ಈ ಪುಟವನ್ನು ಪ್ರಕಟಿಸಲಾಗಿದೆ

ಹೊಗೆಯಿಂದ ಹೊರಗೆ

೪೧

ಆತನ ಹಿಂದಿನ ಕತೆಯನ್ನು ತಿಳಿದು ಇದ ಕುತೂಹಲದಿಂದ ದಯಾಲ ಒತ್ತಾಯ ಪಡಿಸತೊಡಗಿದ.

"ನಿನ್ನ ಈ ಉದಾಸೀನತೆಗೆ ಕಾರಣವೇನು? ನಿನ್ನ ಹಿಂದಿನ ಕತೆಯನ್ನಾದರೂ ಹೇಳು.... ”
"ಅದು ಕಥೆಯಲ್ಲ. ಅದೊಂದು ನರಕಯಾತನೆ... ಆದರೆ ಅದೆಲ್ಲ ಈಗೇಕೆ?"
"ಬೇಡ, ಈಗಲೇ ಹೇಳಿಬಿಡು. ನೀನಂತೂ ಮರಣದ ಮಾತನ್ನಾಡುತ್ತಿರುತ್ತಿ ಯಾವಾಗ ಏನಾಗುವಿ ಎಂಬುದು ನಿನಗೇ ಗೊತ್ತಿಲ್ಲ. ಅದರ ಮೊದಲು ನಿನ್ನ ಕತೆಯನ್ನು ನನ್ನೆದುರು ಹೇಳಿಡು... "
"ನಿಜ ನನ್ನ ಕತೆ ಯಾರಿಗಾದರೂ ಹೇಳಲೇಬೇಕು....... ನನ್ನ ದುಃಖವಾದರೂ ಕಡಿಮೆಯಾದೀತು.”
"ಹೌದು. ಬೇಗ ಹೇಳಿ ಮುಗಿಸು, ”

ಜಸವಂತಸಿಂಗ ಕತೆ ಹೇಳಲುತೊಡಗಿದ:

"ಗುರುದಾಸಪೂರವೇ ನನ್ನೂರು. ನಾನು ... ನಮ್ಮ ತಾಯಿ....ನನ್ನ ತಂಗಿ... ರೂಪಕೌರ...."



ಜಸವಂತಸಿಂಗನ ತಂದೆ ಗುರುದಾಸಪೂರ ಜಿಲ್ಲೆಯ ಒಂದು ಹಳ್ಳಿಯ ಜಮೀನುದಾರನಾಗಿದ್ದ. ಆದರೆ ಅವರು ಯಾರಿಗೋ, ಸಾಲದಲ್ಲಿ ಜಾಮೀನುದಾರನಾಗಿ ತನ್ನ ಜಮೀನುಗಳನ್ನೆಲ್ಲ ಕಳೆದುಕೊಂಡಿದ್ದ. ಜಮೀನು ಕಳೆದುಕೊಂಡ ನಂತರ ಅವನು ತನ್ನ ಹೆಂಡತಿಯೊಡನೇ ಗುರುದಾಸಪೂರಕ್ಕೆ ಬಂದು ನೆಲಿಸಿದ. ಅಲ್ಲಿಯೇ ಯಾವದೋ ಒಂದು ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ನಿಂತುಕೊಂಡ. ಆನಂತರವೇ ಜಸವಂತಸಿಂಗ, ರೂಪಕೌರರು ಹುಟ್ಟಿದ್ದು. ಜಸವಂತಸಿಂಗನಿಗಿಂತಲೂ ರೂಪಕೌರ ೩ ವತರುಷ ಚಿಕ್ಕವಳು. ಅವಳು ಒಂದು ವರುಷದವಳಿರುವಾಗಲೇ ತಂದೆ ಕಾಲವಾಗಿದ್ದರು. ಮುಂದೆ ಈ ಮಕ್ಕಳಿಬ್ಬರ ಭಾರ ತಾಯಿಯ ಮೇಲೆ ಬಿತ್ತು. ಆ ಮನೆ ಈ ಮನೆ