ಈ ಪುಟವನ್ನು ಪರಿಶೀಲಿಸಲಾಗಿದೆ

90

ನಿರಂಜನ: ಕೆಲವು ಸಣ್ಣ ಕಥೆಗಳು

ಯಲ್ಲಿ ಗುಂಡು, ಕತ್ತಿಗೆ ನೆಟ್ಟಿರುವ ಈಟಿ. ರಕ್ತ ಹರಿಯುತ್ತಿದೆಯಲ್ಲ? ಹುಟ್ಟಿದ ವನು ಸಾಯಬೇಕೆನ್ನುವುದು ಪ್ರಕೃತಿ ನಿಯಮ? ನಾನು, ನಾನು....)

“ಮಹಾಪ್ರಭೂ..."
ಪಿಸುದನಿ.
ಈ ಸ್ವತ ಪರಿಚಿತ, ಸ್ವಾಮಿನಿಷ್ಠ ಯೋಧನೇ ಇರಬೇಕು.
ಮೆಲ್ಲನೆ ಕಣ್ಣು ತೆರೆದೆ....
ಆತ ತನ್ನ ಮಗ್ಗುಲಲ್ಲಿ ಮಲಗಿದ್ದಾನೆ.
“ಯಾ-ರು?”
“ಅಪ್ಪಣ್ಣ...
ಅಪ್ಪಣ್ಣ-ಬಲ್ಲೆ, ನಂಬುಗೆಯ ಬಂಟ.
“ನೀರೂ....”

****

ಅಪ್ಪಣ್ಣ ತನ್ನ ಬೆನ್ನ ಮೇಲಿದ್ದ ತೊಗಲ ಚೀಲದಿಂದ ದೊರೆಗೆ ನೀರುಣಿ

ಸಿದ-ಸ್ವಲ್ಪ ಸ್ವಲ್ಪವಾಗಿ, ಎರಡು ಗುಟುಕು.

“ಸಾ-ಕು.”
ಅವನು ವರದಿ ಇತ್ತ:
“ನಮಗೆ ಸೋಲು. ಬೇಹುಗಾರ ನಿನ್ನೆ ತಿಳಿಸಿದ್ದು ನಿಜವಲ್ಲ. ರಾತ್ರೆ ವೈರಿ

ಗಳು ನಮ್ಮ ಸಮೀಪದಲ್ಲೇ ಇದ್ರು, ಘಾತವಾಯ್ತು. ಈಗ....ಈಗ...”

“ಏನು?”
“ಪ್ರಭುಗಳು ತಪ್ಪಿಸಿಕೊಂಡು....”
ಆಳ ಆಳಕ್ಕೆ ದೇಹ ಕುಸಿಯುತ್ತಿದ್ದಂತೆ ಕಂಡಿತು.
ತಿಪ್ಪಯ್ಯನ ಸಲಹೆಯನ್ನು ಸ್ವೀಕರಿಸಬೇಕಾಗಿತ್ತು. ಪಾತಾಳವನ್ನು

ಬಿಟ್ಟುದು ತಪ್ಪು. ಮೂರು ಲೋಕಗಳ ಅರಸ ಎನ್ನಬೇಕಾಗಿತ್ತು.

“ನಾ-ನು....ಅವರ....ಕೈಗೆ... ಸಿಗೋದಿಲ್ಲ...ಅ....ಪ್ಪಣ್ಣ...”
ಅಪ್ಪಣ್ಣ ಕಣ್ಣಗಲಿಸಿದ.ಅರಿವು ಮೂಡಿದೊಡನೆ ಆ ಕಣ್ಣುಗಳಿಂದ ಕಾರಂಜಿ

ಗಳು ಪುಟಿದುವು.

“ಪ್ರಭೂ!”
“ಇ-ಷ್ಟು ಕೆಲಸ ಮಾಡಪ್ಪ....ಈ-ಖಡ್ಗವನ್ನ...ಶಿಕಾರಿಪುರಕ್ಕೆ...ಒಯ್ದು

....ದೇವಸ್ಥಾನದಲ್ಲಿ... ಇಡು...ಕೆಲಸ....ಮುಗಿಯಲಿಲ್ಲ.... ಹರಕೆ....ಬಾಕಿ...

ಮೋನ್ಯಾ... ನನ್ನು ....ನೋಡಿಕೋ...ಅವನು... ದೊಡ್ಡವನಾದ್ಮೇಕೆ...ಆ.....