ಕುಸಿಯುವುದೇನೋ ಎನಿಸುತ್ತಿತ್ತು.
ಮೂರು ಫರ್ಲಾಂಗುಗಳ ದೂರ ಸಾಗಲು ಅದೆಷ್ಟು ಹೊತ್ತು
ಹಿಡಿಯಿತೊ?
ಅದೇ ಮನೆ (ಗುಡಿಸಲು). ಯಾರು ಬರುತ್ತಿರುವವರು? ಕರೀಂ?
ಏನಾಯ್ತು?
ಓಡುತ್ತ ಬರುತ್ತಿದ್ದ ಹುಡುಗ.
ಆ_
“ಬಾ ಬಾ!”
ಓ ದೇವರೆ_
“ಗಂಡು ಮಗು!”
“ಹಾ!”
ಬವಳಿ ಬಂದಂತಾಯಿತು ಇಮಾಮ್‌ಸಾಬಿಗೆ. ಪೂರ್ಣಚಂದ್ರನಂತೆ
ಮುಖವಗಲಗೊಂಡಿತು. ಕಣ್ಣುಗಳಿಂದ ಆನಂದಾಶ್ರು ಒಸರಿತು.
ಆತ ಕೈಯನ್ನು ಮುಂದಕ್ಕೆ ಚಾಚಿದ.
ಕರೀಂ ಅದನ್ನು ಹಿಡಿದುಕೊಂಡ.
ಏನನ್ನೋ ಹೇಳುತ್ತಲೇ ಇದ್ದ ಮಗ.
ಏನನ್ನೋ ಹುಚ್ಚು ಸಂತಸದ ತೊದಲು ಮಾತಿನಹಾಗಿತ್ತು ಅದು.
ನಾಲ್ಕು ಹೆಜ್ಜೆ. ಮನೆ.
“ಅಮ್ಮಾಜಾನ್! ಬಾಬಾ ಬಂದ್ರು!”
ಶೇಖರಿಸಿ ಇಟ್ಟಿದ್ದ ಸಕ್ಕರೆಯಿಂದೊಂದು ಚಿಟಕಿ ತೆಗೆದು ಬೀಬಿ ಹೊರಕ್ಕೆ
ಒಡಿಬಂದಳು.
ಇಮಾಮ್‌ಸಾಬಿ ನಿಲ್ಲಲಾಗದೆ, ಗೋಡೆ ಹಿಡಿದು, ಕುಸಿದು ಕುಳಿತಿದ್ದ.
ಬಾಗಿಲ ಚೌಕಟ್ಟಿಗೊರಗಿ.
ಬೀಬಿ ಸಕ್ಕರೆಯನ್ನು ಆತನ ಬಾಯಿಗೆ ಹಾಕಲೆಂದು ಬಾಗಿದಳು.
ಬಾಗಿದವಳೇ ಚೀರಿದಳು.
ಕೆಂಪು ರುಮಾಲು, ನೀಲಿ ಅಂಗಿ, ಕೊಳಕು ಧೋತರ, ಎಲ್ಲವೂ
ಇದ್ದುವು. ತೆರೆದ ಜೇಬಿನಲ್ಲಿ ನಾಣ್ಯಗಳಿದ್ದುವು, _ದಿನದ ಸಂಪಾದನೆಯಿತ್ತು.
ಇಮಾಮ್‌ಸಾಬಿ ಮಾತ್ರ ಇರಲಿಲ್ಲ.
ಪುಟ:KELAVU SANNA KATHEGALU.pdf/೧೦೧
ಈ ಪುಟವನ್ನು ಪರಿಶೀಲಿಸಲಾಗಿದೆ
ಹಮಾಲ ಇಮಾಮ್‌ಸಾಬಿ
79
_೧೯೬೧