ಈ ಪುಟವನ್ನು ಪ್ರಕಟಿಸಲಾಗಿದೆ

"ಎಣ್ಣೆ!ಚಿಮಿಣಿ ಎಣ್ಣೆ!"

ಸೋಮ ಎಣಿಕೆ ಹಾಕಿದ: ಟಪಾಲು ಬಸ್ಸು ಬಂದಾಗ ಮಾರಿದ ಬೀಡ ೨೧;ಬೇರೆ ಮಾರಾಟ ೯;ಶಾಲೆಯ ಹುಡುಗರು ಕೊಂಡುಕೊಂಡ ಬೀಡಿ ೧೦ ಪೈಯದು; ಚಿಲ್ಲರೆ ಮಾರಾಟ ೬ ಪೈಯದು. ನೆಲಗಡಲೆಗೆ ಗಿರಾಕಿ ಬಂದಿರಲಿಲ್ಲ.ಅಂತೂ ಆ ದಿನ ನಾಲಾಣೆಯ ವ್ಯಾಪಾರವಾಗಿತ್ತು. ಮನೆಯ ವೆಚ್ಚ ನಿರ್ವಹಣೆಗೆ ಸಾಲದು ಆ ಹಣ.ಮತ್ತೆ, ನಾಳೆಯ ವ್ಯಾಪಾರಕ್ಕೆ ಬೀಡಿ ಕೊಳ್ಳಲು ದುಡ್ಡು ಬೇಕು.ಅವನ ಹೆಂಡತಿ ಎರಡನೆಯ ಬಾರಿ ಬಾಣಂತಿಯಾಗುವ ಪ್ರಯತ್ನದಲ್ಲಿ ಒಂದು ವರ್ಶದ ಹಿಂದೆ ಫ್ರಾಣ ಕಳೆದುಕೊಂಡಿದ್ದಳು. ನಿತ್ರಾಣಿಯಾಗಿದ್ದ ಹೆಂಗಸು.. ಅವಳು ಬಿಟ್ಟು ಹೋಗಿದ್ದುದು ಮೂರು ವರ್ಷಗಳ ಹೆಣ್ಣಮಗು. ಸೋಮನ ಜೀವನದ ಉಸಿರಾಗಿ ಅವಳು ಇರುತ್ತಿದ್ದಳು. ದಿನದ ಗಳಿಕೆಯಿಂದ ಬದುಕು ಸಾಗಬೇಕು. ಪಕ್ಕದಲ್ಲಿದ್ದ ರಾಯರ ಭಂಡಸಾಲೆಯಿಂದ ಅವನು ದಿನಕ್ಕೆ ಸಾಲುವಷ್ಟು ಅಕ್ಕಿಯನ್ನೊಯ್ಯುತ್ತಿದ್ದ.

ತಿಂಗಳಿಗೆ ಮೂರು ರೂಪಾಯಿ ಬಾಡಿಗೆಯ ಅಂಗಡಿ, ಮುಂಜಾನೆ ಮಗಳೊಡನೆ ಬರುತ್ತಿದ್ದ, ಅವಳಿಗೆ ಆಗಾಗ್ಗೆ ಒಂದೆರಡು ನೆಲಗಡಲೆ ಕಾಳುಗಳ ತಿನಿಸು. ಅವರಿಬ್ಬರೂ ಮನೆಗೆ ವಾಪಸಾಗುವುದು ಸಂಜೆಗೆ.

ತನ್ನ ಪತ್ನಿಯೊಡನೆ ಸೋಮನ ಸಂಸಾರ ಸಾಗುತ್ತಿದಾಗ ಎಂಜಿನಿಯರರ ಬಂಗಲೆಯಲ್ಲಿ ಕಸಗುಡಿಸುವ ಕೆಲಸವಿತ್ತು ಸೋಮನಿಗೆ .ತಿಂಗಳಿಗೆ ಐದು ರೂಪಾಯಿ ಸಂಬಳ. ಯುದ್ಧ ಶುರುವಾದ ಮೇಲೆ ಅವನು ಯಾರ ಹಂಗೂ ಇಲ್ಲದ ಸ್ವತಂತ್ರ ಅಂಗಡಿಕಾರನಾದ. ಹೆಂಡತಿ ಇದ್ದಿದ್ದರೆ, ತನ್ನ ಸ್ವ-ಉದ್ಯೋಗ ಕಂಡು ಎಷ್ಟು ಸಂತೋಷಪಡುತ್ತಿದ್ದಳೋ-ಎಂದು ಸೋಮ ಒಮ್ಮೊಮ್ಮೆ ಉದ್ಗಾರವೆತ್ತುತ್ತಿದ್ದ.

ಬೀಡಿ ಸೇದುವವರಿಗಾಗಿ ಚಿಕ್ಕದೊಂದು ಮಿಣಿಮಿಣಿ ದೀಪವನ್ನು ಅಂಗಡಿಯಲ್ಲಿ ಹಚ್ಚಿಡಬೇಕು. ಅದಕ್ಕೂ ಮನೆಯಲ್ಲಿ ರಾತ್ರಿ ಕೊಂಚ ಹೊತ್ತು ಉರಿಸುವುದಕ್ಕೂ ಚಿಮಿಣಿ ಎಣ್ಣೆ ಬೇಕು . ವಾರಕ್ಕೊಂದು ಬಾಟಲಿ ಎಣ್ಣೆ ಸೋಮ ಕೊಳ್ಳು