟ್ಟಿಸ್ತೇನೆ."

ಆ ನಿರ್ವಾಸಿತನ ಮಾತಿಗೆ ಎಲ್ಲರೂ ಗೊಳ್ಳನೆ ನಕ್ಕುಬಿಟ್ಟರು. ಆ ನಗುವಿನಲ್ಲಿ ಭಾಗವಹಿಸದೇ ಕುಳಿತವನೆಂದರೆ ಜಸವಂತಸಿಂಗನೇ. ಅವನ ಈ ಉದಾಸೀನತೆಗೆ ಒಂದು ಪ್ರಬಲ ಕಾರಣವಿತ್ತು.

ಸರದಾರ ದಯಾಲಸಿಂಗನ ಹುಕುಮಿನಂತೆ ಎಲ್ಲರೂ ತಂತಮ್ಮ ಕೆಲಸದಲ್ಲಿ ತೊಡಗಿದರು. ಜಸವಂತಸಿಂಗ ಮಾತ್ರ ತನ್ನ ಜಾಗೆ ಬಿಟ್ಟು ಕದಲಲಿಲ್ಲ. ಒಂದು ಸಲ ದಯಾಲಸಿಂಗ ಜಸವಂತಸಿಂಗನಿಗೆ ಮೃದುಸ್ವರದಲ್ಲಿ ವಿನಂತಿಸಿಕೊಂಡ, ಪ್ರಯೋಜನವಾಗಲಿಲ್ಲ. ಜಸವಂತಸಿಂಗ ಬಾಯಲ್ಲಿ ಹುಲ್ಲು ಕಡಿಯನ್ನು ಕಚ್ಚಿಕೊಂಡು ಅದನ್ನು ಅತ್ತಿತ್ತ ತಿರುವಾಡುತ್ತ ಹಾಗೇ ಕುಳಿತುಕೊಂಡ. ದಯಾಲಸಿಂಗನಿಗೆ ತುಂಬಾ ಸಿಟ್ಟು ಬಂದಿತು. ಆದರೂ ಆ ಸಿಟ್ಟನ್ನು ಯಾವದೇ ನಿರ್ವಾಸಿತನ ಮೇಲೆ ಪ್ರಯೋಗಿಸುವ ಹಾಗಿರಲಿಲ್ಲ. ಕ್ಯಾಂಪಿನ ನಿಯಮಗಳೇ ಹಾಗಿದ್ದುವು. ಮೊದಲೇ ದುಃಖದಿಂದ ಬಳಲುವ ಜನರಮೇಲೆ ರೇಗಾಡಿ ಅವರ ದುಃಖವನ್ನು ದ್ವಿಗುಣಿತ ನಡುವದು ಒಳ್ಳೆಯದಲ್ಲವೆಂದು ಆ ರೀತಿ ವರಿಷ್ಠರು ನಿಯಮಗಳನ್ನು ಮಾಡಿದ್ದರು. ಒಂದೊಂದು ಸಲ ದಯಾಲಸಿಂಗನ ಸಿಟ್ಟು ಆ ನಿಯಮಗಳನ್ನು ಉಲ್ಲಂಘಿಸಿತ್ತು. ಎಷ್ಟೋ