ಈ ಪುಟವನ್ನು ಪ್ರಕಟಿಸಲಾಗಿದೆ

ವೈರಾಗ್ಯ-ವೈಯಾರ

೮೩

ರಣಗಳು ಕಳುವಾಗಿದ್ದವು. ನಾಗಪ್ಪ ನರಳುತ್ತಿರುವಂತೆ ನಡುನಡುವೆ ಬಡಬಡಿಸುತ್ತಿದ್ದ.

"ಯಾರ ಒಯ್ದಾರ ನನಗೆ ಗೊತ್ತದು, ನಾ ಎಲ್ಲಾ ಗುರ್ತಾ ಹಿಡಿದೇನಿ."

ಅ೦ದೇ ಮಧ್ಯಾಹ್ನದ ಹೊತ್ತಿಗೆ ಧಾರವಾಡದಿಂದ ಫೌಜದಾರರು, ಪೋಲೀಸರು ಬಂದರು.

ಪತ್ತಾರ ನಾಗಪ್ಪ 'ಕಾಶೀಮ' ನ ಬಗ್ಗೆ ಸಂದೇಹ ವ್ಯಕ್ತಪಡಿಸಿದ. ಕಾಶೀಮನನ್ನು ಚಾವಡಿಗೆ ಕರೆತರಲಾಯಿತು. ಪಾಟೀಲರ ಪರಿಚಯ ನನಗಿದ್ದುದರಿಂದ ತನಿಖೆಗೆ ಪ್ರಾರಂಭವಾದಾಗ ನಾನು ಚಾವಡಿಯಲ್ಲಿಯೇ ಕುಳಿತುಕೊ೦ಡೆ.

ಕಾಶೀಮ ಕೆಳಗೆ ಮುಖ ಮಾಡಿ ನಿಂತುಕೊಂಡಿದ್ದ. ಫೌಜದಾರರು ಪಾಟೀಲರಿಗೆ ಕೇಳಹತ್ತಿದರು:

"ಹ್ಯಾಂಗರಿ ಮನುಷ್ಯ ಇವ?"
"ಊರಾಗ ಬಲು ಉಡಾಳರಿ."
"ಇವನ ಮನಿ, ಮಠ ಮಂದಿ ಯಾರಾದರೂ ಇದ್ದಾರೇನ್ರಿ?"
"ಎಲ್ಲಿದ ಬರಬೇಕ್ರಿ, ಆ ಅಗಸರ ಗಡದ್ಯಾನ ಹೆಂಡ್ತಿ ಎಲ್ಲಿsನ್ನ ಇಟಕೊಂಡನಾರಿ."
"ಅಗಸರ ಎಲ್ಲಿsನ್ನ, ಆಕ್ಯಾರು?"

"ಇದ್ದಾಳರೀ ಒಬ್ಬಾಕಿ, ಊರಾಗ ಹೆಸರು ಗಳಿಸಿದ್ದಾಕಿ, ಅಗಸರ ಗುಡದ್ಯಾ, ಪಾಪ ಸಜ್ಜನ ಮನಸ್ಯಾರಿ. ಇಂಥಾ ವೈಯ್ಯಾರಿ ಕೊಳ್ಳಾಗ ಬಿದ್ದಮ್ಯಾಗ, ಮದುವಿ ಆದ ಮೂರು ದಿನದಾಗ ಎಲ್ಲಿ ಗುಡದ್ಯಾನ್ನ ಬಿಟ್ಟಳು. ಅವನೂ ತನ್ನ ತಾಯಿನ್ನ ಕಟಕೊಂಡು ಬ್ಯಾರಿ ಅದಾನ್ರಿ, ಇದsಟು ನಡದಮ್ಯಾಗ ಎಲ್ಲೀಗೆ ಐದು ಮಕ್ಕಳಾದುವ್ರಿ. ಹೆಸರು ಹೇಳಲಿಕ್ಕೆ ಗಂಡ ಇದ್ದಮ್ಯಾಗ ಇನ್ನೂ ಹತ್ತು ಹುಟ್ಟುವಲ್ಲವು ಅಂತಾನ ಈ ಕಾಶೀಮ."

ಮಾತಿನ ಕೊನೆಯಾಗುತ್ತಲೂ ಫೌಜದಾರರ ಭರಮಪ್ಪ (ಬಾರುಕೋಲು) ಕಾಶೀಮನನ್ನು ಬಿಗಿದಪ್ಪಿತ್ತು.

ತನ್ನ––ಎಲ್ಲವ್ವನ ಸಂಬಂಧ ನಿಜವೆಂಬುದನ್ನು ಕಾಶೀಮ ಅರೆಕ್ಷಣದಲ್ಲಿ