ಈ ಪುಟವನ್ನು ಪರಿಶೀಲಿಸಲಾಗಿದೆ

20 ನಿರಂಜನ: ಕೆಲವು ಸಣ್ಣ ಕಥೆಗಳು ರಾಣಿಯರು ಬಾಳಿನಲ್ಲಿ ಸುಖ ಕಾಣಲಿಲ್ಲ. ವಿಕಾಸವಿಲ್ಲದ ಪರಿಮಳವಿಲ್ಲದ ಪುಷ್ಪಗಳಾದರು. ಬಡತನ ಅವರ ಸಂತೋಷವನ್ನು ಕೆಡಿಸಿತು. ಇದ್ದ ಹೊಲವನ್ನು ಜಹಗೀರುದಾರ ಕಸಿದುಕೊಂಡ. ಔಡುಗಚ್ಚಿ ನೌಜವಾನ ಶೇಕ ಕೂಗಾಡಿದ: - “ಎಂಥ ಅಬ್ಬರ! ಎಂಥ ದರ್ಪ! ನೋಡೋಣ-ಇದಕ್ಕೂ ಒಂದು ಕೊನೆ ಇದೆ.ಒಂದಲ್ಲ ಎಂದು ದಿನ ಇದನ್ನು ನಿಲ್ಲಿಸೇನು.. ನನ್ನ ಈ ಬಿಗಿ ಮುಷ್ಟೈಯಲ್ಲಿ ಶಕ್ತಿ ಇಲ್ಲ? ನನ್ನ ಈ ತೋಳುಗಳಲ್ಲಿಸಾಮರ್ಥ್ಯವಿಲ್ಲ? ಹುಂ ಹುಂ!" ಅವನಪ್ಪ ಮುದುಕ ಖುದಾ ಪರವರ್ದಿಗಾರ್! ನನ್ನ ಮಗನ ಬಾಯಿಂದ ಏನು ಮಾತಾಡಿಸುತ್ತಿದ್ದಿ?ನನ್ನ ಶೇರ್ ನಿಂದ ಏನು ಮಾಡಿಸುತ್ತಿದ್ದಿ?" ಎಂದು ಚಿಂತಿಸಿದ. ಕೊನೆಗೊಮ್ಮೆಆ ದಿನ ಬಂದಿತು! ఆ ರಾತ್ರೆ, ಅಮಾವಾಸ್ಯೆಯ ನಡು ವಿರುಳಿನಲ್ಲಿ, ದಲ್ ಸರೋವರವನ್ನು ದಾಟ ಪ್ರದೇಶದ ಯುವಜನ ಅತ್ತ, ಕಡೆ ಇದ್ದ ರಾಜರ ಬೀಡಿನ ಮೇಲೆ ಏರಿ ಹೋಗುವರು! ಕಾಶ್ಮೀರದಲ್ಲಿ ಕ್ರಾಂತಿ ಯಾಗಿತ್ತಂತೆ. ಶ್ರೀನಗರದ ಬೀದಿ ರಕ್ತಕಾಲುವೆಯಾಯಿತಂತೆ. ಪೋಲೀಸರೂ ಸಂಪು ಹೂಡಿದರಂತೆ. ಮಿಲಿಟರಿಯವರು ಹೆಂಗಸರು ಗಂಡಸರು ಮಕ್ಕಳ ತಲೆಗಳನ್ನು ಚೆಂಡಾಡಿದರಂತೆ. ಹಿಂದಿನ ವರ್ಷ ಅವರ ಊರಿಗೆ ಬಂದಿದ್ದ 'ಕಾಶ್ಮೀರದ ಸಿಂಹ? ಅಬ್ದುಲ್ಲಾನನು ಮಹಾರಾಜರು ಸೆರೆ ಹಿಡಿದರಂತೆ. ಊರು-ಊರು ಗಳಲ್ಲಿ ಬಂಡಾಯವೆದು ರೈತರು ಸ್ವತಃ ತಮ್ಮ ಜಹಗೀರುದಾರರನ್ನು ಕೈದು ಮಾಡಿದರಂತೆ-ಹೀಗೆ ಎಷ್ಟೋ ಸುದ್ದಿ ಕಿವಿಯಿಂದ ಕಿವಿಗೆ ಹಾಯ್ದು ಆ ಊರಿಗೆ ಬಂತು. ತಮ್ಮ ಹೊಲಕ್ಕೆ ತಾವೊಡೆಯರಾಗಬಹುದೆಂದು ರೈತರು ಹುಚ್ಚರಾದರು. ಮುದುಕ ಮುದುಕಿಯರು " ಮುಂದೇನಾಗುತ್ತದೆ? ಮುಂದೇನಾಗುತ್ತದೆ ?” ಎಂದು ತವಕಗೊಂಡರು. ಯುವಕ ರೈತರುಒಬ್ಬರ ಮುಖವನ್ನೊಬ್ಬರು ನೋಡಿದರು. ಒಬ್ಬರು ಒಂದು ಮಾತನ್ನೂ ಆಡಲ್ಲಿಲ್ಲ್ಸ, ಪ್ರತಿಯೊಬ್ಬರ ಕರ್ತವ್ಯ ಎಲ್ಲರಿಗೂ ತಿಳಿದಿತ್ತು. ......ಯಾವಾಗಲೂ ಒಂದು ಸಣ್ಣ ನಿದ್ದೆಯಾಗುವ ಹೊತ್ತು ಕಳೆಯುವುದ ರೊಳಗೆ ಊರ ಗಂಡಾಳುಗಳು ತಟಾಕದ ದಂಡೆಯಲ್ಲಿ ಬಂದು ಕೂಡ ಬೇಕಾಗಿತ್ತು. ಮಲಗಿದ್ದ ಪುಟಾಣಿಯ ಹಣೆಯನ್ನು ಚುಂಬಿಸಿ, ಜೈನಬಿಯನ್ನು ಎದೆ ಗವಚಿಕೊಂಡು, ಆ ಮುದ್ದು ಮುಖವನ್ನು ಎರಡೂ ಕೈಗಳಿಂದ ಸವರಿ, “ಬರುತ್ತೇನೆ ಜಾನ್, ನಾಳೆ ಬೆಳಗಾಗುವುದರೊಳಗಾಗಿ ಬರುತ್ತೇನೆ” ಎಂದು